• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದಕ್ಕೆ 'ದೀದಿ' ಗೈರು

|

ಕೋಲ್ಕತ್ತಾ, ಜೂನ್.16: ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆದಿದ್ದ ವಿಡಿಯೋ ಸಂವಾದದ ಸಭೆಯಿಂದಲೂ ದೂರ ಸರಿದಿದ್ದಾರೆ.

   Careful! Your sanitizer may be poisonous, CBI issues alert for the first time | Oneindia Kannada

   ದೇಶದ 21 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಎರಡು ದಿನ ಸಭೆ ಕರೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ಸಂಗ್ರಹಿಸಲಿದ್ದಾರೆ.

   ಕೊವಿಡ್-19 ಕಂಟಕ: ಕುತೂಹಲ ಕೆರಳಿಸಿದ ಪ್ರಧಾನಿ ವಿಡಿಯೋ ಸಂವಾದ

   ಮೊದಲ ಹಂತದಲ್ಲಿ ಜೂನ್.16ರ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್, ಜಾರ್ಖಂಡ್, ಛತ್ತೀಸ್ ಗಢ್, ತ್ರಿಪುರಾ, ಹಿಮಾಚಲ ಪ್ರದೇಶ, ಚಂಡೀಗರ್, ಗೋವಾ, ಅಸ್ಸಾಂ, ಕೇರಳ, ಉತ್ತರಾಖಂಡ್, ಮಣಿಪುರ, ಲಡಾಖ್, ಪುದುಚೇರಿ, ಅರುಣಾಚಲ ಪ್ರದೇಶ, ಮೇಘಾಲಯ, ಮೀಜೋರಾಂ, ದಾದರ್ ನಗರ್, ಹವೇಲಿ ದಿಯು ಮತ್ತು ದಮನ್, ಸಿಕ್ಕಿಂ, ಲಕ್ಷದ್ವೀಪ ರಾಜ್ಯಗಳ ಸಿಎಂ ಹಾಗೂ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಚರ್ಚೆ ನಡೆಸಲಿದ್ದಾರೆ.

   ಪ್ರಧಾನಿ ಕರೆದ ಸಭೆಗೆ 'ದೀದಿ' ಗೈರು ಆಗಿದ್ದೇಕೆ?

   ಭಾರತ ಲಾಕ್ ಡೌನ್ ನಂತರದಲ್ಲಿ ಆರನೇ ಬಾರಿ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ವಿಡಿಯೋ ಸಂವಾದ ನಡೆಸಿದ್ದಾರೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಬಹುದು ಆದರೆ ಒಂದು ದಿನಕ್ಕೆ 13 ರಾಜ್ಯಗಳ ಸಿಎಂಗಳಿಗೆ ಮಾತ್ರ ಮಾತನಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಭೆಗೆ ಹಾಜರಾಗದಿರಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

   ಭಾರತ ಲಾಕ್ ಡೌನ್ ಸಡಿಲಿಕೆಗೊಳಿಸಿದ ನಂತರದಲ್ಲಿ ದೇಶದಲ್ಲಿನ ಚಟುವಟಿಕೆಗಳು ಸರಳವಾಗಿ ನಡೆಯುತ್ತಿವೆ. ವಾಹನ ಸಂಚಾರ, ಮಾರುಕಟ್ಟೆಗಳಲ್ಲಿನ ಜನದಟ್ಟಣೆ, ಬಸ್, ಕಾರು, ರೈಲುಗಳಲ್ಲಿನ ಪ್ರಯಾಣಿಕರ ಸಂಚಾರ ಮೊದಲಿನಂತೆ ನಡೆಯುತ್ತಿದ್ದು, ಆತಂಕವನ್ನು ಹೆಚ್ಚಿಸಿದೆ. ನಿತ್ಯ ಸಾವಿರಾರು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮತ್ತೊಮ್ಮೆ ಲಾಕ್ ಡೌನ್ ಹೇರಿಕೆ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನಡೆಸುತ್ತಿರುವ ಈ ವಿಡಿಯೋ ಸಂವಾದ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

   English summary
   Why West Bengal CM Mamata Banarjee Not Attend Pm Modi's Video Conference.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X