ಕೊಪ್ಪಳ ರಾಯರ ಮಠದ ಆಸ್ತಿ ವಿವಾದ: ಸುಬುಧೇಂದ್ರ ಶ್ರೀಗಳ ವಿರುದ್ಧ ಭಕ್ತರಿಂದ ಪ್ರತಿಭಟನೆ
ಕೊಪ್ಪಳ, ಮಾರ್ಚ್, 28: ಕೊಪ್ಪಳ ರಾಘವೇಂದ್ರ ಮಠದ ಆಸ್ತಿ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಕೊಪ್ಪಳದ ರಾಯರ ಮಠ ಮಂತ್ರಾಲಯದ ಪೀಠಕ್ಕೆ ಸೇರಿದೆ ಎಂಬ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳ ಹೇಳಿಕೆಯನ್ನು ಖಂಡಿಸಿ ಬುಧವಾರ ಮಧ್ಯರಾತ್ರಿ ಕೊಪ್ಪಳದ ರಾಯರ ಮಠದ ಭಕ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ರಾಯರ ಮಠದಲ್ಲಿ ಆಯೋಜನೆಗೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ಶ್ರೀಗಳು ಬುಧವಾರ ರಾತ್ರಿ ನಗರಕ್ಕೆ ಆಗಮಿಸಿದ್ದರು. ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡುವಾಗ, ಕೊಪ್ಪಳದ ರಾಯರ ಮಠ ಮಂತ್ರಾಲಯದ ಪೀಠಕ್ಕೆ ಸೇರಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿಯಿವೆ ಎಂದು ಹೇಳಿದ್ಧಾರೆ.

ಅಲ್ಲದೆ, ಮಠಕ್ಕೆ ನೂತನವಾಗಿ ಟ್ರಸ್ಟ್ ರಚನೆ ಮಾಡಬೇಕು. ಟ್ರಸ್ಟ್ ಸಮಿತಿಯಲ್ಲಿ ಯಾರು ಇರಬೇಕು ಎನ್ನುವ ಪಟ್ಟಿಯನ್ನು ನೀಡಿ. ಅದರಲ್ಲಿ ಟ್ರಸ್ಟ್ ಸಮಿತಿಯಲ್ಲಿ ಯಾರು ಇರಬೇಕು ಎಂಬ ಬಗ್ಗೆ ತೀರ್ಮಾನ ಮಾಡಿತ್ತೇವೆ. ಮಠ ಶಿಥಿಲಗೊಂಡಿದ್ದು, ನಾವು ಹಣ ನೀಡಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದರು.
ಸುಬುಧೇಂದ್ರ ತೀರ್ಥರ ಈ ಹೇಳಿಕೆಯನ್ನು ಭಕ್ತರಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಕೊಪ್ಪಳದ ರಾಯರ ಮಠದ ವಿವಾದವು ಬುಧವಾರ ರಾತ್ರೋ ರಾತ್ರಿ ಭುಗಿಲೆದಿದೆ. ಕೊಪ್ಪಳದ ರಾಘವೇಂದ್ರ ಮಠವನ್ನು ಮಂತ್ರಾಲಯದ ಮಠದ ಸುರ್ಪದಿಗೆ ಹಂತ ಹಂತವಾಗಿ ಪಡೆಯಲು ಹುನ್ನಾರ ನಡೆಸಿದ್ದಾರೆ ಆರೋಪಿಸಿದ್ಧಾರೆ. ಅಲ್ಲದೆ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶ್ರೀಗಳ ವಿರುದ್ಧ ಭಕ್ತರಿ ಪ್ರತಿಭಟನೆ ನಡೆಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ತೀರ್ಥರು, ನಾನೂ ಯಾವುದೇ ವಿವಾದಾತ್ಮಕ ಹೇಳಿಕೆಯನ್ನೂ ನೀಡಿಲ್ಲ. 1971ರಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಕೊಪ್ಪಳದ ರಾಘವೇಂದ್ರ ಮಠವನ್ನು ಸುಪರ್ದಿಗೆ ಕೊಟ್ಟ ದಾಖಲೆಗಳು ಇವೆ ಎಂದು ಹೇಳಿದರು. ಈ ಹಿನ್ನೆಲೆ ಗುರುವಾರ ಸಂಜೆಯವರೆಗೆ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಸುಬುಧೇಂದ್ರ ತೀರ್ಥರು ರದ್ದುಗೊಳಿಸಿದ್ದಾರೆ.
ಇಂದು ನಡೆಬೇಕಿದ್ದ ರಾಯರ ಮಠದಲ್ಲಿಯ ಕಾರ್ಯಕ್ರಮಗಳೆಲ್ಲವನ್ನು ರದ್ದುಗೊಳಿಸಿ, ಮುಂದಿನ ದಿನದಲ್ಲಿ ಮತ್ತೊಮ್ಮೆ ಬಂದು ಕಾರ್ಯಕ್ರಮ ಮಾಡುವೆ ಎಂದು ಮಂತ್ರಾಲಯದ ಶ್ರೀಗಳು ಮಠದ ಒಳಗಡೆ ಬರದೆ ಹೊರಗೆ ಇರುವ ಹನುಮನ ದರ್ಶನ ಪಡೆದು ಮರಳಿ ತಮ್ಮ ವಾಹನವನ್ನು ಏರಿ ಹೊರಗಡೆ ನಡೆದದರು.












Click it and Unblock the Notifications