Janardhana Reddy: ಜಗದೀಶ್ ಶೆಟ್ಟರ್ ಬಳಿಕ ಜನಾರ್ದನ ರೆಡ್ಡಿ: ಮತ್ತೆ ಬಿಜೆಪಿಗೆ ಸೇರುತ್ತಾರೆ ಗಣಿದಣಿ
ಮತ್ತೆ ತವರು ಪಕ್ಷ ಬಿಜೆಪಿಗೆ ಗಣಿದಣಿ ಜನಾರ್ದನ್ ರೆಡ್ಡಿ ಸೇರುತ್ತಾರೆ ಎನ್ನುವ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಲೇ ಇವೆ. ಆದರೆ ಈ ಬಗ್ಗೆ ಇಂದು ಸ್ವತ: ಜನಾರ್ದನ್ ರೆಡ್ಡಿ ಅವರೇ ಸುಳಿವು ನೀಡಿದ್ದಾರೆ.
ಕೆಆರ್‌ಪಿಪಿ ಸಂಸ್ಥಾಪಕ, ಶಾಸಕ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಸೇರುತ್ತಾರೆ ಎಂಬ ಮಾತು ಹೆಚ್ಚಾಗುತ್ತಿದ್ದಂತೆ ಜನಾರ್ದನ್ ರೆಡ್ಡಿ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಹೌದು... ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಳಿಕ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷ ಸೇರಿಸಿಕೊಳ್ಳಲು ಸದ್ದಿಲ್ಲದೆ ಆಪರೇಷನ್ ನಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಬೆಂಬಲಿಸುತ್ತೇವೆಂದು ಹೇಳುವ ಮೂಲಕ ಜನಾರ್ದನ ರೆಡ್ಡಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಬಿಜೆಪಿ ಪಕ್ಷಕ್ಕೆ ಸೇರುವ ಬಗ್ಗೆ ಯಾವುದೇ ಚರ್ಚೆಗಳು ಆಗಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದರಿದ್ದೇವೆ ಎಂದು ಅವರು ಹೇಳಿದ್ದರು.
ಬಿಜೆಪಿ ಪಕ್ಷ ಈಗಾಗಲೇ ಜಗದೀಶ್ ಶೆಟ್ಟರ್ ಅವರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಜನಾರ್ದನ ರೆಡ್ಡಿ ಅವರನ್ನೂ ತನ್ನತ್ತ ಸೆಳೆಯುವ ಯೋಜನೆ ರೂಪಿಸಿದೆ. ಕೆಆರ್‌ಪಿಸಿ ಸಂಸ್ಥಾಪಕ, ಶಾಸಕ ಜನಾರ್ದನ ರೆಡ್ಡಿಯನ್ನ ಮರಳಿ ಬಿಜೆಪಿಗೆ ಕರೆತರಲು ತೆರೆಮರೆ ಕಸರತ್ತು ನಡೆಸಿದೆ ಎನ್ನಲಾಗುತ್ತಿದೆ. ಇದರ ನಡುವಿನ ಕೊಂಡಿಯಾಗಿ ಗೆಳೆಯ ಶ್ರೀರಾಮುಲು ಕೆಲಸ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆದಿವೆ.
ಈ ಹಿಂದೆ ಸುದ್ದಿಗಾರರು ಹೇಳುವ ಪ್ರಶ್ನೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಬಿಜೆಪಿಗೆ ವಾಪಸ್ ಬರುತ್ತಾರೆ. ಈ ಬಗ್ಗೆ ನಾವೂ ಕೂಡ ಚರ್ಚೆ ಮಾಡುತ್ತಿದ್ದೇವೆ. ಯಾರು ಪಕ್ಷ ಬಿಟ್ಟು ಹೋಗಿದ್ದಾರೋ ಅವರನ್ನು ವಾಪಸ್ ಕರೆತರುವಂತ ಪ್ರಯತ್ನ ಮಾಡಲಾಗುತ್ತಿದೆ. ಹೊಸಬರೂ ಕೂಡ ಬಿಜೆಪಿ ಪಕ್ಷ ಸೇರ್ತಾರೆ ಎಂದಿದ್ದರು.
ಇನ್ನೂ ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿ ಜೊತೆ ಸೇರಿಸಿಕೊಂಡು ಅವರನ್ನು ಕೊಪ್ಪಳ ಕ್ಷೇತ್ರದಿಂದ ಕಣಕ್ಕಿಸುವ ಪ್ಲ್ಯಾನ್ ಬಿಜೆಪಿ ಮಾಡಿದೆ ಎನ್ನಲಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಇದ್ದ ಅಭಿಪ್ರಾಯ ಜನಾರ್ದನ ರೆಡ್ಡಿಗೆ ಬದಲಾಗಿದೆ. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಮೋದಿ ಅವರನ್ನು ಕೊಂಡಾಡಿದ್ದ ಅವರು ಬಿಜೆಪಿಯೊಂದಿಗೆ ತಮ್ಮ ಪಕ್ಷ ವಿಲೀನಗೊಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications