• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಕಿಂಗಿಗೆ ತೆರಳಿದ್ದ ಟಿಎಂಸಿ ನಾಯಕನ ಗುಂಡಿಕ್ಕಿ ಹತ್ಯೆ

|

ಕೋಲ್ಕತಾ, ಜೂನ್ 10: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣ ಮೂಲ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ದಕ್ಷಿಣ 24 ಪರಗಣಾಸ್ ಜಿಲ್ಲೆಯಲ್ಲಿ ಟಿಎಂಸಿ ಮುಖಂಡ ಅಮಿರ್ ಅಲಿ ಖಾನ್ ಅವರು ಬುಧವಾರದಂದು ಬೆಳಗ್ಗೆ ವಾಕಿಂಗಿಗೆ ತೆರಳಿದ್ದಾಗ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಜಿಲ್ಲೆಯ ಬಸಂತಿ ಪ್ರದೇಶದಲ್ಲಿ 56 ವರ್ಷ ವಯಸ್ಸಿನ ಅಮೀರ್ ಅಲಿ ಅವರ ಗುಂಡು ಹಾರಿಸಿ ಕೊಂದಿದ್ದಾರೆ. ಜೊತೆಗೆ ಕಚ್ಚಾಬಾಂಬ್ ಹಾಕಿದ್ದಾರೆ. ಇದರಿಂದ ಇನ್ನೂ ಮೂವರಿಗೆ ಗಾಯಗಳಾಗಿವೆ.

ತೃಣಮೂಲ ಕಾಂಗ್ರೆಸ್ಸಿನಲ್ಲಿ ಆಂತರಿಕ ಕಿತ್ತಾಟದ ಫಲವಾಗಿ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಟಿಎಂಸಿ ಯೂಥ್ ವಿಂಗ್ ಹಾಗೂ ಹಿರಿಯ ಮುಖಂಡರ ನಡುವೆ ವೈಮನಸ್ಯ ಹೆಚ್ಚಾಗಿದೆ ಎಂಬ ಸುದ್ದಿಯಿದೆ.

English summary
A local leader of the ruling Trinamool Congress was shot dead by unidentified persons in South 24 Parganas district of West Bengal on Wednesday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X