ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: ಬಂಗಾಳ ಪೊಲೀಸರಿಂದ ಅಲ್‌ಖೈದಾದ ಶಂಕಿತ ಸದಸ್ಯರ ಬಂಧನ

|
Google Oneindia Kannada News

ಕೋಲ್ಕತ್ತಾ, ಆಗಸ್ಟ್ 18: ಪಶ್ಚಿಮ ಬಂಗಾಳ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಘಟಕವು ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಖೈದಾದ ಇಬ್ಬರು ಶಂಕಿತ ಸದಸ್ಯರನ್ನು ಬಂಧಿಸಿದೆ.

ಶಾಸನ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾರಿಬರಿಯಲ್ಲಿ ಈ ಇಬ್ಬರು ಶಂಕಿತ ಸದಸ್ಯರನ್ನು ಬಂಧಿಸಲಾಗಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ ಖೈದಾದೊಂದಿಗೆ ಸಂಬಂಧವಿಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಂಧಿತ ವ್ಯಕ್ತಿಗಳನ್ನು ಗಂಗಾರಾಮ್‌ಪುರದ ನಿವಾಸಿ ಅಬ್ದುರ್ ರಕೀಬ್ ಸರ್ಕಾರ್ ಮತ್ತು ಅರಂಬಾಗ್‌ನ ನಿವಾಸಿ ಕಾಜಿ ಅಹಸನ್ ಉಲ್ಲಾ ಎಂದು ಗುರುತಿಸಲಾಗಿದೆ. ಬಂಧಿತರಿಂದ ಭಾರತದ ವಿರುದ್ಧ ಯುದ್ಧ ಸಾರುವ ಮೂಲಭೂತವಾದಿ ಸಾಹಿತ್ಯ ಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

West Bengal Police Arrested Two Suspected Members Of Al-Qaeda


ಬಂಧಿತರು ಭಾರತೀಯ ಉಪಖಂಡದಲ್ಲಿ (AQIS) ನಿಷೇಧಿಸಿರುವ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಸಕ್ರಿಯ ಸದಸ್ಯರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬಂಗಾಳ ಪೊಲೀಸ್‌ನ ವಿಶೇಷ ಕಾರ್ಯಪಡೆ ಹೇಳಿಕೊಂಡಿದೆ.

ಅಲ್‌ಖೈದಾ ವಿಡಿಯೋ ತುಣುಕು : ನಿಖರತೆ ಪರಿಶೀಲಿಸಲು ಸಿಎಂ ಸೂಚನೆಅಲ್‌ಖೈದಾ ವಿಡಿಯೋ ತುಣುಕು : ನಿಖರತೆ ಪರಿಶೀಲಿಸಲು ಸಿಎಂ ಸೂಚನೆ

ಇಬ್ಬರು ಆರೋಪಿಗಳ ವಿರುದ್ಧ UAPA ಮತ್ತು IPC ಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ಪ್ರಾರಂಭಿಸಲಾಗುತ್ತಿದೆ ಎಂದಿದ್ದಾರೆ. ಜೊತೆಗೆ ಇತರ 17 ಎಫ್‌ಐಆರ್ ಅನ್ನು ಅವರ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತಿಚೆಗೆ ಅಮೆರಿಕ ಡ್ರೋನ್ ದಾಳಿಯಲ್ಲಿ ಅಲ್-ಖೈದಾ ಮುಖ್ಯಸ್ಥ ಅಯಮಾನ್ ಅಲ್-ಜವಾಹಿರಿಯನ್ನು ಹತ್ಯೆ ಮಾಡುವ ಮೂಲಕ 9/11 ದಾಳಿಗೆ ಪ್ರತೀಕಾರವನ್ನು ತೀರಿಸಿಕೊಂಡಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಈ ಕಾರ್ಯಾಚರಣೆ ನಡೆಸಿತ್ತು. ಡ್ರೋನ್ ದಾಳಿಗೆ ಅಮೆರಿಕ ತನ್ನ ಅಪಾಯಕಾರಿ ಹೆಲ್ಫೈರ್ ಆರ್ 9ಎಕ್ಸ್ ಕ್ಷಿಪಣಿಯನ್ನು ಬಳಸಿತ್ತು.

71 ವರ್ಷದ ಅಯಮಾನ್ ಅಲ್-ಜವಾಹಿರಿ ಜಾಗತಿಕ ಮಟ್ಟದಲ್ಲಿ ಅಲ್ ಖೈದಾ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದರು. ಒಸಾಮಾ ಬಿನ್ ಲಾಡೆನ್ ಅನ್ನು ಅಮೆರಿಕಾ ಕೊಂದ 11 ವರ್ಷಗಳ ನಂತರ ಗುಂಪಿನ ಹೊಣೆ ಹೊತ್ತುಕೊಂಡಿದ್ದರು.

English summary
West Bengal Police special task force arrested two suspected members of banned terrorist outfit Al-Qaeda from Kharibari. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X