'2024ರ ಚುನಾವಣೆಯಲ್ಲಿ ಬೀದಿ ಹೋರಾಟಗಾರ್ತಿ ಮಮತಾ ಗೇಮ್ ಚೇಂಜರ್'
ನವದೆಹಲಿ, ಏಪ್ರಿಲ್ 17: ಮೂರು ಲಕ್ಷ ಮತಗಳಿಂದ ಟಿಎಂಸಿಯಿಂದ ಅಸನ್ಸೋಲ್ ಸಂಸದೀಯ ಸ್ಥಾನವನ್ನು ಗೆದ್ದು ಒಂದು ದಿನದ ನಂತರ ಶತ್ರುಘ್ನ ಸಿನ್ಹಾ ಮಮತಾ ಬ್ಯಾನರ್ಜಿಯನ್ನು ಹಾಡಿಹೊಗಳಲಿದ್ದಾರೆ. "ಪಕ್ಷದ 'ಬೀದಿ ಹೋರಾಟಗಾರ್ತಿ' ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ "ಗೇಮ್ ಚೇಂಜರ್" ಆಗಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಸಾಬೀತುಪಡಿಸುತ್ತಾರೆ ಎಂದು ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಶತ್ರುಘ್ನ ಸಿನ್ಹಾ ತೃಣಮೂಲ ಕಾಂಗ್ರೆಸ್ ಮೊದಲ ಬಾರಿಗೆ ಗೆದ್ದಿರುವ ಅಸನ್ಸೋಲ್‌ನ ಕ್ರೆಡಿಟ್ ಅನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೀಡಿದ್ದಾರೆ.
'ಶಾಟ್‌ಗನ್ ಸಿನ್ಹಾ' ಎಂದು ಕರೆಯಲ್ಪಡುವ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ತಮ್ಮ ರಾಜಕೀಯ ಜೀವನವನ್ನು ಬಿಜೆಪಿಯಲ್ಲಿ ಪ್ರಾರಂಭ ಮಾಡಿದರು. ಆದರೆ 2019 ರ ಸಂಸತ್ ಚುನಾವಣೆಗೆ ಮೊದಲು ಕಾಂಗ್ರೆಸ್‌ಗೆ ಮತ್ತು ಈಗ ಟಿಎಂಸಿಗೆ ಸೇರ್ಪಡೆ ಆಗಿದ್ದಾರೆ. "ಈಗ ನಾನು ಸರಿಯಾದ ದಿಕ್ಕಿನಲ್ಲಿ ಇದ್ದೇನೆ," ಎಂದು ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

"ಸರಿಯಾದ ದಿಕ್ಕನ್ನು ಹುಡುಕಲು ನಾವು ಸಾಕಷ್ಟು ಪ್ರಯಾಣಿಸಬೇಕು. ನನಗೆ ಈಗ ಸರಿಯಾದ ದಿಕ್ಕು ಲಭಿಸಿದೆ. ಕೊನೆಯ ತಾಣ ಲಭ್ಯವಾಗಿದೆ," ಎಂದು ಹೇಳುವ ಮೂಲಕ ಶತ್ರುಘ್ನ ಸಿನ್ಹಾ ರಾಜಕೀಯದಲ್ಲಿ ಟಿಎಂಸಿ ತನ್ನ ಅಂತಿಮ ತಾಣ ಎಂದು ಹೇಳಿಕೊಂಡಿದ್ದಾರೆ.
ತೃಣಮೂಲ ಕಾಂಗ್ರೆಸ್‌ನೊಂದಿಗೆ ಹೊಸ ಮತ್ತು "ಅತ್ಯುತ್ತಮ ಇನ್ನಿಂಗ್ಸ್" ಪ್ರಾರಂಭಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ ಶತ್ರುಘ್ನ ಸಿನ್ಹಾ ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ತಂದ ನಂತರ ಬ್ಯಾನರ್ಜಿ ದೇಶಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ ಎಂದಿದ್ದಾರೆ.
ಖೇಲ್ ಹೋಬ್ ಉಲ್ಲೇಖಿಸಿದ ಶತ್ರುಘ್ನ ಸಿನ್ಹಾ
"ಅಸನ್ಸೋಲ್‌ನಲ್ಲಿನ ವಿಜಯವು ಬ್ಯಾನರ್ಜಿಯವರ ಸಮರ್ಥ ನಾಯಕತ್ವ ಮತ್ತು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರ ಶ್ರಮದಿಂದಾಗಿ ಲಭ್ಯವಾಗಿದೆ. ಇದು ಅವರ 'ಖೇಲ್ ಹೋಬ್' (ಆಟ ನಡೆಯುತ್ತಿದೆ) ಘೋಷಣೆಯ ವಿಸ್ತರಣೆಯಾಗಿ ನೋಡಬಹುದು," ಎಂದು ಶತ್ರುಘ್ನ ಸಿನ್ಹಾ ಉಲ್ಲೇಖ ಮಾಡಿದ್ದಾರೆ. " ಬಿಜೆಪಿಯ ಹಣ ಮತ್ತು ಅಧಿಕಾರದ ದುರುಪಯೋಗ ಹೊರತಾಗಿಯೂ 2021 ರಲ್ಲಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಟಿಎಂಸಿ ಬಿಜೆಪಿಯನ್ನು ಸೋಲಿಸಿದೆ," ಎಂದರು.

ದೀದಿ ಬೀದಿ ಹೋರಾಟಗಾರ್ತಿ ಎಂದ ಸಿನ್ಹಾ
"ಮಮತಾ ದೀದಿ ಅವರು ಬೀದಿ ಹೋರಾಟಗಾರ್ತಿ ಆಗಿದ್ದಾರೆ. ಅವರ ಜನಪ್ರಿಯತೆ ದೇಶದಲ್ಲಿ ಹರಡಿದೆ. ವಿಶೇಷವಾಗಿ 2021 ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಟಿಎಂಸಿ ಕೇಂದ್ರ ಸ್ಥಾನದಲ್ಲಿದೆ. ಬಿಜೆಪಿಯು ಹಣ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರೂ ಸಹ ಟಿಎಂಸಿ ಗೆಲುವು ಸಾಧಿಸಿದೆ," ಎಂದರು.
2024 ರ ಲೋಕಸಭೆ ಚುನಾವಣೆಗೆ ಮೊದಲು ಬಂಗಾಳ ಬಿಟ್ಟು ಬೇರೆ ರಾಜ್ಯದಲ್ಲೂ ಟಿಎಂಸಿಯ ಹೆಜ್ಜೆಗುರುತನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆಯಿರುವ ಸಿನ್ಹಾ, "ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ದೀದಿ ಆಟ ಬದಲಾಯಿಸುವವರೆಂದು ಸಾಬೀತುಪಡಿಸುತ್ತಾರೆ," ಎಂದು ಹೇಳಿದರು.
ಬಿಜೆಪಿಗೆ ರಾಜೀನಾಮೆ ನೀಡಿ ಟಿಎಂಸಿಗೆ ಸೇರ್ಪಡೆಗೊಂಡ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ರಾಜೀನಾಮೆಯಿಂದಾಗಿ ಅಸನ್ಸೋಲ್ ಲೋಕಸಭಾ ಉಪಚುನಾವಣೆ ಅನಿವಾರ್ಯವಾಗಿತ್ತು. ಬಾಬುಲ್ ಸುಪ್ರಿಯೊ ಒಂದು ದಿನದ ಹಿಂದೆ ಬ್ಯಾಲಿಗುಂಜ್ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಅಸನ್ಸೋಲ್ ಉಪಚುನಾವಣೆಯಲ್ಲಿ ಬಿಜೆಪಿಯು ತನ್ನನ್ನು "ಹೊರಗಿನವನು" ಎಂದು ಟ್ಯಾಗ್ ಮಾಡುವುದನ್ನು ವಿರೋಧಿಸಿದ ಶತ್ರುಘ್ನ ಸಿನ್ಹಾ ನಾನು ಸಾಕಷ್ಟು ಬೆಂಗಾಲಿ ಚಲನಚಿತ್ರಗಳನ್ನು ಮಾಡಿದ್ದೇನೆ ಎಂದಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications