ಬೇಸಿಗೆ ಪ್ರವಾಸಕ್ಕೆ ಸೂಕ್ತವಾದ ಭಾರತದ 8 ಪ್ರಸಿದ್ಧ ದೇವಾಲಯಗಳು

ಬೇಸಿಗೆ ಕಾಲ ಆರಂಭವಾದರೆ ಸಾಕು ಪ್ರವಾಸ ಯೋಜನೆಗಳು ಶುರುವಾಗುತ್ತವೆ. ವಿಶೇಷವಾಗಿ ಭಾರತದಲ್ಲಿ ಈ ಬೇಸಿಗೆಯ ಸಮಯವನ್ನು ಪ್ರವಾಸದ ಕಾಲವೆಂದು ಹೇಳಲಾಗುತ್ತದೆ. ಆಧ್ಯಾತ್ಮಿಕ, ಶಾಂತಿ, ಪ್ರಕೃತಿ ಸೌಂದರ್ಯ ಮತ್ತು ವಿವಿಧ ರೀತಿ ಸಂಸ್ಕೃತಿಯ ಅನುಭವ ನೀಡುವ ಅನೇಕ ಪವಿತ್ರ ಸ್ಥಳಗಳು ಭಾರತದಲ್ಲಿವೆ ಈ ಬೇಸಿಗೆಯಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಲು ಸೂಕ್ತವಾಗಿವೆ.

ಇಲ್ಲಿದೆ ಭಾರತದಲ್ಲಿನ ಟಾಪ್‌ 8 ಪ್ರವಾಸದ ತಾಣಗಳ ವಿವರ:

ಪಂಜಾಬ್‌ನ ಗೋಲ್ಡನ್ ಟೆಂಪಲ್

ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಸಿಖ್ ಧರ್ಮದ ಅತ್ಯಂತ ಪವಿತ್ರವಾದ ಗುರುದ್ವಾರವಾಗಿದೆ. ಬಂಗಾರದಂತೆ ಹೊಳೆಯುವ ದೇವಸ್ಥಾನ ಮತ್ತು ಅದರ ಸುತ್ತಲಿನ ಅಮೃತ ಸರೋವರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಪ್ರತಿದಿನ ನಡೆಯುವ ಅನ್ನದಾನ ಜಗತ್ತಿನ ಅತಿದೊಡ್ಡ ಉಚಿತ ಸಮುದಾಯ ಅಡುಗೆಮನೆಗಳಲ್ಲಿ ಒಂದಾಗಿದೆ.

ಉತ್ತರ ಪ್ರದೇಶದ ವೃಂದಾವನ

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನ ಶ್ರೀಕೃಷ್ಣನ ಬಾಲ್ಯದ ನೆನಪುಗಳನ್ನು ಹೊತ್ತಿರುವ ಪವಿತ್ರ ತಾಣವಾಗಿದೆ. ಇಲ್ಲಿ ಅಸಂಖ್ಯಾತ ದೇವಸ್ಥಾನಗಳು ಶ್ರೀಕೃಷ್ಣ ಮತ್ತು ರಾಧೆಗೆ ಸಮರ್ಪಿತವಾಗಿವೆ. ಉತ್ತರ ಪ್ರದೇಶದ ವೃಂದಾವನ ಜೊತೆಗೆ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ದಡದಲ್ಲಿ "ನವವೃಂದಾವನ" ಎಂಬ ಪವಿತ್ರ ಸ್ಥಳವಿದೆ.

Top 8 Pilgrimage Destinations

ಉತ್ತರಾಖಂಡದ ಕೇದಾರನಾಥ ದೇವಸ್ಥಾನ

ಕೇದಾರನಾಥವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ, ಮಂದಾಕಿನಿ ನದಿಯ ದಡದಲ್ಲಿ, ಸುಮಾರು 3,583 ಮೀಟರ್ ಎತ್ತರದಲ್ಲಿರುವ ಶಿವನ ಅತ್ಯಂತ ಪವಿತ್ರ ದೇವಾಲಯವಾಗಿದೆ. ಇಲ್ಲಿ ಹೋಗಲು ಗೌರಿಕುಂಡದಿಂದ ಚಾರಣ ಮಾಡಬೇಕಾಗುತ್ತದೆ ಅಥವಾ ಹೆಲಿಕಾಪ್ಟರ್ ಸೌಲಭ್ಯವೂ ಇದೆ. ತೀವ್ರ ಹಿಮಪಾತದಿಂದಾಗಿ, ದೇವಾಲಯವು ಅಕ್ಷಯ ತೃತೀಯ (ಏಪ್ರಿಲ್/ಮೇ) ದಿಂದ ಕಾರ್ತಿಕ ಪೂರ್ಣಿಮೆಯ (ಅಕ್ಟೋಬರ್/ನವೆಂಬರ್) ನಡುವೆ ಮಾತ್ರ ಭಕ್ತರಿಗೆ ತೆರೆದಿರುತ್ತದೆ.

Top 8 Pilgrimage Destinations

ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಏಳು ಬೆಟ್ಟಗಳ ನಡುವೆ ಇರುವ ತಿರುಮಲ ವೆಂಕಟೇಶ್ವರ ದೇವಸ್ಥಾನ ಭಾರತದಲ್ಲಿನ ಅತ್ಯಂತ ಜನಪ್ರಿಯ ಯಾತ್ರಾ ತಾಣಗಳಲ್ಲಿ ಒಂದು. ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಲಕ್ಷಾಂತರ ಭಕ್ತರು ಭೇಟಿ ನೀಡುವ ಒಂದು ಪುಣ್ಯಕ್ಷೇತ್ರ ಆಗಿದೆ.

ಮೋಡಗಳ ಮೇಲೆ ನಡೆಯುವ ಅನುಭವ! ಬೇಸಿಗೆಯಲ್ಲಿ ಭೇಟಿ ನೀಡಲೇಬೇಕಾದ ಈ 5 ಗಿರಿಧಾಮಗಳು
ಮೋಡಗಳ ಮೇಲೆ ನಡೆಯುವ ಅನುಭವ! ಬೇಸಿಗೆಯಲ್ಲಿ ಭೇಟಿ ನೀಡಲೇಬೇಕಾದ ಈ 5 ಗಿರಿಧಾಮಗಳು

ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಸ್ಥಾನ

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಈ ಶಿವ ದೇವಸ್ಥಾನ ಅತ್ಯಂತ ಪವಿತ್ರ ತಾಣ. ಗಂಗಾ ನದಿಯ ಪಶ್ಚಿಮ ದಂಡೆಯ ಮೇಲಿರುವ ಈ ಕಾಶಿ ವಿಶ್ವನಾಥ ದೇವಸ್ಠಾನವು ಶಿವನಿಗೆ ಅರ್ಪಿತವಾದ ಅತ್ಯಂತ ಪವಿತ್ರ ದೇವಸ್ಠಾನ ಆಗಿದೆ. ಗಂಗಾ ನದಿಯ ತೀರದಲ್ಲಿ ಸೂರ್ಯೋದಯ ಮತ್ತು ಸಾಯಂಕಾಲದ ಆರತಿ ನೋಡುವುದು ಭಕ್ತರಿಗೆ ವಿಶೇಷ ಅನುಭವ.

Top 8 Pilgrimage Destinations

ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನ

ಜಮ್ಮು ಮತ್ತು ಕಾಶ್ಮೀರದ ತ್ರಿಕೂಟ ಪರ್ವತಗಳಲ್ಲಿರುವ ವೈಷ್ಣೋದೇವಿ ದೇವಿ ದೇವಸ್ಠಾನವು ಕತ್ರಾ ಬಳಿ ಸಮುದ್ರ ಮಟ್ಟದಿಂದ 5200 ಅಡಿ ಎತ್ತರದಲ್ಲಿದೆ. ಇದು ಅತ್ಯಂತ ಪವಿತ್ರ ಹಿಂದೂ ಶಕ್ತಿಪೀಠವಾಗಿದೆ. ಈ ದೇವಸ್ಥಾನಕ್ಕೆ ಹೋಗಲು ಪಾದಯಾತ್ರೆ ಮಾಡಬೇಕಾಗುತ್ತದೆ.

ಜನಸಂದಣಿ ಬೇಡವೇ, ಕುಟುಂಬದೊಂದಿಗೆ ಹೋಗಲು 7 ಸುಂದರ ಹಿಲ್ ಸ್ಟೇಷನ್‌ಗಳು
ಜನಸಂದಣಿ ಬೇಡವೇ, ಕುಟುಂಬದೊಂದಿಗೆ ಹೋಗಲು 7 ಸುಂದರ ಹಿಲ್ ಸ್ಟೇಷನ್‌ಗಳು

ಉತ್ತರಾಖಂಡದ ಯಮುನೋತ್ರಿ ದೇವಸ್ಥಾನ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗರ್ವಾಲ್ ಹಿಮಾಲಯದಲ್ಲಿರುವ ಪ್ರಮುಖ ಹಿಂದೂ ತೀರ್ಥಯಾತ್ರಾ ಸ್ಥಳವಾಗಿದೆ. ಚಾರ ಧಾಮ ಯಾತ್ರೆಯ ಪ್ರಮುಖ ತಾಣಗಳಲ್ಲಿ ಒಂದಾದ ಯಮುನೋತ್ರಿ, ಯಮುನಾ ನದಿಯ ಉದ್ಭವ ಸ್ಥಳ. ಅರಣ್ಯ, ಜಲಪಾತ ಮತ್ತು ಪರ್ವತಗಳ ನಡುವೆ ಇರುವ ಈ ಯಾತ್ರೆ ವಿಶಿಷ್ಟ ಅನುಭವ ನೀಡುತ್ತದೆ.

ಈ ಪವಿತ್ರ ತಾಣಗಳು ಕೇವಲ ಧಾರ್ಮಿಕ ನಂಬಿಕೆಗೆ ಮಾತ್ರ ಸೀಮಿತವಾಗಿಲ್ಲ; ಅವುಗಳು ಪ್ರಕೃತಿ ಸೌಂದರ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಒಟ್ಟುಗೂಡಿಸುವ ವಿಶಿಷ್ಟ ಅನುಭವವನ್ನು ನೀಡುತ್ತವೆ. ಬೇಸಿಗೆಯಲ್ಲಿ ಮನಸ್ಸಿಗೆ ನೆಮ್ಮದಿ ಬೇಕಾದರೆ, ಈ ಯಾತ್ರಾ ತಾಣಗಳನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+