ಕೊಪ್ಪಳ: ಈಜಲು ತೆರಳಿದ್ದ ತಂದೆ ಸೇರಿ ನಾಲ್ವರು ಮಕ್ಕಳು ಸಾವು
ಕೊಪ್ಪಳ, ನವೆಂಬರ್ 6: ಈಜಲು ತೆರಳಿದ್ದ ತಂದೆ ಹಾಗೂ ನಾಲ್ವರು ಮಕ್ಕಳು ಸೇರಿ 5 ಮಂದಿನ ನೀರುಪಾಲಾದ ದಾರುಣ ಘಟನೆ ಸೋಮವಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಸಂಭವಿಸಿದೆ.
ಹೈದರಾಬಾದ್ ಮೂಲದ ರಾಘವೇಂದ್ರ ಎಂಬವರು ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಮ್ಮ ನಾಲ್ವರು ಮಕ್ಕಳ ಜತೆ ಕೆರೆಯಲ್ಲಿ ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ರಾಘವೇಂದ್ರ (35), ಪವಿತ್ರ (14), ಪವನಿ (12), ಪೌರ್ಣಿಕಾ, ಆಶೀಶ್(14) ಎಂದು ಗುರುತಿಸಲಾಗಿದೆ.
ಸ್ಥಳೀಯ ಈಜುಗಾರರ ಸಹಾಯದಿಂದ ನೀರುಪಾಲಾದ ಐವರ ಮೃತದೇಹವನ್ನು ಪತ್ತೆ ಮಾಡಿ ಮೇಲಕ್ಕೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಬಗ್ಗೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications