• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೆರೆಸ್ ನಿಂದ ಹಾರಿ ಅಜ್ಜಿ ಸಾವು, ಒಂದು ಗಾಯವೂ ಆಗದೆ ಬದುಕಿತು ಮೊಮ್ಮಗು!

|

ಕೋಲ್ಕತ್ತಾ, ನವೆಂಬರ್ 15: ಯಾವುದೇ ದುರ್ಘಟನೆ ಸಂಭವಿಸಿದರೂ ಪುಟ್ಟ ಮಕ್ಕಳು ಪ್ರಾಣಾಪಾಯದಿಂದ ಪವಾಡ ಸದೃಶವಾಗಿ ಪಾರಾದ ಹಲವು ಉದಾಹರಣೆಗಳನ್ನು ಕೇಳಿದ್ದೇವೆ.

ಬುಧವಾರ ಕೋಲ್ಕತ್ತದ ಬಟ್ಟಲಾ ಎಂಬಲ್ಲಿ ನಡೆದ ಘಟನೆಯೂ ಈ ಮಾತಿಗೆ ಪುಷ್ಠಿ ನೀಡಿದೆ. 62 ವರ್ಷ ವಯಸ್ಸಿನ ವೃದ್ಧೆ ಸೊಹಿನಿ ತಪಾಡಿಯಾ ಎಂಬುವವರು ತಮ್ಮ ಮಗಳು ಮತ್ತು ಮೊಮ್ಮಗಳೊಂದಿಗೆ ಟೆರೆಸ್ ನಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಲಂಡನ್ನಿನಲ್ಲಿ ಭಾರತೀಯ ಮೂಲದ ಗರ್ಭಿಣಿ ಹತ್ಯೆ,ಪವಾಡದಂತೆ ಬದುಕಿದ ಶಿಶು!

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೊಹಿನಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಅವರು ಮೃತರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಅವರ ಮಗಳು ಇಂದಿರಾ ಮೊಹತಾ(30) ಚಿಂತಾಜನಕ ಸ್ಥಿತಿಯಲ್ಲಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

Kolkata woman dies after jumping off terrace with daughter, granddaughter

ಆದರೆ ಪವಾಡ ಎಂದರೆ, ಇಂದಿರಾ ಅವರ ಎರಡು ವರ್ಷ ವಯಸ್ಸಿನ ಹೆಣ್ಣು ಮಗು ಒಂದು ಗಾಯವೂ ಆಗದೆ ಬದುಕುಳಿದಿದೆ! ಟೆರೆಸ್ ನಿಂದ ಹಾರುವಾಗ ಇಂದಿರಾ ಅವರು ತಮ್ಮ ಮಗಳನ್ನು ಕಂಕುಳಲ್ಲೇ ಇಟ್ಟುಕೊಂಡು ಹಾರಿದ್ದರು. ಸೋಹಿನಿ ಅವರು ಮೃತರಾಗುವಷ್ಟು ಗಾಯಗೊಂಡು, ಇಂದಿರಾ ಚಿಂತಾಜನಕ ಸ್ಥಿತಿಗೆ ತಲುಪುವಷ್ಟು ಗಾಯಗೊಂಡರೂ, ಪುಟ್ಟ ಮಗು ಮಾತ್ರ ಒಂದು ಗಾಯವೂ ಆಗದೆ ಬದುಕಿದ್ದು ಹೇಗೆ ಎಂಬುದೇ ಅರ್ಥವಾಗದ ವಿಷಯವಾಗಿ ಉಳಿದಿದೆ.

ನೋಡುಗರ ಮನ ಕಲಕುವಂತಿತ್ತು ತಾಯಿಯ ಜೊತೆ ಸಾವಿಗೆ ಶರಣಾದ ಕಂದಮ್ಮನ ದೃಶ್ಯ

ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣ ಎಂದು ಮೇಲ್ನೋಟಕ್ಕೆ ಪೊಲೀಸರು ಶಂಕಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

English summary
A Kolkata woman dies after jumping off terrace with daughter, granddaughter. daughter survived with critical condition and baby miraculously saved and unhurt!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X