Get Updates
Get notified of breaking news, exclusive insights, and must-see stories!

ಬಂಗಾಳದಲ್ಲಿ ಸಿಎಂ V/s ರಾಜ್ಯಪಾಲ; ವಾಟ್ಸಾಪ್ ಸಂದೇಶವನ್ನೇ ಟ್ವೀಟ್ ಮಾಡಿದ ಗವರ್ನರ್

ಕೋಲ್ಕತ್ತಾ, ಜನವರಿ 31: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಮಾಡಿರುವ ವಾಟ್ಸಾಪ್ ಸಂದೇಶವನ್ನು ರಾಜ್ಯಪಾಲ ಜಗದೀಪ್ ಧಂಖರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಈ ಇಬ್ಬರ ನಡುವಿನ ಕಾದಾಟ ಸದ್ದು ಮಾಡಿ ಸುದ್ದಿಯಾಗಿದೆ.

ರಾಜ್ಯಪಾಲರ ಪ್ರಕಾರ, ಅವರು ಮುಖ್ಯಮಂತ್ರಿಗೆ ಕಳುಹಿಸಿದ ಸಂದೇಶದಲ್ಲಿ, "ಸಾಂವಿಧಾನಿಕ ಪ್ರತಿನಿಧಿಗಳ ನಡುವಿನ ಸಂವಾದ ಮತ್ತು ಸಾಮರಸ್ಯವು ಪ್ರಜಾಪ್ರಭುತ್ವದ ಮೂಲತತ್ವ ಮತ್ತು ಆತ್ಮ ಮತ್ತು ಸಂವಿಧಾನದ ಆದೇಶವಾಗಿದೆ. ಇದು ಪರಸ್ಪರ ಗೌರವದಿಂದ ಅರಳುತ್ತದೆ," ಎಂದು ಉಲ್ಲೇಖಿಸಲಾಗಿದೆ.

"ನನ್ನ ಕಡೆಯಿಂದ ನಿಮಗೆ ಹೆಚ್ಚಿನ ವೈಯಕ್ತಿಕ ಗೌರವವನ್ನು ನೀಡುತ್ತೇನೆ. ಇದು ನಿಮ್ಮ ಆಲೋಚನೆ ಮತ್ತು ಸ್ವೀಕರಿಸುವ ಶೈಲಿಯನ್ನು ತೋರಿಸುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಸೋಮವಾರ ಬೆಳಗ್ಗೆ 10.25ಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ನೀಡಿದ ಸಂದೇಶವನ್ನು ಓದಲಾಗಿದೆ ಎಂದು ರಾಜ್ಯಪಾಲ ಜಗದೀಪ್ ಧಂಖರ್ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

West Bengal Governor tweets his WhatsApp message to Mamata Banerjee, After Blocks his Twitter

ರಾಜ್ಯಪಾಲರನ್ನು ಟ್ವಿಟ್ಟರ್ ಖಾತೆಯಲ್ಲಿ ನಿರ್ಬಂಧಿಸಿದ ಮಮತಾ ಬ್ಯಾನರ್ಜಿ:

ಪಶ್ಚಿಮ ಬಂಗಾಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜ್ಯಪಾಲ ಜಗದೀಪ್ ಧಂಖರ್ ಅವರನ್ನು ನಿರ್ಬಂಧಿಸಿರುವುದಾಗಿ ತಿಳಿಸಿದ್ದರು. "ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ರಾಜ್ಯಪಾಲರು ನಮ್ಮ ಮೇಲೆ ಆರೋಪ ಮತ್ತು ದಾಳಿ ಮಾಡುತ್ತಾರೆ. ಅವರು ಒಬ್ಬರೇ ಸುಪ್ರೀಂ ಮತ್ತು ನಾವು ಬಂಧಿತ ಕಾರ್ಮಿಕರು ಎಂಬಂತೆ ಟ್ವೀಟ್ ಮಾಡುತ್ತಾರೆ. ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಹೀಗಾಗಿ ನಾನು ಇಂದು ಅವರನ್ನು ಟ್ವಿಟರ್‌ನಲ್ಲಿ ನಿರ್ಬಂಧಿಸಿದ್ದೇನೆ," ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಯಲ್ಲಿ ತಿಳಿಸಿದ್ದರು.

ರಾಜ್ಯಪಾಲರ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ:

ರಾಜ್ಯಪಾಲ ಜಗದೀಪ್ ಧಂಖರ್ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) "ಫೋನ್ ಟ್ಯಾಪಿಂಗ್" ಮತ್ತು "ಬೆದರಿಕೆ" ನೀಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು. "ನಾವು ಕಳೆದ ಒಂದು ವರ್ಷದಿಂದ ತಾಳ್ಮೆಯಿಂದ ಬಳಲುತ್ತಿದ್ದೇವೆ. ರಾಜ್ಯಪಾಲರು ಹಲವಾರು ಫೈಲ್‌ಗಳನ್ನು ಪೂರ್ಣಗೊಳಿಸಿಲ್ಲ. ಅವರು ಪ್ರತಿ ಫೈಲ್ ಅನ್ನು ಬಾಕಿ ಇರಿಸಿಕೊಳ್ಳುತ್ತಾರೆ. ಅವರು ನೀತಿ ನಿರ್ಧಾರಗಳ ಬಗ್ಗೆ ಹೇಗೆ ಮಾತನಾಡುತ್ತಾರೆ," ಎಂದು ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದರು.

ರಾಜ್ಯಪಾಲ ಜಗದೀಪ್ ಧಂಖರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಪತ್ರಗಳನ್ನು ಬರೆದಿದ್ದೇನೆ. "ಪ್ರಧಾನಿಯವರು ರಾಜ್ಯಪಾಲ ಜಗದೀಪ್ ಧಂಖರ್ ಅವರನ್ನು ಏಕೆ ತೆಗೆದುಹಾಕಿಲ್ಲ? ಪೆಗಾಸಸ್ ಗವರ್ನರ್ ಭವನದಿಂದ ಓಡುತ್ತಿದ್ದು, ಅವರು ಫೋನ್ ಟ್ಯಾಪಿಂಗ್ ಮಾಡುತ್ತಿದ್ದಾರೆ," ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+