• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಎಂಸಿ ಬೆಂಬಲಿಗರಿಂದ ಅತ್ಯಾಚಾರ ಆರೋಪ: ಸುಪ್ರೀಂ ಮೆಟ್ಟಿಲೇರಿದ ಇಬ್ಬರು ಮಹಿಳೆಯರು

|
Google Oneindia Kannada News

ಕೋಲ್ಕತ್ತಾ, ಜೂ.14: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಂತರದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಟಿಎಂಸಿ ಬೆಂಬಲಿಗರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಇಬ್ಬರು ಮಹಿಳೆಯರು ಸುಪ್ರೀಂ ಮೆಟ್ಟಿಲೇರಿದ್ದಾರೆ. 17 ವರ್ಷದ ಅಪ್ರಾಪ್ತ ಬಾಲಕಿ ಹಾಗೂ 64 ವರ್ಷದ ಮಹಿಳೆ ಸುಪ್ರೀಂ ಕೋರ್ಟ್‌ಗೆ ಪಶ್ಚಿಮ ಬಂಗಾಳ ಚುನಾವಣೆ ನಂತರದ ಹಿಂಸಾಚಾರದ ಎಸ್‌ಐಟಿ / ಸಿಬಿಐ ತನಿಖೆಗಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಅತ್ಯಾಚಾರದ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ಮತದಾನದ ನಂತರದ ಹಿಂಸಾಚಾರದ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಿದ ಬಗ್ಗೆ ಸಿಬಿಐ / ಎಸ್‌ಐಟಿ ತನಿಖೆ ಕೋರಿ ಸಲ್ಲಿಸಿದ್ದ ಮನವಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.

ಬಾಂಗ್ಲಾ ಯುವತಿ ಗ್ಯಾಂಗ್ ರೇಪ್: ಜಡ್ಜ್ ಮುಂದೆ ಸಂತ್ರಸ್ತೆ ಹೇಳಿಕೆಬಾಂಗ್ಲಾ ಯುವತಿ ಗ್ಯಾಂಗ್ ರೇಪ್: ಜಡ್ಜ್ ಮುಂದೆ ಸಂತ್ರಸ್ತೆ ಹೇಳಿಕೆ

ಮೇ 9 ರಂದು ಟಿಎಂಸಿ ಬೆಂಬಲಿಗರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಪರಿಶಿಷ್ಟ ಜಾತಿ ಸಮುದಾಯದ 17 ವರ್ಷದ ಅಪ್ರಾಪ್ತ ಬಾಲಕಿ ಸಲ್ಲಿಸಿದ ಅರ್ಜಿಯಲ್ಲಿ, "ನಮ್ಮ ಪಕ್ಷವು ಚುನಾವಣೆಯಲ್ಲಿ ಗೆದ್ದಿದೆ. ಈಗ ಅವಳಿಗೆ ಪಾಠ ಕಲಿಸೋಣ," ಎಂದು 4 ಪುರುಷರ ಗುಂಪು ಬಾಲಕಿಯನ್ನು ತಡೆದು ಅತ್ಯಾಚಾರ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ನಾಲ್ವರು ಆರೋಪಿಗಳು ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಿರಂತರವಾಗಿ, ಒಬ್ಬೊಬ್ಬರಾಗಿ ಬಾಲಕಿಯ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ಎಸಗಿದ್ದಾರೆ. "ಬಿಜೆಪಿಯನ್ನು ಬೆಂಬಲಿಸುವ ನಿನಗೆ ಈಗ ನಾವು ಪಾಠ ಕಲಿಸುತ್ತೇವೆ," ಎಂದು ಹೇಳಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ. "ಅಷ್ಟೇ ಅಲ್ಲದೇ ಈ ಟಿಎಂಸಿ ಕಾರ್ಯಕರ್ತರು ಮರುದಿನ ಮನೆಗೆ ಬಂದು ಕುಟುಂಬದವರಿಗೆ ಬೆದರಿಕೆ ಹಾಕಿದ್ದಾರೆ. ಜಮೀನನ್ನು ಸುಟ್ಟುಹಾಕುವುದಾಗಿ ಹಾಗೂ ವಿಷಯ ದೊಡ್ಡದು ಮಾಡಿದರೆ ಕೊಲ್ಲುತ್ತೇವೆ ಎಂದು ಬೆದರಿಸಿದ್ದಾರೆ," ಎಂದು ಕೂಡಾ ಬಾಲಕಿ ಆರೋಪಿಸಿದ್ದಾರೆ.

ಇನ್ನು ಆಡಳಿತಾರೂಢ ರಾಜಕೀಯ ಪಕ್ಷವಾದ ತೃಣಮೂಲ ಕಾಂಗ್ರೆಸ್ ಬೆಂಬಲಿಗರಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿರುವ 60 ವರ್ಷದ ಮಹಿಳೆ ಸಲ್ಲಿಸಿರುವ ಅರ್ಜಿಯಲ್ಲಿ, ತನ್ನ ಕುಟುಂಬ ಸದಸ್ಯರ ಜೀವನ ಮತ್ತು ಸ್ವಾತಂತ್ರ್ಯವನ್ನು ಕಾಪಾಡಲು ಮನವಿ ಮಾಡಲಾಗಿದೆ. ಹಾಗೆಯೇ ನ್ಯಾಯ ದೊರಕಿಸಿಕೊಡಲು ಕೋರಿದ್ದಾರೆ.

Unforgettable 2020: ದೇಶದಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳುUnforgettable 2020: ದೇಶದಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳು

''ವಿಧಾನಸಭಾ ಚುನಾವಣೆಯ ಸಮಯದಲ್ಲಿ ತೃಣಮೂಲ ಕಾಂಗ್ರೆಸ್‌ ವಿರೋಧಿಸುವ ಅಥವಾ ವಿರೋಧಿಸಿದವರ ವಿರುದ್ಧ ಆಡಳಿತ ರಾಜಕೀಯ ಪಕ್ಷದ ಬೆಂಬಲಿಗರು ನಡೆಸಿದ ಹಿಂಸಾಚಾರಕ್ಕೆ ಇದು ಒಂದು ಸ್ಪಷ್ಟವಾದ ಜೀವಂತ ಉದಾಹರಣೆ,'' ಎಂದು ಅರ್ಜಿದಾರರು ಹೇಳಿದ್ದಾರೆ.

''ಟಿಎಂಸಿಯ ಐವರು ಕಾರ್ಯಕರ್ತರು ಬಲವಂತವಾಗಿ ಮನೆಗೆ ನುಗ್ಗಿ ನನ್ನ ಕೆನ್ನೆಗೆ ಬಾರಿಸಿ, ಥಳಿಸಿ, ಹಾಸಿಗೆಗೆ ಕಟ್ಟಿ ಹಾಕಿ, 6 ವರ್ಷದ ನನ್ನ ಮೊಮ್ಮಗನ ಎದುರೇ ಅತ್ಯಾಚಾರ ಎಸಗಿದ್ದಾರೆ'' ಎಂದು ದೂರಿದ್ದಾರೆ 60 ವರ್ಷದ ಮಹಿಳೆ.

(ಒನ್‌ಇಂಡಿಯಾ ಸುದ್ದಿ)

English summary
Two Women Allegedly Gang Raped By TMC Supporters during West Bengal Post-Poll Violence Move Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X