• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದಲ್ಲಿರುವ ಶೇ.30ರಷ್ಟು ಮುಸ್ಲಿಮರು ಒಂದಾದರೆ 4 ಪಾಕಿಸ್ತಾನ ರಚಿಸಬಹುದು: ಶೇಖ್ ಆಲಂ

|

ಕೋಲ್ಕತ್ತಾ, ಮಾರ್ಚ್ 26: ಭಾರತದಲ್ಲಿರುವ ಶೇ.30ರಷ್ಟು ಮುಸ್ಲಿಮರು ಒಂದಾದರೆ 4 ಪಾಕಿಸ್ತಾನ ರಚಿಸಬಹುದು ಎಂದು ಟಿಎಂಸಿ ಮುಖಂಡ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ಭಾರತದಲ್ಲಿರುವ ಶೇ.30ರಷ್ಟು ಮುಸಲ್ಮಾನರು ಒಂದಾದರೆ ಭಾರತದಲ್ಲಿ ನಾಲ್ಕು ಪಾಕಿಸ್ತಾನವನ್ನು ಸೃಷ್ಟಿ ಮಾಡಬಹುದು ಎಂದು ತೃಣಮೂಲಕ ಕಾಂಗ್ರೆಸ್ ಮುಖಂಡ ಶೇಖ್ ಆಲಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರೌಡಿ ರಾಜಕಾರಣ: ಬಂಗಾಳದಲ್ಲಿ ಪ್ರಧಾನಿ ಮೋದಿ ವಿರುದ್ಧ ಇದೆಂಥಾ ಆರೋಪ!?

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ನಾಯಕ ಪ್ರಚಾರ ಜೋರಾಗಿದ್ದು, ಪ್ರಚಾರದ ಭರದಲ್ಲಿ ಮತದಾರರ ಚಪ್ಪಾಳೆ ಗಿಟ್ಟಿಸಲು ಬಾಯಿಗೆ ಬಂದ ರೀತಿ ಹೇಳಿಕಗೆಳನ್ನು ನೀಡುತ್ತಿದ್ದಾರೆ.

ಇದೇ ರೀತಿ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡ ಶೇಖ್ ಆಲಂ ಭಾರತದ ಸಾರ್ವಭೌಮತ್ವವನ್ನು ಹೀಯಾಳಿಸಿ ಹೇಳಿಕೆ ನೀಡಿದ್ದು, ಭಾರತವನ್ನು ನಾಲ್ಕು ಪಾಕಿಸ್ತಾನಗಳಾಗಿ ರಚಿಸಬಹುದು ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ.

ಇತ್ತ ತಮ್ಮ ಹೇಳಿಕೆಗೆ ತನ್ನದೇ ಪಕ್ಷ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಎಚ್ಚೆತ್ತ ಟಿಎಂಸಿ ನಾಯಕ ಶೇಖ್ ಆಲಂ, ನಾನು ಯಾರ ಭಾವನೆಗಳನ್ನೂ ನೋಯಿಸಲು ಆ ಹೇಳಿಕೆ ನೀಡಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.

ಭಾರತದಲ್ಲಿ ಪಾಕಿಸ್ತಾನ ರಚಿಸಬೇಕೆಂದು ನಾನು ಎಂದೂ ಹೇಳಿಲ್ಲ. ಮುಸ್ಲಿಮರಿಗೆ ಬೆದರಿಕೆ ಹಾಕಿದ್ದರೆ ಅದನ್ನು ಎದುರಿಸಲು ನಮಗೆ ಗೊತ್ತಿದೆ ಎಂಬ ಸಂದೇಶವನ್ನು ಹೇಳಲು ಬಯಸಿದ್ದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತದಲ್ಲಿ 4 ಪಾಕಿಸ್ತಾನ ರಚಿಸಬಹುದು

ಭಾರತದಲ್ಲಿ 4 ಪಾಕಿಸ್ತಾನ ರಚಿಸಬಹುದು

ನಾವು ಮುಸ್ಲಿಮರು ಒಂದಾದರೇ ಭಾರತದಲ್ಲಿ 4 ಹೊಸ ಪಾಕಿಸ್ತಾನವನ್ನು ರಚಿಸಬಹುದು. ಆಗ ಶೇ. 70ರಷ್ಟಿರುವ ಅವರು ಎಲ್ಲಿಗೆ ಹೋಗುತ್ತಾರೆ. ನಾವು ಚದುರಿ ಹೋಗಿದ್ದು ನಾವು ಮುಸ್ಲಿಮರು ಒಂದಾದರೆ ಇಲ್ಲಿ ನಾಲ್ಕು ಪಾಕಿಸ್ತಾನವನ್ನು ರಚಿಸಬಹುದು ಎಂದು ಹೇಳಿದ್ದಾರೆ.

ಭಾರತದಲ್ಲಿ ಶೇ.30ರಷ್ಟು ಮುಸ್ಲಿಮರಿದ್ದಾರೆ

ಭಾರತದಲ್ಲಿ ಶೇ.30ರಷ್ಟು ಮುಸ್ಲಿಮರಿದ್ದಾರೆ

ಪಶ್ಚಿಮ ಬಂಗಾಳದ ಬಿರ್ಭಮ್‌ನ ನಾನೂರ್‌ನಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಶೇಖ್ ಆಲಂ, 'ಭಾರತದಲ್ಲಿ ನಾವು ಮುಸ್ಲಿಮರು ಶೇ.30ರಷ್ಟಿದ್ದೇವೆ ಮತ್ತು ಅವರು ಶೇ.70ರಷ್ಟಿದ್ದಾರೆ. ಶೇ.70ರರಷ್ಟಿರುವವರ ಬೆಂಬಬಲದೊಂದಿಗೆ ಅವರು ಅಧಿಕಾರಕ್ಕೆ ಬರುತ್ತಾರೆ. ನಿಜಕ್ಕೂ ನಾಚಿಕೆಪಡಬೇಕು.

ಟಿಎಂಸಿ ನಿಜವಾದ ಬಣ್ಣ ಬಯಲು

ಟಿಎಂಸಿ ನಿಜವಾದ ಬಣ್ಣ ಬಯಲು

ಶೇಖ್ ಆಲಂ ಹೇಳಿಕೆ ನೀಡಿರುವ ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಆಲಂ ಹೇಳಿಕೆ ವ್ಯಾಪಕ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಈ ವಿಡಿಯೊ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯಾ, ಇದು ಟಿಎಂಸಿಯ ನಿಜವಾದ ಬಣ್ಣವನ್ನು ಬಯಲು ಮಾಡುತ್ತದೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಭಾರತದಲ್ಲಿ ಇದ್ದುಕೊಂಡು ಯಾರಾದರೂ ದೇಶವನ್ನು ಪಾಕಿಸ್ತಾನವನ್ನಾಗಿ ಪರಿವರ್ತಿಸುವಂತೆ ಹೇಳಲು ಹೇಗೆ ಸಾಧ್ಯ? ಇದನ್ನು ನಡೆಯಲು ನಾವು ಎಂದಿಗೂ ಬಿಡುವುದಿಲ್ಲ. ರಾಜ್ಯದ ಮತ್ತು ದೇಶದ ಜನತೆಗೆ ಮಮತಾ ಬ್ಯಾನರ್ಜಿ ಉತ್ತರಿಸಬೇಕಿದೆ ಎಂದು ಕಿಡಿ ಕಾರಿದ್ದಾರೆ.

ಶೇಖಂ ಆಲಂ ಪಕ್ಷದ ಕಾರ್ಯಕರ್ತ ಅಲ್ಲ ಎಂದು ಟಿಎಂಸಿ ಹೇಳಿಕೆ

ಶೇಖಂ ಆಲಂ ಪಕ್ಷದ ಕಾರ್ಯಕರ್ತ ಅಲ್ಲ ಎಂದು ಟಿಎಂಸಿ ಹೇಳಿಕೆ

ಶೇಖ್ ಆಲಂ ಹೇಳಿಕೆ ವಿಚಾರ ಎಲ್ಲೆಡೆ ಹರಡಲು ಶುರುವಾಗುತ್ತಿದ್ದಂತೆ, ಈ ಬಗ್ಗೆ ಟಿಎಂಸಿ ಹೇಳಿಕೆ ಬಿಡುಗಡೆ ಮಾಡಿದ್ದು, ಶೇಖ್ ಆಲಂ ಪಕ್ಷದ ಕಾರ್ಯಕರ್ತನಲ್ಲ. ಆತನ ಹೇಳಿಕೆಯನ್ನು ಪಕ್ಷವು ಬೆಂಬಲಿಸುತ್ತಿಲ್ಲ ಎಂದಿದೆ.

English summary
Trinamool Congress (TMC) leader Sheikh Alam’s purported remarks that “four Pakistan” can be created if India’s “30% Muslims come together” drew flak from the Bharatiya Janata Party (BJP) on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X