• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೃಣಮೂಲ ಕಾಂಗ್ರೆಸ್ ಪಟ್ಟಿ ಬಿಡುಗಡೆ; ನಂದಿಗ್ರಾಮದ ಕಣದಲ್ಲಿ ಮಮತಾ ಬ್ಯಾನರ್ಜಿ

|

ಕೋಲ್ಕತ್ತಾ, ಮಾರ್ಚ್ 5: ಮಾರ್ಚ್ 27ರಂದು ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಲಿರುವ 291 ಅಭ್ಯರ್ಥಿಗಳ ಹೆಸರನ್ನು ಶುಕ್ರವಾರ ಘೋಷಿಸಿರುವ ಅವರು, ತಾವು "ನಂದಿಗ್ರಾಮ"ದಿಂದ ಸ್ಪರ್ಧಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಈಚೆಗೆ ಟಿಎಂಸಿ ತೊರೆದು ಹೋದ ಸುವೇಂದು ಅಧಿಕಾರಿ ವಿರುದ್ಧವಾಗಿ ನಂದಿಗ್ರಾಮದಲ್ಲಿ ಕಣಕ್ಕಿಳಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಅಭ್ಯರ್ಥಿಗಳ ಪಟ್ಟಿಯ ವಿವರ ಮುಂದಿದೆ...

 20 ಶಾಸಕರನ್ನು ಪಟ್ಟಿಯಿಂದ ಕೈಬಿಟ್ಟ ಟಿಎಂಸಿ

20 ಶಾಸಕರನ್ನು ಪಟ್ಟಿಯಿಂದ ಕೈಬಿಟ್ಟ ಟಿಎಂಸಿ

291 ಅಭ್ಯರ್ಥಿಗಳ ಪಟ್ಟಿಯಿಂದ ಹಿಂದಿನ 20 ಶಾಸಕರನ್ನು ಹಾಗೂ ಪಾರ್ಥ ಚಟ್ಟೋಪಾಧ್ಯಾಯ, ಅಮಿತ್ ಮಿತ್ರಾ ಅವರನ್ನೊಳಗೊಂಡಂತೆ ಉನ್ನತ ಸಚಿವರನ್ನು ಈ ಬಾರಿ ಕೈಬಿಡಲಾಗಿದೆ. 80 ವರ್ಷ ಮೇಲ್ಪಟ್ಟ ಬಹುಪಾಲು ಸದಸ್ಯರನ್ನೂ ಪಟ್ಟಿಯಿಂದ ಹೊರಗುಳಿಸಲಾಗಿದೆ. 294 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳನ್ನು ತಮ್ಮ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದು ಅಲ್ಲಿ ಟಿಎಂಸಿ ಸ್ಪರ್ಧಿಸುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ...ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ...

ಈ ಬಾರಿ ನಂದಿ ಗ್ರಾಮದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿದ್ದು, ಅವರು ಈ ಹಿಂದೆ ಸ್ಪರ್ಧಿಸಿದ್ದ ಭವಾನಿಪುರದಿಂದ ಹಿರಿಯ ಟಿಎಂಸಿ ಸಚಿವ ಸೋವಂದೇವ್ ಚಟರ್ಜಿ ಸ್ಪರ್ಧಿಸುತ್ತಿದ್ದಾರೆ.

 27 ಹೊಸ ಮುಖಗಳಿಗೆ ಅವಕಾಶ

27 ಹೊಸ ಮುಖಗಳಿಗೆ ಅವಕಾಶ

ಈ ಬಾರಿ 50 ಮಹಿಳಾ ಅಭ್ಯರ್ಥಿಗಳು, 42 ಮುಸ್ಲಿಂ ಅಭ್ಯರ್ಥಿಗಳು, 79 ಪರಿಶಿಷ್ಟ ಜಾತಿ ಹಾಗೂ 17 ಪರಿಶಿಷ್ಟ ವರ್ಗದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ. ಹಲವು ಕಾರಣಗಳಿಂದಾಗಿ 27-28 ಅಭ್ಯರ್ಥಿಗಳನ್ನು ಈ ಬಾರಿ ಮರಳಿ ತಂದಿಲ್ಲ. 80 ವರ್ಷ ಮೇಲ್ಪಟ್ಟ ಯಾರಿಗೂ ಟಿಕೆಟ್ ನೀಡಿಲ್ಲ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. 27 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಪ್ರೊಫೆಸರ್‌ಗಳಿಗೆ ಹಾಗೂ ವೈದ್ಯರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ.

 ಬೆಹಾಲಾ ಪುರ್ಬದಲ್ಲಿ ಪತಿ ವಿರುದ್ಧ ಪತ್ನಿ ಕಣಕ್ಕೆ

ಬೆಹಾಲಾ ಪುರ್ಬದಲ್ಲಿ ಪತಿ ವಿರುದ್ಧ ಪತ್ನಿ ಕಣಕ್ಕೆ

ಟಿಎಂಸಿಯಲ್ಲಿ ಪ್ರಮುಖರಾಗಿರುವ ದೆಬಾಶಿಶ್ ಕುಮಾರ್ ರಾಶ್‌ಬೆಹಾರಿಯಿಂದ ಸ್ಪರ್ಧಿಸುತ್ತಿದ್ದಾರೆ. ಸಿನಿಮಾ ನಿರ್ದೇಶಕ ರಾಜ್ ಚಕ್ರವರ್ತಿ ಬಾರಕ್‌ಪೋರ್‌ ಇಂದ ಕಣಕ್ಕಿಳಿಯಲಿದ್ದಾರೆ. ಟಿಎಂಸಿ ತೊರೆದು ಈಚೆಗೆ ಬಿಜೆಪಿ ಸೇರಿದ್ದ ಸೋವನ್ ಚಟರ್ಜಿ ಅವರ ಪತ್ನಿ ರತ್ನಾ ಚಟರ್ಜಿ ಅವರನ್ನು, ಸೋವನ್ ಪ್ರತಿನಿಧಿಸಿದ್ದ ಬೆಹಾಲಾ ಪುರ್ಬ ಕ್ಷೇತ್ರದಿಂದಲೇ ಕಣಕ್ಕಿಳಿಸಲಾಗಿದೆ. ಕೋಲ್ಕತ್ತಾ ಮೇಯರ್ ಆಗಿದ್ದ ಸೋವನ್ ಚಟರ್ಜಿ ಅವರಿಂದ ಅವರ ಪತ್ನಿ ಈಚೆಗೆ ದೂರವಾಗಿದ್ದು, ಅವರನ್ನು ಅದೇ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲಾಗಿದೆ. ಅತಿನ್ ಘೋಷ್ ಬೆಲ್ಗಾಚಿಯಾದಿಂದ ಸ್ಪರ್ಧಿಸಲಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ: ಮಮತಾ ವಿರುದ್ಧ ಸುವೇಂದು ಅಧಿಕಾರಿ ಸ್ಪರ್ಧೆ?ಪಶ್ಚಿಮ ಬಂಗಾಳ ಚುನಾವಣೆ: ಮಮತಾ ವಿರುದ್ಧ ಸುವೇಂದು ಅಧಿಕಾರಿ ಸ್ಪರ್ಧೆ?

 ಟಿಎಂಸಿ ಸೇರಿದ ನಟ ನಟಿಯರ ಕ್ಷೇತ್ರ ಯಾವುದು?

ಟಿಎಂಸಿ ಸೇರಿದ ನಟ ನಟಿಯರ ಕ್ಷೇತ್ರ ಯಾವುದು?

ಫುಟ್‌ಬಾಲ್ ಮಾಜಿ ಆಟಗಾರ ವಿದೇಶ್ ಬೋಸ್ ಅವರು ಉಲುಬೆರಿಯಾದಿಂದ ಸ್ಪರ್ಧೆಗೆ ಇಳಿಯಲಿದ್ದು, ಟಿಎಂಸಿ ಇಂದ ಹಲವು ಕ್ಷೇತ್ರಗಳಲ್ಲಿ ನಟ ನಟಿಯರು ಸ್ಪರ್ಧಿಸಲಿದ್ದಾರೆ.

  • ವಿವೇಕ್ ಗುಪ್ತಾ- ಜೊರಾಸಾಂಕೊ
  • ಲವ್ಲಿ ಮಾಯ್ಟ್ರಾ- ಸೋನಾರ್‌ಪುರ
  • ಕೌಶಾನಿ ಮುಖರ್ಜಿ- ಕೃಷ್ಣಾ ನಗರ
  • ಸೋಹಂ- ಚಂದ್ರಾಪುರ
  • ಸಯಾನಿ ಘೋಷ್-ಅಸನ್ಸೋಲ್
  • ಬಿರ್ಬಾಹ ಹನ್ಸದಾ- ಝಾರ್‌ಗ್ರಾಮ್
 ಪ್ರಶಾಂತ್ ಕಿಶೋರ್ ನೆರವಿನಿಂದ ಪಟ್ಟಿ ಸಿದ್ಧ

ಪ್ರಶಾಂತ್ ಕಿಶೋರ್ ನೆರವಿನಿಂದ ಪಟ್ಟಿ ಸಿದ್ಧ

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಸಹಾಯದೊಂದಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದು, ಸಾಕಷ್ಟು ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಅಭ್ಯರ್ಥಿ ಬಗ್ಗೆ ಜನರಿಗಿರುವ ಅಭಿಪ್ರಾಯ ಕಲೆಹಾಕಿ ಅವರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಬಾರಿ ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಪ್ರತಿ ಹಂತದ ಚುನಾವಣೆಯಲ್ಲೂ ಮೋದಿಯಿಂದ 2 ರ‍್ಯಾಲಿ?ಪಶ್ಚಿಮ ಬಂಗಾಳದ ಪ್ರತಿ ಹಂತದ ಚುನಾವಣೆಯಲ್ಲೂ ಮೋದಿಯಿಂದ 2 ರ‍್ಯಾಲಿ?

 ಮಾರ್ಚ್ 27ರಿಂದ ಎಂಟು ಹಂತಗಳಲ್ಲಿ ಚುನಾವಣೆ

ಮಾರ್ಚ್ 27ರಿಂದ ಎಂಟು ಹಂತಗಳಲ್ಲಿ ಚುನಾವಣೆ

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿದ್ದು, ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಮೊದಲ ಹಂತ: ಮಾರ್ಚ್ 27
ಎರಡನೇ ಹಂತ: ಏಪ್ರಿಲ್ 1
ಮೂರನೇ ಹಂತ: ಏಪ್ರಿಲ್ 6
ನಾಲ್ಕನೇ ಹಂತ: ಏಪ್ರಿಲ್ 10
ಐದನೇ ಹಂತ: ಏಪ್ರಿಲ್ 17
ಆರನೇ ಹಂತ: ಏಪ್ರಿಲ್ 22
ಏಳನೇ ಹಂತ: ಏಪ್ರಿಲ್ 26
ಎಂಟನೇ ಹಂತ: ಏಪ್ರಿಲ್ 29

English summary
TMC Supremo and West Bengal CM Mamata Banerjee has announced Candidates list for upcoming West Bengal Assembly Election 2021 on friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X