ಹುಬ್ಬಳ್ಳಿ-ಗಂಗಾವತಿ ಸೇರಿ ಹಲವು ರೈಲುಗಳ ಸಂಚಾರ ಆರಂಭ

ಕೊಪ್ಪ್ಳಳ, ಜೂನ್ 28; ಕೋವಿಡ್ 2ನೇ ಅಲೆ ಹೆಚ್ಚಾದ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಈಗ ಹಲವು ರೈಲುಗಳ ಸಂಚಾರ ಪುನರಾರಂಭವಾಗಿದೆ.

ಹುಬ್ಬಳ್ಳಿ-ಗಂಗಾವತಿ ಎಕ್ಸ್‌ಪ್ರೆಸ್ ವಿಶೇಷ ರೈಲು ಜೂನ್ 28ರಿಂದ ಆರಂಭವಾಗಿದೆ. ಜುಲೈ 29ರಿಂದ ಗಂಗಾವತಿಯಿಂದ ಈ ರೈಲು ಸಂಚಾರ ಆರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊಸಪೇಟೆ-ಹರಿಹರ ವಿಶೇಷ ರೈಲು ಜೂನ್ 29ರಿಂದ ಹೊಸಪೇಟೆಯಿಂದ, ಜೂನ್ 30ರಿಂದ ಹರಿಹರದಿಂದ ಆರಂಭವಾಗಲಿದೆ. ಈ ರೈಲುಗಳಿಗೆ ಪ್ರಯಾಣಿಕರು ರೈಲು ನಿಲ್ದಾಣದಲ್ಲಿಯೇ ಟಿಕೆಟ್ ಪಡೆದು ಪ್ರಯಾಣಿಸಬೇಕು.

Hubballi-Gangavathi Train Service Resumed

ಜೂನ್ 28ರಿಂದ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ ಆರಂಭವಾಗಿದೆ. ಜೂನ್ 30ರಿಂದ ಬೆಂಗಳೂರಿನಿಂದ ಹುಬ್ಬಳ್ಳಿಗೆ ರೈಲು ಸಂಚಾರ ನಡೆಸಲಿದೆ.

ಜೂನ್ 29ರಿಂದ ಕೆಎಸ್ಆರ್‌ ಬೆಂಗಳೂರು-ಹೊಸಪೇಟೆ ರೈಲು ಸಂಚಾರ ಆರಂಭಿಸಲಿದೆ. ಜೂನ್ 30ರಿಂದ ಹೊಸಪೇಟೆಯಿಂದ ಬೆಂಗಳೂರಿಗೆ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ರೈಲುಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಪಡೆಯಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ನೈಋತ್ಯ ರೈಲ್ವೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+