ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ಕಾಂಪೌಂಡ್‌ ನಿರ್ಮಿಸಲು ಮಕ್ಕಳನ್ನು ಆಳುಗಳಾಗಿ ಬಳಸಿದ ಗುತ್ತಿಗೆದಾರ

By Nayana
|
Google Oneindia Kannada News

ಕೊಪ್ಪಳ, ಆಗಸ್ಟ್ 6: ಸರ್ಕಾರಿ ಶಾಲೆಗಳಲ್ಲಿ ಸಾಮಾನ್ಯವಾಗಿ ಶ್ರಮಧಾನ ಇನ್ನಿತರೆ ಸ್ವಚ್ಛತಾ ಕೆಲಸಗಳಿಗೆ ಮಕ್ಕಳನ್ನು ಬಳಕೆ ಮಾಡುವುದು ನೋಡಿದ್ದೇವೆ ಅದು ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವಿರಲಿ ಎನ್ನುವ ಕಾರಣಕ್ಕೆ ಮಾತ್ರ. ಆದರೆ ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಕೂಲಿಕಾರ್ಮಿಕರ ಬದಲು ಮಕ್ಕಳನ್ನು ಶಾಲೆಯ ಕಾಂಪೌಂಡ್‌ ನಿರ್ಮಿಸಲು ಬಳಕೆ ಮಾಡಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಣಗೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿಯ ಸರ್ಕಾರಿ ಶಾಲೆಯ ಕಾಂಪೌಂಡ್‌ ನಿರ್ಮಿಸಲು ಗ್ರಾಮ ಪಂಚಾಯ್ತಿ 5 ಲಕ್ಷ ರೂ ಅನುದಾನ ನೀಡಿತ್ತು. ಇದರಲ್ಲಿ ಕೂಲಿ ಕಾರ್ಮಿಕರನ್ನು ಕರೆತಂದು ಕಾಂಪೌಂಡ್‌ ನಿರ್ಮಿಸಬಹುದಿತ್ತು. ಆದರೆ ಭಾನುವಾರ ಗುತ್ತಿಗೆದಾರ ಶರಣಪ್ಪ ಶಾಲಾ ಮಕ್ಕಳನ್ನೇ ಕೂಲಿಕಾರ್ಮಿಕರ ರೀತಿ ನಡೆಸಿಕೊಂಡಿದ್ದಾನೆ. ಇದಕ್ಕೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Students used as labor in school compound construction

ಮಕ್ಕಳನ್ನು ಶಾಲೆಗೆ ಓದಲು ಕಳುಹಿಸುತ್ತೇವೆ ಆದರೆ ಇಂತಹ ಕೆಲಸಗಳನ್ನು ಮಾಡಿಸುತ್ತಾರೆ, ಪೆನ್ನು, ಪೇಪರ್‌ ಹಿಡಿಯುವ ಕೈಯಲ್ಲಿ ಹಾರೆ, ಗುದ್ದಲಿ ಕೊಟ್ಟಿದ್ದಾರೆ, ಆದರೆ ಈ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಶಾಲೆಗೆ ಬಂದು ಮಕ್ಕಳಿಗೆ ಕೆಲಸಕ್ಕೆ ಬರುವಂತೆ ಯಾರೂ ಕೂಡ ಕರೆದಿಲ್ಲ. ಭಾನುವಾರ ಶಾಲೆಗೆ ರಜೆ ಇರುತ್ತದೆ ಮಕ್ಕಳು ಏನು ಮಾಡಿದ್ದಾರೆ ಎಂದು ತನಗೆ ಗೊತ್ತಿಲ್ಲ ಎಂದು ಶಾಲಾ ಮುಖ್ಯೋಪಧ್ಯಾಯ ರೇಣುಕಪ್ಪ ತಿಳಿಸಿದ್ದಾರೆ.

ಜಿಟ್ಟಿನಕಟ್ಟಿ ಶಾಲಾ ಮಕ್ಕಳಿಗೆ ತೆಂಗಿನ ಚಪ್ಪರದ ಶೆಡ್ಡೇ ಬೋಧನಾ ಕೊಠಡಿ!ಜಿಟ್ಟಿನಕಟ್ಟಿ ಶಾಲಾ ಮಕ್ಕಳಿಗೆ ತೆಂಗಿನ ಚಪ್ಪರದ ಶೆಡ್ಡೇ ಬೋಧನಾ ಕೊಠಡಿ!

ಗುತ್ತಿಗೆದಾರ ಕೂಡ ಅದೇ ಊರಿನವನಾಗಿದ್ದು, ಹಣ ಉಳಿಸಲು ಕೂಲಿ ಕಾರ್ಮಿಕರ ಬದಲು ಈ ಮಕ್ಕಳನ್ನು ಬಳಸಿಕೊಂಡಿದ್ದಾನೆ ಇದರ ಕುರಿತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Many parents have alleged and agitated against contractor who was used students as labors at Vanageri village of Yelburga taluk in Koppal district for construction of school compound.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X