8,000 ಬಡ ಬ್ರಾಹ್ಮಣ ಪುರೋಹಿತರಿಗೆ ಉಚಿತ ವಸತಿ, ತಿಂಗಳಿಗೆ 1,000 ರೂ. ಭತ್ಯೆ: ಮಮತಾ ಬ್ಯಾನರ್ಜಿ

ಕೊಲ್ಕತ್ತಾ, ಸೆಪ್ಟೆಂಬರ್ 14: ರಾಜ್ಯದ 8,000 ಕ್ಕೂ ಹೆಚ್ಚು ಬಡ ಸನಾತನ ಬ್ರಾಹ್ಮಣ ಪುರೋಹಿತರಿಗೆ ಉಚಿತ ವಸತಿ ಮತ್ತು ತಿಂಗಳಿಗೆ 1,000 ಭತ್ಯೆಯನ್ನು ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಘೋಷಿಸಿದ್ದಾರೆ.

2021 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿಯ ಈ ನಿರ್ಧಾರವು ಮಾಸ್ಟರ್ ಸ್ಟ್ರೋಕ್ ಎಂದು ಪರಿಗಣಿಸಲಾಗಿದೆ.

"ನಾವು ಈ ಹಿಂದೆ ಕೋಲಘಾಟ್‌ನಲ್ಲಿ ಅಕಾಡೆಮಿ ಸ್ಥಾಪಿಸಲು ಸನಾತನ ಬ್ರಾಹ್ಮಣ ಸಮುದಾಯಕ್ಕೆ ಭೂಮಿಯನ್ನು ಒದಗಿಸಿದ್ದೆವು. ಈ ಪಂಥದ ಅನೇಕ ಪುರೋಹಿತರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅವರಿಗೆ ತಿಂಗಳಿಗೆ 1,000 ರೂಪಾಯಿ ಭತ್ಯೆ ಮತ್ತು ರಾಜ್ಯ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಉಚಿತ ವಸತಿಗಳನ್ನು ಒದಗಿಸುವ ಮೂಲಕ ಅವರಿಗೆ ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ. " ಎಂದು ಮಮತಾ ಬ್ಯಾನರ್ಜಿ ಹೇಳಿದರು.

West Bengal CM Mamata announces monthly allowance, free housing for Brahmin priests ahead of elections

ಹಿಂದಿ ದಿವಸ್ ಬಗ್ಗೆ ಜನರಿಗೆ ಶುಭಾಶಯ ತಿಳಿಸಿದ ಅವರು, ತಮ್ಮ ಸರ್ಕಾರವು ಎಲ್ಲಾ ಭಾಷೆಗಳನ್ನು ಗೌರವಿಸುತ್ತದೆ ಮತ್ತು ಭಾಷಾ ಪಕ್ಷಪಾತವನ್ನು ಹೊಂದಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+