ವಿವಾಹಕ್ಕೆ ಹೋದ ಮೂವರು ಪೊಲೀಸರಿಗೆ ಕಡ್ಡಾಯ ರಜೆ!
ಕೊಪ್ಪಳ, ಜುಲೈ 20; ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ರಾಜಕೀಯ ಮುಖಂಡನ ಪುತ್ರನ ಮದುವೆಯಲ್ಲಿ ಪಾಲ್ಗೊಂಡಿದ್ದ ಮೂವರು ಪೊಲೀಸರನ್ನು ಕಡ್ಡಾಯ ರಜೆ ಮೇಲೆ ತೆರಳು ಆದೇಶ ನೀಡಲಾಗಿದೆ.
ಕೊಪ್ಪಳ ಎಸ್ಪಿ ಟಿ. ಶ್ರೀಧರ್ ಮಂಗಳವಾರ ಈ ಕುರಿತು ಆದೇಶ ನೀಡಿದ್ದಾರೆ. ಗಂಗಾವತಿ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಮತ್ತು ಕನಕಗಿರಿ ಪಿಎಸ್ಐ ತಾರಾಬಾಯಿ ವಿವಾಹದಲ್ಲಿ ಪಾಲ್ಗೊಂಡಿದ್ದರು.
ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಹನುಮೇಶ ನಾಯಕ ಪುತ್ರ ಆನಂದ ನಾಯಕ ವಿವಾಹ ಕನಕಗಿರಿಯ ತಾಲೂಕಿನಲ್ಲಿ ಜುಲೈ 18ರಂದು ನಡೆದಿತ್ತು. ಮೂವರು ಅಧಿಕಾರಿಗಳು ಪೊಲೀಸ್ ಸಮವಸ್ತ್ರದಲ್ಲಿಯೇ ವಿವಾಹದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಪ್ರಸಾರವಾಗಿದ್ದವು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಐಜಿಪಿ ನಿರ್ದೇಶನದ ಅನ್ವಯ ಮೂವರು ಪೊಲೀಸರನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ.
2015ರಲ್ಲಿ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ನಡೆದಿತ್ತು. ಕೊಪ್ಪಳ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಈ ಹತ್ಯೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಸಿಐಡಿ ಈ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
ಕೊಲೆ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹನುಮೇಶ ನಾಯಕ ಸಹ ಪ್ರಕರಣದಲ್ಲಿ ಆರೋಪಿ. ಈತನ ಪುತ್ರನ ವಿವಾಹದಲ್ಲಿ ಪೊಲೀಸರು ಸಮವಸ್ತ್ರ ಧರಿಸಿ ಪಾಲ್ಗೊಂಡಿದ್ದರು.
-
Bengaluru Property: ಬೆಂಗಳೂರಿನ ಈ ಆಸ್ತಿಗಳ ಪರಿಶೀಲನೆಗೆ ಟಾಸ್ಕ್ ಫೋರ್ಸ್ ರಚನೆ: ಜಿಬಿಎ -
ಕಾರ್ಮಿಕ ನಾಯಕ ಅನಂತಸುಬ್ಬರಾವ್ ನಿಧನ: ಅಪ್ಪ ಸತ್ತ ನೋವಿನಲ್ಲೂ KSRTC ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಮಗಳು -
UGC Regulations: 2026ರ ಯುಜಿಸಿ ನಿಯಮಾವಳಿ ಜಾರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ -
ಡಿಕೆ ಶಿವಕುಮಾರ್ ಸೋಲಿಸಲು ದಳಪತಿಗಳು ಬಿಗ್ ಪ್ಲಾನ್, ಕನಕಪುರ ಕ್ಷೇತ್ರದಿಂದ ದೇವೇಗೌಡರ ಕುಡಿ ಕಣಕ್ಕೆ? -
Karnataka Summer: ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಭಾರೀ ಬಿಸಿಲು, ನೀರಿನ ಅಭಾವ ಸಾಧ್ಯತೆ -
Gold Rate Jan 29: ಚಿನ್ನದ ಬೆಲೆ ಒಂದೇ ದಿನ 11,770 ರೂ. ಹೆಚ್ಚಳ: 4 ಲಕ್ಷ ರೂ. ಗಡಿದಾಟಿದ ಬೆಳ್ಳಿ ಬೆಲೆ ಜ.29ರ ಚಿನ್ನ - ಬೆಳ್ಳಿ -
Karnataka Weather: ಕರ್ನಾಟಕದಲ್ಲಿ ಚಳಿ ಪ್ರಮಾಣ ಇಳಿಕೆ, ಜನವರಿ 29ರ ಹವಾಮಾನ ವರದಿ ಇಲ್ಲಿದೆ -
Govt Employee: ಕರ್ನಾಟಕದ ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್: ಈ ದಿನಗಳಲ್ಲಿ ಖಾದಿ ಉಡುಪು ಏನಿದು ಚರ್ಚೆ -
ಗೂಗಲ್ನಲ್ಲಿ ಕೆಲಸ ಕಲಿಯುವ ಸುವರ್ಣಾವಕಾಶ! 2026ರ ಇಂಟರ್ನ್ಶಿಪ್ಗೆ ಅರ್ಜಿ ಆಹ್ವಾನ - ಅರ್ಹತೆಗಳೇನು ಗೊತ್ತಾ? -
ಗೂಗಲ್ ಮ್ಯಾಪ್ಸ್ಗೆ ಸೆಡ್ಡು ಹೊಡೆದ ಬೆಂಗಳೂರಿನ 'ಲ್ಯಾಟ್ಲಾಂಗ್': ಭಾರತದ ವಿಳಾಸ ಪತ್ತೆ ಹೆಚ್ಚುವಲ್ಲಿ 4 ಪಟ್ಟು ಹೆಚ್ಚು ನಿಖರ -
ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಅಮೆರಿಕಾ ನೌಕರನ ಹೋಂಡಾ ಆಕ್ವೀವಾ ಮೇಲಿದೆ ಒಂದಲ್ಲ, ಎರಡಲ್ಲ 2,00,000 ರೂಪಾಯಿಗೂ ಅಧಿಕ ದಂಡ -
ಜನವರಿ 29 ರ ದಿನ ಭವಿಷ್ಯ; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ












Click it and Unblock the Notifications