ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ: ಟಿಎಂಸಿ ಸೇರ್ಪಡೆಯಾದ ಸಿನಿ ತಾರೆಯರು

ಕೋಲ್ಕತ್ತ,ಫೆಬ್ರವರಿ 05: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಈ ಸಂದರ್ಭದಲ್ಲಿ ಹಲವು ಸಿನಿ ತಾರೆಯರು ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಬಂಗಾಳ ಸಿನಿಮಾ ತಾರೆಯರಾದ ದೀಪಾಂಕರ್ ದೇ, ಭರತ್‌ ಕೌಲ್ ಹಾಗೂ ಲೌವ್ಲಿ ಮೈತ್ರಾ ಮತ್ತು ಸಂಗೀತ ನಿರ್ದೇಶಕ ಶವೋನಾ ಖಾನ್‌ ಶುಕ್ರವಾರ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕೋಲ್ಕತಾದಲ್ಲಿರುವ ತೃಣಮೂಲ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಖ್ಯಾತನಾಮರು ತೃಣಮೂಲ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Several Bengali Actors Including Dipankar Dey Join Trinamool Congress Ahead Of State Assembly Polls

ಬಿಜೆಪಿ ತಮ್ಮ ಪಶ್ಚಿಮ ಬಂಗಾಳದ ನಾಯಕರನ್ನು ಅವಮಾನಿಸುತ್ತಿದೆ. ಸ್ಥಳೀಯ ನಾಯಕರಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲ. ಹೀಗಾಗಿ ಚಾರ್ಟರ್ಡ್‌ ವಿಮಾನ ಮೂಲಕ ದೆಹಲಿಗೆ ಹೋಗಿ ಬಿಜೆಪಿ ಸೇರಿದ್ದಾರೆ ಎಂದು ಮಮತಾ ಹೇಳಿದ್ದಾರೆ.

ಆಡಳಿತರೂಢ ತೃಣಮೂಲ ಕಾಂಗ್ರೆಸ್‌ನ ಘಟಾನುಘಟಿ ನಾಯಕರನ್ನೇ ಪಕ್ಷಕ್ಕೆ ಸೆಳೆಯುವ ಮೂಲಕ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದ್ದರೇ, ಸಿನಿಮಾ ತಾರೆಯರನ್ನು ಪಕ್ಷಕ್ಕೆ ಕರೆಸಿಕೊಳ್ಳುವ ಮೂಲಕ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ಮುಂದುವರೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+