ಇದೇನಿದು? ಮಮತಾ ಬ್ಯಾನರ್ಜಿ ಹೆಸರಲ್ಲಿ ಬಿಜೆಪಿ ಸದಸ್ಯತ್ವದ ಕಾರ್ಡ್!

ಕೋಲ್ಕತ್ತಾ, ಜುಲೈ 10: ಬಿಜೆಪಿ ಸದಸ್ಯತ್ವ ಕಾರ್ಡಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರು ಮತ್ತು ಫೋಟೊ ಇರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಶ್ಚಿಮ ಬಂಗಾಳ ಶಿಕ್ಶಶಣ ಸಚಿವ ಪಾರ್ಥ ಚಟರ್ಜಿ, 'ಇದು ಬಿಜೆಪಿಯದೇ ಕುತಂತ್ರ, ನಾವು ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದರು.

ಶನಿವಾರದಂದು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದದ ನಿಮಿತ್ತ ಬಿಜೆಪಿಯು ಮೆಂಬರ್ ಶಿಪ್ ಡ್ರೈವ್ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯ ತಮ್ಮ ಕ್ಷೇತ್ರದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಗೃಹ ಸಚಿವ ಅಮಿತ್ ಶಾ ಸಹ ಈ ಅಭಿಯಾನವನ್ನು ತೆಲಂಗಾಣದಲ್ಲಿ ಆರಂಭಿಸಿದ್ದರು.

Mamata Banerjees name in membership card

ಇದು ಬಿಜೆಪಿ ಕುಟುಂಬವನ್ನು ಮತ್ತಷ್ಟು ಗಟ್ಟಿಯಾಗಿಸುವ ಮತ್ತು ಸಂಪರ್ಕಿಸುವ ಯತ್ನ ಎಂದು ಪ್ರಧಾನಿ ಮೋದಿ ಹೇಳಿದ್ದರು. ಬಿಜೆಪಿ ಸದಸ್ಯರಿಗೆ ಈ ಸದಸ್ಯತ್ವದ ಕಾರ್ಡ್ ಅನ್ನು ನೀಡಲಾಗಿತ್ತು. ಈ ಕಾರ್ಡಿನಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರು ಮತ್ತು ಫೋಟೊ ಇರುವುದು ವಿವಾದ ಸೃಷ್ಟಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+