ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Gavi Siddeshwara Jatra: ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸಳೆದ ಕಲಾಕೃತಿಗಳು, ಇಲ್ಲಿದೆ ವಿವರ

By ಕೊಪ್ಪಳ ಪ್ರತಿನಿಧಿ
|
Google Oneindia Kannada News

ಕೊಪ್ಪಳ, ಜನವರಿ, 15: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಈ ಬಾರಿ ತೋಟಗಾರಿಕೆ ಇಲಾಖೆಯು ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವು ತುಂಬಾ ಆಕರ್ಷಣೀಯವಾಗಿದೆ. ಅದಲ್ಲೂ ಈ ಬಾರಿ ಕಾಂತಾರ ಫಲಪುಷ್ಪ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

Recommended Video

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ‌ ಬಗ್ಗೆ ಇತಿಹಾಸ ಏನ್ ಹೇಳುತ್ತೆ? ಈ ಜಾತ್ರೆಯ ಮಹತ್ವ ಏನು? | Oneindia Kannada

ಕೊಪ್ಪಳದ ಅಜ್ಜನ ಜಾತ್ರೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದ 'ಕಾಂತಾರ' ಸಿನಿಮಾದ ಪಂಜುರ್ಲಿ ದೈವ ಬಗೆಬಗೆಯ ಹೂಗಳಲ್ಲಿ ಅರಳಿದೆ. ಬೃಹತ್ ಕಾಡಿನ ಗಿಡ ಮರಗಳ ಮಧ್ಯೆ ಬಣ್ಣಬಣ್ಣದ ಪುಷ್ಪಗಳಲ್ಲಿ 'ದೈವ' ರೂಪ ತಾಳಿದ್ದಾನೆ. ಅಲ್ಲದೇ ಇತ್ತೀಚೆಗೆ ಲಿಂಗೈಕ್ಯರಾದ ಪರಮ ಪೂಜ್ಯ ನಡೆದಾಡುವ ದೇವರು ಎಂದೇ ಪ್ರಸಿದ್ದರಾಗಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ, ಭಾವಚಿತ್ರದ ಸುತ್ತ ಫಲಪುಷ್ಪವಿಟ್ಟು ನಮನ ಸಲ್ಲಿಸಲಾಗಿದೆ.

Gavi Siddeshwara Jatra: Specialty of this year flower show

ಗಮನ ಸೆಳೆದ ಫಲಪುಷ್ಪ ಪ್ರದರ್ಶನ
ಇನ್ನು ಕರ್ನಾಟಕದ ನಕಾಶೆಯಲ್ಲಿ ಕರ್ನಾಟಕ ರತ್ನ, ನಟ ಡಾ.ಪ್ರನೀತ್ ರಾಜ್‌ಕುಮಾರ್‌ ಮೂಡಿ ಬಂದಿದ್ದು, ಇದನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ತೋಟಗಾರಿಕೆ ಪಿತಾಮಹ ಡಾ.ಎಂ. ಎಚ್.ಮರಿಗೌಡ ಭಾವಚಿತ್ರ ಹಾಗೂ ಪುತ್ಥಳಿಯನ್ನು ಚೆಂಡು ಹೂಗಳಲ್ಲಿ ಅಲಂಕರಿಸಲಾಗಿದೆ. ನೋಡುಗರಿಗೆಲ್ಲ ಪ್ರಸಕ್ತ ನೂತನ ವರ್ಷದ ಶುಭಾಶಯಗಳನ್ನು ಹಸಿರು ಹೊದಿಕೆ ಮೇಲೆ ಬರೆದು ಕೋರಲಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಮಹನೀಯರ ಕಲಾಕೃತಿಗಳು ಮೂಡಿದ್ದು, ಜನರ ಗಮನ ಸೆಳೆದವು. ಹಾಗೆಯೇ ಶ್ರೀಗವಿಸಿದ್ಧೇಶ್ವರ ರಥ, ಎಪಿಜೆ ಅಬ್ದುಲ್ ಕಲಾಂ, ವಲ್ಲಭಭಾಯಿ ಪಟೇಲ್ ಹಾಗೂ ಇತರ ಮಹಾನ್ ನಾಯಕರ ಚಿತ್ರಗಳು ಕಲ್ಲಂಗಡಿಯಲ್ಲಿ ತಯರಾಗಿವೆ.

Gavi Siddeshwara Jatra: Specialty of this year flower show

ಗುಲಾಬಿ ಹೂಗಳಲ್ಲಿ ಅರಳಿದ ಅಪ್ಪು
ಅಷ್ಟೇ ಅಲ್ಲದೇ ವಿವಿಧ ಮಾದರಿಯ ಅಲಂಕಾರಿಕ ಗಿಡಗಳ ಜೋಡಣೆ, ಕ್ಯಾಕ್ಟಸ್ ಮಾದಿ, ವರ್ಟಿಕಲ್ ಮಾದರಿ, ಕೋನಾಕಾರ ಅಲಂಕಾರಿಕ ಗಿಡಗಳು, ಬೋನ್ಸಾಯ್ ಹಾಗೂ ಹುಲ್ಲಿನ ಮಾದರಿಯ ನೀರಿನ ಜಲಪಾತ ಇಲ್ಲಿ ಅನಾವರಣಗೊಂಡಿವೆ. 'ಕಾಂತಾರ' ಚಲನಚಿತ್ರದಲ್ಲಿನ ದೈವದ ಮಾದರಿ ಸ್ತಬ್ಧಚಿತ್ರವನ್ನು ಕಾರ್ನೇಶನ್, ಆರ್ಚೇಡ್ಸ್, ಆಂಥೇರಿಯಮ್, ಗ್ಲಾಯಿಯೋಲಸ್, ಟೂಬೋಸ್, ಜರ್ಬೆರಾ, ಕಾಕ್ಸ್‌ ಕಾಂಬ್, ಡೇಸಿ ಹಾಗೂ ವಿವಿಧ ಪುಷ್ಪಗಳಿಂದ ನಿರ್ಮಿಸಲಾಗಿದ್ದು ಇದು ಪ್ರದರ್ಶನದ ಕೇಂದ್ರಬಿಂದುವಾಗಿದೆ. ಡಾ. ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಹಳದಿ ಮತ್ತು ಕೆಂಪು ಗುಲಾಬಿ ದಳದಿಂದ ಕರ್ನಾಟಕ ನಕ್ಷೆಯಲ್ಲಿ ಸಿದ್ಧಪಡಿಸಲಾಗಿದ್ದು, ಇದು ನೋಡುಗರ ಕಣ್ಮನ ಸೆಳೆಯುತ್ತಿದೆ.

English summary
Gavi Siddeshwara Jatra: Specialty of this year flower show in Gavi Siddeshwara Jatra of koppal, Here see Specialty of this year flower show,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X