ಸಿದ್ದರಾಮಯ್ಯ ಪಾಕಿಸ್ತಾನ ಬೆಂಬಲಿಗ: ಪ್ರಹ್ಲಾದ ಜೋಶಿ ಆರೋಪ
ಕೊಪ್ಪಳ, ಜನವರಿ 31: ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನ ಬೆಂಬಲಿಗರಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಟೀಕಿಸುತ್ತಿರುವುದಕ್ಕೆ ಸಂಸದ ಪ್ರಹ್ಲಾದ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಮಿತ್ ಷಾ ವಿರುದ್ಧದ ಎಲ್ಲಾ ಪ್ರಕರಣಗಳು ಖುಲಾಸೆಯಾಗಿದೆ ಈ ಕುರಿತು ಸಿಬಿಐ ಅಮಿತ್ ಷಾ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದೆ. ಹೀಗಾಗಿ ಸಿದ್ದರಾಮಯ್ಯ ಇನ್ನುಮುಂದೆ ಅಮಿತ್ ಷಾ ಅವರನ್ನು ಜೈಲಿಗೆ ಹೋದವರು ಎಂದು ಟೀಕಿಸುವ ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದರು.
ಇದೇ ವೇಳೆ ಸಿದ್ದರಾಮಯ್ಯ ಮಹಾದಾಯಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದನ್ನು ಕಟುವಾಗಿ ಟೀಕಿಸಿದ ಮಹಾದಾಯಿ ನದಿ ಎಲ್ಲಿ ಹರಿಯುತ್ತಿದೆ ಎಂಬ ವಿಚಾರವೇ ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲ ಆದರೂ ಮಹಾದಾಯಿ ವಿಚಾರಕ್ಕಾಗಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಾಟಾಳ್ ನಾಗರಾಜ್ ಒಬ್ಬ ಕಾಂಗ್ರೆಸ್ ಏಜೆಂಟ್, ರಾಜ್ಯ ಸರ್ಕಾರದ ಅಣತಿಯಂತೆ ಮೋದಿ ಮತ್ತು ಅಮಿತ್ ಷಾ ಬಂದಾಗ ಬಂದ್ ಗೆ ಕರೆ ನೀಡುತ್ತಿದ್ದಾರೆ. ಇದು ಯಾವ ನ್ಯಾಯ, ಅಲ್ಲದೇ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ನಾವಲ್ಲ. ಕಾಂಗ್ರೆಸ್ . ಅದಕ್ಕೆ ಸಾಕ್ಷಿ ಕೇವಲ ಅಲ್ಪ ಸಂಖ್ಯಾತರ ಪ್ರಕರಣ ಹಿಂಪಡೆಯಲು ಆದೇಶ ಮಾಡಿರುವುದಾಗಿದೆ ಎಂದು ದೂರಿದರು.












Click it and Unblock the Notifications