ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಸ್ಟ್ರೈಕ್ ವಿವರ ನೀಡಿ, ಯುದ್ಧಕ್ಕೆ ಬೆಂಬಲ, ರಾಜಕೀಯಕ್ಕಲ್ಲ ಎಂದ ದೀದಿ

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 01: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಜೈಷ್ ಇ ಮೊಹಮ್ಮದ್ ಉಗ್ರನೆಲೆಯ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ ನ ವಿವರ ನೀಡುವಂತೆ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವದ ನಡೆ: ಜಮಾತ್ ಇ ಇಸ್ಲಾಮಿ ಸಂಘಟನೆಗೆ ನಿಷೇಧ ಕೇಂದ್ರ ಸರ್ಕಾರದ ಮಹತ್ವದ ನಡೆ: ಜಮಾತ್ ಇ ಇಸ್ಲಾಮಿ ಸಂಘಟನೆಗೆ ನಿಷೇಧ

ಮಾಧ್ಯಮಗಳನ್ನುದ್ದೇಶಿಸಿ ಕೋಲ್ಕತ್ತಾದಲ್ಲಿ ಗುರುವಾರ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ, "ಮಾಧ್ಯಮಗಳಲ್ಲಿ 250-300 ಜನ ಸತ್ತದ್ದಾರೆ ಎಂದು ವರದಿ ಮಾಡಲಾಗುತ್ತಿದೆ. ಆದರೆ ಅಲ್ಲಿ ನಿಜವಾಗಿಯೂ ಆಗಿದ್ದೇನು ಎಂಬ ವಿವರ ನಮಗೆ ಬೇಕು. ಬಾಂಬ್ ಗುರಿ ತಪ್ಪಿದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಗಳು ಬರೆದಿವೆ. ಇವುಗಳಲ್ಲಿ ಯಾವುದು ಸತ್ಯ. ನಿಜಕ್ಕೂ ಬಾಂಬ್ ಗುರಿ ತಲುಪಿದೆಯಾ?" ಎಂದು ಪ್ರಶ್ನಿಸಿದ್ದಾರೆ.

ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ....ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ....

Mamata banerjee demands details of IAF strike on terror camp

"ನಾವು ಭಾರತೀಯ ಸೈನಕರು ಮತ್ತು ಭದ್ರತಾ ದಳದೊಂದಿಗಿದ್ದೇವೆ. ಆದರೆ ನಮಗೆ ರಾಜಕೀಯ ಹಿತಾಸಕ್ತಿಗಾಗಿ ಯುದ್ಧವಾಗುವುದು ಬೇಕಿಲ್ಲ. ಅದಕ್ಕೆ ನಮ್ಮ ಬೆಂಬಲವಿಲ್ಲ. ಚುನಾವಣೆಗಾಗಿ ಜವಾನರ ರಕ್ತದಿಂದ ರಾಜಕೀಯ ಮಾಡುವುದು ಒಪ್ಪಿಕೊಳ್ಳುವಂಠ ವಿಷಯವಲ್ಲ. ಬಾಲಕೋಟ್ ನಲ್ಲಿ ಏನಾಯಿತು ಎಂಬುದನ್ನು ನಮ್ಮ ಸೈನಿಕರೇ ಹೇಳಬೇಕು. ಆ ಸ್ವಾತಂತ್ರ್ಯವನ್ನು ಅವರಿಗೆ ನೀಡಬೇಕು. ಯುದ್ಧ ರಾಷ್ಟ್ರದ ಭದ್ರತೆಗಾಗಿ ನಡೆದರೆ ಅದಕ್ಕೆ ನಮ್ಮ ಬೆಂಬಲವಿದೆ, ಆದರೆ ರಾಜಕೀಯಕ್ಕಾಗಿ ನಡೆದರೆ ನಾವು ಬೆಂಬಲಿಸುವುದಿಲ್ಲ" ಎಂದು ಬ್ಯಾನರ್ಜಿ ಹೇಳಿದ್ದಾರೆ.

English summary
West Bengal chief minister Mamata Banerjee asked exact detaiils of India's airstrike on Pakistan's Jaish e Mohammad terror camp. And she said, she will support war for national security, not politicical benifits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X