ಜೈಶ್ರೀರಾಮ್‌ ಹೇಳುವಂತೆ ಅಂಧ ಮುಸ್ಲಿಂ ವೃದ್ಧನಿಗೆ ಹಲ್ಲೆ, ಗಡ್ಡಕ್ಕೆ ಬೆಂಕಿ

ಕೊಪ್ಪಳ, ಡಿಸೆಂಬರ್‌ 1: ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಇತ್ತೀಚೆಗೆ 62 ವರ್ಷದ ದೃಷ್ಟಿದೋಷವುಳ್ಳ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

ಗಂಗಾವತಿ ಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ದೂರುದಾರ ಹುಸೇನ್ ಸಾಬ್ ಅವರು, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನನ್ನನ್ನು ಬಲವಂತವಾಗಿ ಬೈಕ್‌ಗೆ ಹತ್ತಿಸಿಕೊಂಡು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನವೆಂಬರ್ 25 ರ ಮಧ್ಯರಾತ್ರಿ ತನ್ನ ಮೇಲೆ ಹಲ್ಲೆ ನಡೆಸಿದ ನಂತರ ದುಷ್ಕರ್ಮಿಗಳು ತಮ್ಮ ಹಣವನ್ನು ಕಿತ್ತುಕೊಂಡು ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

attack on blind Muslim old man to tell Jai shree ram in koppal

ಘಟನೆಯ ಬಗ್ಗೆ ಮುಸ್ಲಿಂ ಸಮುದಾಯದ ಜನರು ತಿಳಿದ ನಂತರ ನವೆಂಬರ್ 30 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಯುವಕರು ತನ್ನನ್ನು ನಿಂದಿಸಿದ್ದು ಮಾತ್ರವಲ್ಲದೆ ತಮ್ಮ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರು. ಅವರು ನನ್ನನ್ನು ಕೊಲ್ಲುವ ಉದ್ದೇಶ ಹೊಂದಿದ್ದರು. ಬಿಯರ್ ಬಾಟಲಿಯಿಂದ ನನ್ನ ಮೇಲೆ ಹಲ್ಲೆ ನಡೆಸಿ ನನ್ನ ತಲೆಯನ್ನು ಕಲ್ಲಿನಿಂದ ಒಡೆದು ಹಾಕಲು ಯತ್ನಿಸಿದರು. ನೆರೆಹೊರೆಯಲ್ಲಿದ್ದ ಜನರು ನನ್ನ ರಕ್ಷಣೆಗೆ ಬಂದರು ಎಂದು ಹುಸೇನ್ ಸಾಬ್ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ಪೊಲೀಸ್ ಅಧಿಕಾರಿಗಳು, ಹಣವನ್ನು ಕಳ್ಳತನ ಮಾಡುವುದಕ್ಕಾಗಿ ಈ ಕೃತ್ಯ ನಡೆದಿದೆ ಎಂದು ಹೇಳಿದ್ದಾರೆ. "ವೃದ್ಧನ ಬೆನ್ನಿನ ಮೇಲೆ ಗೀರುಗಳು ಮತ್ತು ಮುಖದ ಮೇಲೆ ಇತರ ಗಾಯದ ಗುರುತುಗಳಿದ್ದರೂ ಬಾಟಲಿಯಿಂದ ಅವನ ಮೇಲೆ ಹಲ್ಲೆ ಮಾಡಿದ ಯಾವುದೇ ಲಕ್ಷಣಗಳಿಲ್ಲ. ಇದು ಕೋಮು ಕಾರಣಗಳಿಗಿಂತ ಹಣದ ಮೇಲಿನ ಹಲ್ಲೆಯಂತೆ ಕಾಣುತ್ತದೆ. ನಾವು ಏನನ್ನೂ ತಳ್ಳಿಹಾಕಿಲ್ಲ, ತನಿಖೆ ನಡೆಯುತ್ತಿದೆ ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+