ಪಶ್ಚಿಮ ಬಂಗಾಳದಲ್ಲಿ ದೀದಿ ಪರ ಅಖಾಡಕ್ಕಿಳಿದ ಪ್ರಶಾಂತ್ ಕಿಶೋರ್

ಕೋಲ್ಕತ್ತಾ, ಜುಲೈ 10: ಪ್ರಖ್ಯಾತ ಪೊಲಿಟಿಕಲ್ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್ ಅವರು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು 2021 ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಲೇಬೇಕೆಂಬ ಪಣತೊಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 5 ಲಕ್ಷ ಯುವಕರನ್ನು ರಾಜಕೀಯಕ್ಕೆ ಸೇರಿಸುವ ಪ್ರಯತ್ನಕ್ಕೆ ಅವರು ಕೈ ಹಾಕಿದ್ದಾರೆ. ದಿನಕ್ಕೆ ಐದು ಸಾವಿರ ಯುವಕರನ್ನು ರಾಜಕೀಯಕ್ಕೆ ಸೇರಿಸಲು ಕಿಶೋರ್ ತಂಡ ಮುಂದಾಗಿದ್ದು, ಎರಡು ವರ್ಷದ ನಂತರ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಭದ್ರ ಬುನಾದಿ ಹಾಕಲು ಮುಂದಾಗಿದೆ.

ಮೊದಲು ಐದು ಲಕ್ಷ ಸದಸ್ಯರನ್ನು ಈ ಅಭಿಯಾನದಡಿ ದಾಖಲಿಸಿ, ನಂತರ ಅವರಿಗೆ ತರಬೇತಿ ನೀಡಿ, ಅವರಿಗೆ ಇಷ್ಟವಿರುವ ರಾಜಕಿಯ ಪಕ್ಷವನ್ನು ಸೇರಲು ಸ್ವಾತಂತ್ರ್ಯ ನೀಡಲಾಗುತ್ತದೆ.

Strategist Prashant Kishor to woo 5 lakh youth to join politics in WB

ಇವರಲ್ಲಿ ಬಹುತೇಕ ಜನರು ಟಿಎಂಸಿ ಗೇ ಬೆಂಬಲನೀಡಬಹುದಾದ ಸಾಧ್ಯತೆ ಇರುವುದರಿಂದ ಇದರಿಂದ ಪಕ್ಷಕ್ಕೇ ಲಾಭವಾಗಲಿದೆ.

ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವನೆಯ ನಂತರ ತೃಣಮೂಲ ಕಾಂಗ್ರೆಸ್ ನ ಭದ್ರಕೋಟೆಯನ್ನು ಬಿಜೆಪಿ ಭೇದಿಸುತ್ತಿರುವುದು ಸಾಬೀತಾಗಿದೆ. 2014 ರ ಲೋಕಸಭೆ ಚುನಾವಣೆಯಲ್ಲಿ ಕೇಲವ ಎರಡು ಕ್ಷೇತ್ರಗಳಲ್ಲಿ ಗೆಲುವು ಸಸಾಧಿಸಿದ್ದ ಬಿಜೆಪಿ ಈ ಬಾರಿ ಅಚ್ಚರಿ ಎಂಬಂತೆ ಬರೋಬ್ಬರಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವಿದ್ದಿದ್ದರಿಂದ ಮಮತಾ ಬ್ಯಾನರ್ಜಿ ಅವರು ಪ್ರಶಾಂತ್ ಕಿಶೋರ್ ಅವರ ಮೊರೆಹೋಗಿದ್ದಾರೆ. ಲೋಕಸಭೆ ಚುನಾವಣೆಯ ನಂತರ ಬಂಗಾಳ ರಾಜಕೀಯದಲ್ಲೂ ಬದಲಾವಣೆಯಾಗುತ್ತಿದ್ದು, ಹಲವು ಟಿಎಂಸಿ ಸದಸ್ಯರು ಈಗಾಗಲೇ ಬಿಜೆಪಿ ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+