ಎನ್‌ಆರ್‌ಸಿ ಭಯಕ್ಕೆ ಆರು ಮಂದಿ ಸಾವು ಎಂದು ಗುಡುಗಿದ ಮಮತಾ

ಕೋಲ್ಕತ್ತ, ಸೆಪ್ಟೆಂಬರ್ 24: ಎನ್‌ಆರ್‌ಸಿ ಭಯಕ್ಕೆ ಆರು ಮಂದಿ ಬಲಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ ಭಯದಿಂದ ಪಶ್ಚಿಮ ಬಂಗಾಳದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಎನ್‌ಆರ್‌ಸಿ ಮುಂದಿಟ್ಟುಕೊಂಡು ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯ ಕುರಿತು ಮಾತನಾಡಿದ ಅವರು, 'ಎಬಿವಿಪಿ, ಬಿಜೆಪಿ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಮಾಡಿದ್ದನ್ನು ನಾವು ನೋಡಿದ್ದೇವೆ, ಅವರು ಎಲ್ಲೆಡೆ ಅಧಿಕಾರವನ್ನು ಚಲಾಯಿಸಲು ಬಯಸುತ್ತಾರೆ' ಎಂದರು.

Six People Died In Bengal Due To NRC Fear

ಬಿಜೆಪಿಗೆ ನಾಚಿಕೆಯಾಗಬೇಕು ಎನ್ಆರ್ಸಿಯಿಂದಾಗಿ ಬಂಗಾಳದಲ್ಲಿ ಆರು ಜನರ ಸಾವಿಗೆ ಕಾರಣವಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿಯನ್ನು ಜಾರಿಗೆ ತರಲು ಬಿಜೆಪಿಯ ಕ್ರಮಗಳನ್ನು ಟೀಕಿಸಿದ ಅವರು, ಬಂಗಾಳದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಆದರೆ ಇದು ದೇಶದ ಇತರ ಭಾಗಗಳಲ್ಲಿ ಅಪಾಯದಲ್ಲಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲು ಬೇಸರವಾಗುತ್ತಿದೆ. ಜನರ ಸಾವಿಗೆ ಕಾರಣವಾದ ಎನ್‌ಆರ್‌ಸಿ ಆತಂಕ ಸೃಷ್ಟಿಸಿದ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.

ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿಗೆ ಅನುಮತಿ ನೀಡಲ್ಲ ಎಂದು ಗುಡುಗಿರುವ ಅವರು ಬಂಗಾಳ ಆಗಲಿ, ಯಾವುದೇ ಪ್ರದೇಶವಾಗಲಿ ಎನ್‌ಆರ್‌ಸಿಗೆ ಅವಕಾಶ ನೀಡಬಾರದು. ಹಿಂದೂ, ಮುಸಲ್ಮಾನರನ್ನು ವಿಭಜಿಸಲು ಎನ್‌ಆರ್‌ಸಿ ಕುರಿತ ಹೇಳಿಕೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+