• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ "ಮ್ಯಾಚ್ ಫಿಕ್ಸಿಂಗ್" ಹೇಳಿಕೆ; ಪಶ್ಚಿಮ ಬಂಗಾಳ ವಿರೋಧ ಪಕ್ಷಗಳಿಂದ ಭಾರೀ ಟೀಕೆ

|

ಪಶ್ಚಿಮ ಬಂಗಾಳ, ಫೆಬ್ರುವರಿ 08: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು "ಮ್ಯಾಚ್ ಫಿಕ್ಸಿಂಗ್" ಮಾಡಿಕೊಂಡಿವೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಹಾಗೂ ಎಡಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ಖಂಡಿಸಿವೆ.

"ನಮ್ಮ ಸ್ಪರ್ಧೆ ಏನಿದ್ದರೂ ತೃಣಮೂಲ ಕಾಂಗ್ರೆಸ್ ಜೊತೆ. ಹಾಗೆಯೇ ಅವರ ಕಾಣದ ಸ್ನೇಹಿತರ ಜೊತೆ. ನೀವು ಕೆಲವು ಕ್ರೀಡೆಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಪದ ಕೇಳಿರಬಹುದು. ಹಾಗೆಯೇ ಟಿಎಂಸಿ ಕೂಡ ಎಡಪಕ್ಷ ಹಾಗೂ ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ನಮ್ಮನ್ನು ಸೋಲಿಸಲು ನೋಡುತ್ತಿದೆ" ಎಂದು ಭಾನುವಾರ ಪಶ್ಚಿಮ ಬಂಗಾಳ ಭೇಟಿ ಸಂದರ್ಭ ಮೋದಿ ಹೇಳಿಕೆ ನೀಡಿದ್ದರು. ಮುಂದೆ ಓದಿ...

"ಯಾರಿಗೂ ತಿಳಿಯದಂತೆ ಪ್ಲಾನ್ ಮಾಡುತ್ತಿದ್ದಾರೆ"

"ಇವರೆಲ್ಲಾ ಯಾರಿಗೂ ಕಾಣದಂತೆ ದೆಹಲಿಯ ಮುಚ್ಚಿದ ಬಾಗಿಲ ಹಿಂದೆ ಭೇಟಿ ಮಾಡಿ ಯೋಜನೆಗಳನ್ನು ಮಾಡುತ್ತಿದ್ದಾರೆ. ಕೇರಳದಲ್ಲಿ ಎಡಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಪ್ರತಿ ಐದು ವರ್ಷಕ್ಕೆ ಅಧಿಕಾರಕ್ಕೆ ಬರುತ್ತದೆ. ನೀವು ಐದು ವರ್ಷ ಕೊಳ್ಳೆ ಹೊಡೆಯಿರಿ, ನಾವು ಮುಂದಿನ ಐದು ವರ್ಷ ಕೊಳ್ಳೆ ಹೊಡೆಯುತ್ತೇವೆ ಎಂಬ ಲೆಕ್ಕಾಚಾರದಲ್ಲಿ ಅಧಿಕಾರಕ್ಕೆ ಬಂದಿವೆ. ನಾವೆಲ್ಲಾ ಇದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಈ ಬಗ್ಗೆ ಎಲ್ಲರಿಗೂ ಎಚ್ಚರಿಕೆ ನೀಡಬೇಕು" ಎಂದಿದ್ದರು.

"ಭಾರತ್ ಮಾತಾ ಕೀ ಜೈ" ಎಂದರೆ ದೀದಿಗೆ ಸಿಟ್ಟು: ಪ್ರಧಾನಿ ಮೋದಿ

"ಇವರೆಲ್ಲರದ್ದೂ ಮ್ಯಾಚ್ ಫಿಕ್ಸಿಂಗ್"

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಹಲ್ದಿಯಾದಲ್ಲಿ ಭಾನುವಾರ ಬಿಜೆಪಿ ಪ್ರಚಾರ ಮೆರವಣಿಗೆ ಸಂದರ್ಭ ಈ ಮಾತುಗಳನ್ನು ಮೋದಿ ಆಡಿದ್ದರು. ಅನಿಲ ಹಾಗೂ ರಸ್ತೆ ಅಭಿವೃದ್ಧಿ ಸಂಬಂಧಿ ಯೋಜನೆಗಳಿಗೆ ಚಾಲನೆ ನೀಡಲು ರಾಜ್ಯಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು "ಮ್ಯಾಚ್ ಫಿಕ್ಸಿಂಗ್" ಹೇಳಿಕೆಯನ್ನು ನೀಡಿದ್ದರು. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿ ಕಾರ್ಯಗಳ ಕೊರೆತೆ ಕುರಿತು ಟಿಎಂಸಿ, ಎಡಪಕ್ಷ, ಕಾಂಗ್ರೆಸ್ ಪಕ್ಷಗಳ ಮೇಲೆ ಹರಿಹಾಯ್ದಿದ್ದರು.

"ಮೋದಿ ಹೇಳಿಕೆಗೆ ತಲೆಬುಡವಿಲ್ಲ"

ಪ್ರಧಾನಿ ಮೋದಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಸುಗತಾ ರಾವ್, "ಮೋದಿಯವರ ಈ ಹೇಳಿಕೆ ತಲೆಬುಡವಿಲ್ಲದ್ದು. 2019ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಎಡಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರ ಕುರಿತು ನನ್ನ ಬಳಿ ಸಾಕ್ಷ್ಯವಿದೆ. ಸಿಪಿಐಎಂ ಮುಖಂಡರು ಹಣ ತೆಗೆದುಕೊಂಡು ತಮ್ಮ ಮತವನ್ನು ಬಿಜೆಪಿಗೆ ವರ್ಗಾವಣೆ ಮಾಡಿದ್ದೂ ತಿಳಿದಿದೆ" ಎಂದು ಮರು ಆರೋಪಿಸಿದ್ದಾರೆ.

"ಬಿಜೆಪಿಗೆ ಕಾಂಗ್ರ್ಎಸ್-ಎಡಪಕ್ಷಗಳ ಮೈತ್ರಿ ಭಯ ಹುಟ್ಟಿಸಿದೆ"

ಸಿಪಿಐ (ಎಂ) ಮುಖಂಡ ಸುಜನ್ ಚಕ್ರವರ್ತಿ ಕೂಡ ಮೋದಿಯವರ ಈ ಆರೋಪವನ್ನು ತಳ್ಳಿ ಹಾಕಿದ್ದು, ನರೇಂದ್ರ ಮೋದಿಯವರ ಈ ಹೇಳಿಕೆ ಎಡಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿ ಬಿಜೆಪಿಗೆ ಭಯ ಹುಟ್ಟುಹಾಕಿರುವುದನ್ನೂ ತೋರಿಸುತ್ತಿದೆ ಎಂದು ಹೇಳಿದ್ದಾರೆ. ಇದೇ ಏಪ್ರಿಲ್-ಮೇ ವೇಳೆಗೆ ಪಶ್ಚಿಮ ಬಂಗಾಳದಲ್ಲಿ 294 ಸೀಟುಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ.

English summary
Opposition parties in west bengal criticised PM Narendra Modi, who accused the three parties of “match-fixing” to defeat BJP in assembly elections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X