ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾಗೆ ಭಾರೀ ಹಿನ್ನಡೆ: ಖ್ಯಾತ ಜ್ಯೋತಿಷಿಯ ಭವಿಷ್ಯ
ಈ ವರ್ಷ ನಡೆಯಲಿರುವ ಹೈವೊಲ್ಟೇಜ್ ಅಸೆಂಬ್ಲಿ ಚುನಾವಣೆಯಲ್ಲಿ ಪಶ್ಚಿಮ ಬಂಗಾಳವೂ ಒಂದು. ಏಪ್ರಿಲ್ ಅಥವಾ ಮೇ ತಿಂಗಳ ಆದಿಯಲ್ಲಿ ಅಲ್ಲಿನ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಕಳೆದ ಲೋಕಸಭಾ ಚುನಾವಣೆಯ ನಂತರ ಭಾರೀ ಬಲವೃದ್ದಿಗೊಂಡಿರುವ ಬಿಜೆಪಿ, ಎರಡು ಬಾರಿ ಸತತವಾಗಿ ಅಧಿಕಾರಕ್ಕೇರಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಭಾರೀ ಠಕ್ಕರ್ ಅನ್ನು ಈ ಬಾರಿ ನೀಡಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಹಲವು ಟಿಎಂಸಿ ಪಕ್ಷದ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದು ಮಮತಾಗೆ ನುಂಗಲಾರದ ತುತ್ತಾಗಿದೆ. ಸುವೇಂದು ಅಧಿಕಾರಿ ಟಿಎಂಸಿ ತೊರೆದು, ಬಿಜೆಪಿ ವರಿಷ್ಠರ ಸಮ್ಮುಖದಲ್ಲಿ ಈಗಾಗಲೇ ಬಿಜೆಪಿ ಸೇರಿಯಾಗಿದೆ.
ರಾಜ್ಯದ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗುತ್ತೋ, ಮಮತಾ ಬ್ಯಾನರ್ಜಿಯ ಸಾಧನೆ ಹೇಗಿರಲಿದೆ ಎನ್ನುವುದರ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಕೆ.ಎಂ.ಸಿನ್ಹಾ ಅವರು ನುಡಿದಿದ್ದಾರೆ. ಅದು ಹೀಗಿದೆ:

ಯುಟ್ಯೂಬ್ ಚಾನೆಲ್ ಮೂಲಕ ಭವಿಷ್ಯ ನುಡಿದಿರುವ ಸಿನ್ಹಾ
ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ಭವಿಷ್ಯ ನುಡಿದಿರುವ ಸಿನ್ಹಾ, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಸ್ಥಾಪನೆಯಾದ ದಿನದ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಈ ಭವಿಷ್ಯವನ್ನು ಹೇಳಿದ್ದಾರೆ. ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಭವಿಷ್ಯ ಹೇಳುತ್ತಿದ್ದೇನೆ ಎಂದು ಕೆ.ಎಂ.ಸಿನ್ಹಾ ಹೇಳಿದ್ದಾರೆ.

ಶನಿದೇವರು ಮಮತಾ ಬ್ಯಾನರ್ಜಿಗೆ ಹಿನ್ನಡೆಯನ್ನು ಉಂಟು ಮಾಡಲಿದ್ದಾರೆ
ಶನಿದೇವರು ಮಮತಾ ಬ್ಯಾನರ್ಜಿಗೆ ಹಿನ್ನಡೆಯನ್ನು ಉಂಟು ಮಾಡಲಿದ್ದಾರೆ ಎಂದು ಹಿಂದೆಯೂ ಹೇಳಿದ್ದೆ. ಟಿಎಂಸಿಗೆ ವಿನಾಶಕಾರಿ ಸ್ಥಾನದಲ್ಲಿ ಶನಿಯು ಇದ್ದಾನೆ. ಪಕ್ಷದಿಂದ ಹಲವು ಮುಖಂಡರು ಬಿಜೆಪಿಗೆ ಸೇರುತ್ತಿರುವುದು ಇದರದ್ದೇ ಪ್ರಬಾವ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗಣನೀಯ ಸಾಧನೆಯನ್ನು ಮಾಡಲಿದೆ ಎಂದು ಸಿನ್ಹಾ ತಮ್ಮ ಭವಿಷ್ಯದಲ್ಲಿ ಹೇಳಿದ್ದಾರೆ.

ಇಲ್ಲಿ ಬಿಜೆಪಿ ಸರಕಾರ ರಚಿಸುವುದು ಖಚಿತ
ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆಯಾದರೂ, ಕೊನೆಗೆ ಬಿಜೆಪಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ. ಇಲ್ಲಿ ಎರಡೂ ಪ್ರಮುಖ ಪಕ್ಷಗಳು ಇತರ ಪಾರ್ಟಿಯೊಂದಿಗೆ ಕೈಜೋಡಿಸಲಿವೆ. ಇಲ್ಲಿ ಬಿಜೆಪಿ ಸರಕಾರ ರಚಿಸುವುದು ಖಚಿತ, ಒಂದು ವೇಳೆ, ಬಹುಮತಕ್ಕೆ ಸ್ವಲ್ಪ ನಂಬರ್ ಕಮ್ಮಿಯಿದ್ದರೆ, ಇತರ ಪಕ್ಷಗಳ ಬೆಂಬಲವನ್ನು ಬಿಜೆಪಿ ಪಡೆದುಕೊಳ್ಳಲಿದೆ ಎನ್ನುವ ಭವಿಷ್ಯವನ್ನು ಸಿನ್ಹಾ ನುಡಿದಿದ್ದಾರೆ.

ಕೆಲವರು ತಮ್ಮ ಭವಿಷ್ಯ ಸುಳ್ಳಾದಾಗ ಅದನ್ನು ಯುಟ್ಯೂಬ್ ನಿಂದ ಡಿಲಿಟ್ ಮಾಡುತ್ತಾರೆ
ನಾನು ಹಿಂದೆ ನುಡಿದ ಭವಿಷ್ಯವೆಲ್ಲವೂ ನಿಜವಾಗಿದೆ. ಕೆಲವರು ತಮ್ಮ ಭವಿಷ್ಯ ಸುಳ್ಳಾದಾಗ ಅದನ್ನು ಯುಟ್ಯೂಬ್ ನಿಂದ ಡಿಲಿಟ್ ಮಾಡುತ್ತಾರೆ. ಆದರೆ, ನನ್ನ ಹಿಂದಿನ ಎಲ್ಲಾ ವಿಡಿಯೋಗಳು ನಮ್ಮ ಚಾನೆಲ್ ನಲ್ಲಿ ಸಿಗುತ್ತದೆ. ಸದ್ಯ, ಬಿಜೆಪಿಯ ಟೈಂ ಚೆನ್ನಾಗಿದೆ, ಮಾರ್ಚ್ ನಂತರ ಇನ್ನೂ ಚೆನ್ನಾಗಿರಲಿದೆ ಎಂದು ಸಿನ್ಹಾ ತಮ್ಮ ಭವಿಷ್ಯದಲ್ಲಿ ನುಡಿದಿದ್ದಾರೆ.
-
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ












Click it and Unblock the Notifications