ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಚಕ ಕಾರಣ: 2 ಮನೆ ಬಾಡಿಗೆ ಪಡೆದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 22: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರತಿಸ್ಪರ್ಧಿಯನ್ನು ಮಣಿಸುವುದಕ್ಕೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೊಸ ಅಸ್ತ್ರ ಹೂಡಿದ್ದಾರೆ.

ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮನ್ನು "ಹೊರಗಿನವರು" ಎಂದು ಬಿಂಬಿಸಲು ಹೊರಟಿರುವ ಭಾರತೀಯ ಜನತಾ ಪಕ್ಷಕ್ಕೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. ನಂದಿಗ್ರಾಮ್ ಕ್ಷೇತ್ರದಲ್ಲೇ ಎರಡು ಮನೆಗಳನ್ನು ಬಾಡಿಗೆ ಪಡೆದುಕೊಳ್ಳಲು ಮುಂದಾಗಿದ್ದಾರೆ.

 ಸುವೇಂದು ನಿಜಮುಖ ಅರಿಯದ ಕತ್ತೆ ನಾನು ಎಂದ ಮಮತಾ ಬ್ಯಾನರ್ಜಿ ಸುವೇಂದು ನಿಜಮುಖ ಅರಿಯದ ಕತ್ತೆ ನಾನು ಎಂದ ಮಮತಾ ಬ್ಯಾನರ್ಜಿ

ಬಿಜೆಪಿಯು ಅಂಟಿಸಲು ಹೊರಟಿರುವ "ಹೊರಗಿನವರು" ಎಂಬ ಹಣೆಪಟ್ಟಿ ಅಳಿಸಿ ಹಾಕಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕ್ರಮ ತೆಗೆದುಕೊಂಡಿದ್ದಾರೆ. ನಂದಿಗ್ರಾಮ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ದೀದಿ ವಿರುದ್ಧ ಸಮರ ಸಾರಿದ್ದರು. ಮೊದಲ ಭಾಷಣದಲ್ಲೇ ಮಮತಾ ಬ್ಯಾನರ್ಜಿ ಅವರು ಈ ಕ್ಷೇತ್ರದವರೇ ಅಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಎರಡು ಮನೆ ಬಾಡಿಗೆ ಪಡೆದ ಮಮತಾ ಬ್ಯಾನರ್ಜಿ

ಎರಡು ಮನೆ ಬಾಡಿಗೆ ಪಡೆದ ಮಮತಾ ಬ್ಯಾನರ್ಜಿ

ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ ದಿನದಿಂದಲೇ ತಮ್ಮ ಪಕ್ಷದ ಮುಖ್ಯಸ್ಥೆಗೆ ಮನೆ ಹುಡುಕಾಟದ ಕಾರ್ಯ ಶುರುವಾಗಿತ್ತು. ನಂದಿಗ್ರಾಮ್ ಕ್ಷೇತ್ರದಲ್ಲಿ ಕೇವಲ 100 ಮೀಟರ್ ಅಂತರದಲ್ಲೇ ಎರಡು ಮನೆಗಳನ್ನು ಬಾಡಿಗೆ ಪಡೆದುಕೊಳ್ಳಲಾಗಿದೆ. ಮೊದಲ ಮನೆಯನ್ನು 1 ವರ್ಷದ ಮಟ್ಟಿಗೆ ಬಾಡಿಗೆ ಪಡೆದುಕೊಳ್ಳಲಾಗಿದ್ದು, ಇನ್ನೊಂದು ಮನೆಯನ್ನು 6 ತಿಂಗಳ ಅವಧಿಗೆ ಬಾಡಿಗೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

2ನೇ ಮನೆ ಬಾಡಿಗೆ ಪಡೆದುದರ ಹಿಂದಿನ ಕಾರಣ?

2ನೇ ಮನೆ ಬಾಡಿಗೆ ಪಡೆದುದರ ಹಿಂದಿನ ಕಾರಣ?

ಸ್ಥಳೀಯರ ಪ್ರಕಾರ, ನಂದಿಗ್ರಾಮ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಹಿಡಿದ ಮನೆಯು ಕಟ್ಟಡದ ಮೊದನೇ ಮಹಡಿಯಲ್ಲಿತ್ತು. ಕೆಳಭಾಗದಲ್ಲಿ ಮಳಿಗೆಗಳನ್ನು ಬಾಡಿಗೆ ನೀಡಲಾಗಿತ್ತು. ಇತ್ತೀಚಿಗೆ ಮಮತಾ ಬ್ಯಾನರ್ಜಿ ಅವರ ಕಾಲು ಗಾಯವಾದ ಹಿನ್ನೆಲೆ ಮೊದಲನೇ ಮಹಡಿಯ ಮನೆಗೆ ತೆರಳುವುದಕ್ಕೆ ಕಷ್ಟವಾಗಬಹುದು. ಈ ಕಾರಣಕ್ಕೆ ನೆಲಮಹಡಿಯಲ್ಲಿ ಇರುವ ಮನೆಯನ್ನೇ ಬಾಡಿಗೆ ಪಡೆಯಲಾಗಿದೆ. ವ್ಹೀಲ್ ಚೇರ್ ಮೂಲಕ ನೆಲಮಹಡಿ ಮನೆಗೆ ಹೋಗುವುದು ಅಷ್ಟಾಗಿ ಸಮಸ್ಯೆ ಆಗುವುದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡ ಬೇರೆ ಮನೆಯನ್ನು ಬಾಡಿಗೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಮನೆ ಬಾಡಿಗೆ ನೀಡಿದ ಮನೆ ಮಾಲೀಕರಲ್ಲಿ ಸಂಭ್ರಮ

ಮನೆ ಬಾಡಿಗೆ ನೀಡಿದ ಮನೆ ಮಾಲೀಕರಲ್ಲಿ ಸಂಭ್ರಮ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಾಡಿಗೆ ಪಡೆದ 2ನೇ ಮನೆಯ ಮಾಲೀಕ ಸುಧಾಮ್ ಚಂದ್ರ ಮತ್ತು ಅವರ ಪತ್ನಿ ರಾಣಿ ಸಂತಸ ವ್ಯಕ್ತಪಡಿಸಿದ್ದಾರೆ. "ನಾವು ಈ ಮೊದಲು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುವುದಕ್ಕೂ ಆಗುತ್ತಿರಲಿಲ್ಲ. ಆದರೆ ಇಂದು ಪ್ರತಿದಿನ ಅವರು ನಮ್ಮ ಮನೆಗೆ ಭೇಟಿ ನೀಡುತ್ತಾರೆ. ಕಳೆದ 15 ದಿನಗಳ ಹಿಂದೆಯಷ್ಟೇ ನಮ್ಮ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇದರಿಂದ ನಮಗೆ ತುಂಬಾ ಸಂತೋಷವಾಗುತ್ತಿದೆ" ಎಂದು ಮನೆ ಮಾಲೀಕ ಸುಧಾಮ್ ಚಂದ್ರ ತಿಳಿಸಿದ್ದಾರೆ.

294 ವಿಧಾನಸಭಾ ಕ್ಷೇತ್ರಗಳಿಗೆ 8 ಹಂತದಲ್ಲಿ ಚುನಾವಣೆ

294 ವಿಧಾನಸಭಾ ಕ್ಷೇತ್ರಗಳಿಗೆ 8 ಹಂತದಲ್ಲಿ ಚುನಾವಣೆ

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.

English summary
West Bengal Assembly Election 2021: Why Mamata Banerjee Takes Rent Two Houses In Nandigram, Here Read Reason For CM Decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X