ಡಿ.8ರ ಭಾರತ್ ಬಂದ್‌ಗೆ ಮಮತಾ ಸರ್ಕಾರದ ಬೆಂಬಲವಿಲ್ಲ!

ಕೋಲ್ಕತಾ, ಡಿ .7: ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳನ್ನು ವಿರೋಧಿಸಿ ರೈತ ಸಮೂಹ ಕರೆ ನೀಡಿರುವ ಡಿ.8ರ ಭಾರತ್ ಬಂದ್‌ಗೆ ಮಮತಾ ಸರ್ಕಾರದ ಬೆಂಬಲ ವ್ಯಕ್ತಪಡಿಸಿಲ್ಲ. ರೈತರ ಪ್ರತಿಭಟನೆಗೆ ಹಕ್ಕೊತ್ತಾಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಆದರೆ, ಬಂದ್ ಆಚರಣೆ ಟಿಎಂಸಿ ಸಿದ್ಧಾಂತಕ್ಕೆ ವಿರೋಧವಾಗಿದೆ ಎಂದು ಟಿಎಂಸಿ ಸಂಸದ ಸೌಗತ ರಾಯ್ ಹೇಳಿದ್ದಾರೆ.

ಭಾರತ್ ಬಂದ್‌ಗೆ ಹತ್ತು ಹಲವು ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಪಂಜಾಬ್ ಹಾಗೂ ಹರ್ಯಾಣ ಮೂಲದ ರೈತರು ದೆಹಲಿ ಗಡಿ ಭಾಗದಲ್ಲಿ ನವೆಂಬರ್ 26ರಿಂದ ಪ್ರತಿಭಟನಾ ನಿರತರಾಗಿದ್ದಾರೆ. ಸರ್ಕಾರದ ಜೊತೆಗೆ ಸತತ ಮಾತುಕತೆ ವಿಫಲವಾಗಿದೆ.

ಕೇಂದ್ರ ಸರಕಾರ ರೈತರ ಹಾಗೂ ದೇಶ ವಿರೋಧಿ ಮತ್ತು ಕಾರ್ಪೋರೇಟ್ ಕಂಪನಿ ಪರವಾದ ಕೃಷಿ ಕಾಯ್ದೆಗಳು ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020 ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ - 2020 ಗಳನ್ನು ಬೇಷರತ್ತಾಗಿ ವಾಪಸ್ ಪಡೆಯುವಂತೆ ಒತ್ತಾಯಿಸಿ, ದೇಶದ 500 ಕ್ಕೂ ಹೆಚ್ಚು ರೈತ ಸಂಘಗಳು ಕಳೆದ ಹದಿನೈದು ದಿನಗಳಿಂದ ದೇಶದಾದ್ಯಂತ ರೈತರು ಹೋರಾಟ ನಡೆಸಿದ್ದಾರೆ.

Trinamool Congress not to support Bharat Bandh on Dec 08

ಆರ್ ಜೆಡಿ, ಎಡಪಕ್ಷಗಳು, ಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು, ಟ್ರೇಡ್ ಯೂನಿಯನ್, ಬ್ಯಾಂಕ್ ಯೂನಿಯನ್ಸ್ ಬೆಂಬಲ ವ್ಯಕ್ತಪಡಿಸಿವೆ.

"ನಮ್ಮ ಅಧಿನಾಯಕಿ ಸಿಎಂ ಮಮತಾ ಬ್ಯಾನರ್ಜಿ ಅವರು ರೈತರ ಸಂಘರ್ಷಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತ ವಿರೋಧಿ ವಿಧೇಯಕಗಳನ್ನು ಹಿಂಪಡೆದು, ಹೊಸ ಮಸೂದೆ ಮಂಡನೆ ಮಾಡಿ ಚರ್ಚೆ ಮಾಡಲಿ ಸ್ಥಾನಿಕ ಸಮಿತಿ ಅಥವಾ ಹೊಸ ಸಂಸದೀಯ ಸಮಿತಿ ಮುಂದೆ ಎಲ್ಲವೂ ಚರ್ಚೆಯಾಗಿ ಸಮತೋಲನವಾದ ವಿಧೇಯಕ ಹೊರಬರಲಿ'' ಎಂದು ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+