ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾಳದಲ್ಲಿ ಮತ್ತೆ ಬಿಜೆಪಿ ಕಾರ್ಯಾಚರಣೆ: ಮಿಥುನ್ ಹೇಳಿಕೆ ಮರ್ಮವೇನು?

|
Google Oneindia Kannada News

ತೃಣಮೂಲ ಕಾಂಗ್ರೆಸ್‌ನ ಮೂರು ಡಜನ್‌ಗಿಂತಲೂ ಹೆಚ್ಚು ಬಂಗಾಳದ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಟ ಮಿಥುನ್ ಚಕ್ರವರ್ತಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೃಹತ್ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಲುಕಿದ ಸಚಿವರು ಮತ್ತು ಅವರ ಸಹಾಯಕರ ಬಂಧನದಿಂದ ಪಕ್ಷದೊಳಗೆ ತೊಂದರೆ ಉಂಟಾಗಿದೆ ಎಂದು ಹೇಳಿದ್ದಾರೆ.

"ನಾನು ನಿಮಗೆ ಎಲ್ಲಾ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ. ಈ ಸಮಯದಲ್ಲಿ 38 ಟಿಎಂಸಿ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಅವರಲ್ಲಿ 21 ಮಂದಿ ನನ್ನೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ'' ಎಂದು ನಟ ಹೇಳಿದ್ದಾರೆ.

ರೋಹಿತ್ ಚಕ್ರತೀರ್ಥ ಧಮ್ ಇದ್ದರೆ ಮಂಗಳೂರಿಗೆ ಬರಲಿ: ಮಿಥುನ್ ರೈ ಸವಾಲ್ ರೋಹಿತ್ ಚಕ್ರತೀರ್ಥ ಧಮ್ ಇದ್ದರೆ ಮಂಗಳೂರಿಗೆ ಬರಲಿ: ಮಿಥುನ್ ರೈ ಸವಾಲ್

ಕಳೆದ ವರ್ಷ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯು ಈ ನಟನನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದ್ದು, ರಾಜ್ಯದಲ್ಲಿ ದೊಡ್ಡ ಗೆಲುವು ಸಾಧಿಸುವ ಪ್ರಯತ್ನದಲ್ಲಿದೆ. ಬಿಜೆಪಿಯ "ಮುಸ್ಲಿಂ ವಿರೋಧಿ" ಚಿತ್ರದ ಬಗ್ಗೆ ಮಾತನಾಡಿದ ನಟ, "ಇದೀಗ ದೇಶದ ಮೂರು ದೊಡ್ಡ ತಾರೆಗಳು ಮುಸ್ಲಿಮರು - ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್. ಹೀಗಿರುವಾಗ ಅವರು ಬೆಳೆಯಲು ಹೇಗೆ ಸಾಧ್ಯ?18 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿ ಅವರನ್ನು ದ್ವೇಷಿಸಿದರೆ ಅಥವಾ ಹಿಂದೂಗಳು ಅವರನ್ನು ಪ್ರೀತಿಸದಿದ್ದರೆ ಅವರ ಚಲನಚಿತ್ರಗಳು ಈ ರಾಜ್ಯಗಳಲ್ಲಿ ಹೇಗೆ ದೊಡ್ಡ ಕಲೆಕ್ಷನ್ ಮಾಡುತ್ತವೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಪಾರ್ಥ ಚಟರ್ಜಿ ಬಂಧನ ಬಗ್ಗೆ ಮಿಥುನ್ ಹೇಳಿದ್ದೇನು?

ಪಾರ್ಥ ಚಟರ್ಜಿ ಬಂಧನ ಬಗ್ಗೆ ಮಿಥುನ್ ಹೇಳಿದ್ದೇನು?

"ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ನನ್ನನ್ನು ಪ್ರೀತಿಸುವುದರಿಂದ ನಾನು ಇಂದು ಈ ಸ್ಥಿತಿಗೆ ತಲುಪಿದ್ದೇನೆ" ಎಂದು ಅವರು ಹೇಳಿದರು. ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಬಂಧನದ ಬಗ್ಗೆ ನಟ-ರಾಜಕಾರಣಿ ಮಾತನಾಡಿದ್ದಾರೆ.

"ಯಾವುದೇ ಪುರಾವೆಗಳಿಲ್ಲದಿದ್ದರೆ, ಅವನು ಭಯಪಡಲು ಯಾವುದೇ ಕಾರಣವಿಲ್ಲ. ಆದರೆ ಆತ ತಪ್ಪು ಮಾಡಿದ್ದರೆ ಜಗತ್ತಿನ ಯಾವ ಶಕ್ತಿಯೂ ಆತನನ್ನು ರಕ್ಷಿಸಲಾರದು,'' ಎಂದು ಹೇಳಿದ್ದಾರೆ. ಕೋಲ್ಕತ್ತಾದಲ್ಲಿರುವ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕನ ಮನೆಯಿಂದ 21 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡ ನಂತರ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ. ಶಿಕ್ಷಕರ ನೇಮಕಾತಿ ಹಗರಣದಲ್ಲಿ 2,000 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಬಂಗಾಳದಕ್ಕೂ ಅರಳಲಿದಿಯಾ ಕಮಲ

ಬಂಗಾಳದಕ್ಕೂ ಅರಳಲಿದಿಯಾ ಕಮಲ

ಮಹಾರಾಷ್ಟ್ರ ರಾಜಕಾರಣ ಯಾರೂ ಊಹಿಸಿರದ ರೀತಿಯಲ್ಲಿ ಬದಲಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದಲ್ಲಿ ಸುಮಾರು 40 ಶಾಸಕರ ಬಂಡಾಯ ಅನಿರೀಕ್ಷಿತವಾಗಿತ್ತು. ಸರ್ಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲವಾದಾಗ, ಬಿಜೆಪಿ ಮತ್ತು ಶಿವಸೇನಾದ ಬಂಡಾಯ ಶಾಸಕರ ಮೈತ್ರಿಯ ಹೊಸ ಸರ್ಕಾರ ಸ್ಥಾಪನೆ ಮಾಡಿತು. ಇದೇ ಗಾಳಿ ಬಂಗಾಳಕ್ಕೂ ಬೀಸಿದಿಯಾ ಎನ್ನುವ ಅನುಮಾನ ಆಗಾಗ ಮೂಡುತ್ತಿತ್ತಾದರೂ ಬಲವಾದ ಕಾರಣಗಳು ಇರಲಿಲ್ಲ. ಆದರೆ ಮಿಥುನ್ ಚಕ್ರವರ್ತಿ ಹೇಳಿಕೆ ಬಂಗಾಳದಲ್ಲೂ ಕಮಲ ಅರಳುವ ಸಾಧ್ಯತೆಗಳು ಗೋಚರಿಸುತ್ತಿವೆ. ಆಲ್ ಇಂಡಿಯಾ ತೃಣಮೂಲ ಪಕ್ಷದ ಅಧ್ಯಕ್ಷೆಯಾಗಿರುವ ಮಮತಾ ಬ್ಯಾನರ್ಜಿ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. 38 ತೃಣಮೂಲ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂದು ಮಿಥುನ್ ಚಕ್ರವರ್ತಿ ಹೊಸ ಬಾಂಬ್ ಸಿಡಿಸಿದ್ದು ಆಶ್ಚರ್ಯದೊಂದಿಗೆ ಕುತೂಹಲವೂ ಮೂಡಿಸಿದೆ.

ಇಡಿ ದಾಳಿ ವೇಳೆ ನೋಟುಗಳ ರಾಶಿ ಪತ್ತೆ

ಇಡಿ ದಾಳಿ ವೇಳೆ ನೋಟುಗಳ ರಾಶಿ ಪತ್ತೆ

ಪಶ್ಚಿಮ ಬಂಗಾಳದ ಸಂಪುಟ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಶುಕ್ರವಾರ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ದಾಳಿ ಮಾಡಿದ್ದ ಇ.ಡಿ. ಅಧಿಕಾರಿಗಳು 21 ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಹಣವನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಮಾಡಿದ ಒಂದು ದಿನದ ಬಳಿಕ ಅವರನ್ನು ವಿಚಾರಣೆ ಮಾಡಿದಾಗ ಅವರು ವಿಚಾರಣೆಗೆ ಸ್ಪಂದಿಸಿಲ್ಲ. ಜೊತೆಗೆ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಅವರನ್ನು ಶನಿವಾರ ಬಂಧಿಸಲಾಗಿದೆ.

ಶುಕ್ರವಾರ, ಇ.ಡಿ ಅಧಿಕಾರಿಗಳು ದಕ್ಷಿಣ ಕೋಲ್ಕತ್ತಾ ವಸತಿ ಕ್ಯಾಂಪಸ್‌ನಲ್ಲಿರುವ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ದಾಳಿ ಮಾಡಿದ್ದರು. 500 ರು. ಮತ್ತು 2000 ರು. ಮುಖಬೆಲೆಯ ಹಣದ ರಾಶಿ ಮತ್ತು ಬಂಡಲ್ ಮಾಡಿದ್ದ ಹಣವನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದರು. ಅರ್ಪಿತಾ ಮುಖರ್ಜಿ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಮತ್ತು ಹಣದ ಮೂಲದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ. ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ಪಾರ್ಥ ಚಟರ್ಜಿ ಅರೆಸ್ಟ್

ಪಾರ್ಥ ಚಟರ್ಜಿ ಅರೆಸ್ಟ್

ಶುಕ್ರವಾರ ಬೆಳಗ್ಗೆಯಿಂದ ವಿಚಾರಣೆ ನಡೆಸುತ್ತಿದ್ದ ಇಡಿ ಅಧಿಕಾರಿಗಳಿಗೆ ಚಟರ್ಜಿ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಯಿತು.ಚಟರ್ಜಿ ಅವರು 2014 ರಿಂದ 2021 ರವರೆಗೆ ರಾಜ್ಯ ಶಿಕ್ಷಣ ಸಚಿವರಾಗಿದ್ದರು. ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಗ್ರಿಲ್ ಮಾಡಿತ್ತು. ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಸಂದರ್ಭದಲ್ಲಿ ರಾಜ್ಯ ಶಿಕ್ಷಣ ಸಚಿವರಾಗಿದ್ದ ಟಿಎಂಸಿ ನಾಯಕ ಪಾರ್ಥ ಚಟರ್ಜಿ ಸದ್ಯ ಇಡಿ ನ್ಯಾಯಾಲಯದ ವಶದಲ್ಲಿದ್ದಾರೆ.

English summary
Actor Mithun Chakraborty has dropped a new bombshell that more than three dozen Bengal MLAs of the Trinamool Congress are in touch with the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X