ಪಶ್ಚಿಮ ಬಂಗಾಳದಲ್ಲಿ ಮುಂದುವರೆದ ಮಳೆ: ಬೇರೆ ರಾಜ್ಯಗಳಲ್ಲೂ ಸಾಧ್ಯತೆ

ಕೊಲ್ಕತ್ತ, ಮೇ 29: ಪಶ್ಚಿಮ ಬಂಗಾಳದಾದ್ಯಂತ ಮತ್ತೆ ಮಳೆಯ ಆರ್ಭಟ ಜೋರಾಗಿದೆ. ಗುರುವಾರ ಬಿರುಗಾಳಿ, ಗುಡುಗು ಸಮೇತ ಮಳೆಯಾಗಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ 24 ಪರಗಣದ 40 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬುರ್ದ್ವಾನ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದಾರೆ.ಶಿಬ್‌ಪುರ್, ಮಂದಿರ್ತಲಾ, ಅವೆನ್ಯೂ ರಸ್ತೆ, ಎಂಜಿ ರಸ್ತೆಯಲ್ಲಿ ಭಾರಿ ಮಳೆಯಾಗಿದೆ.

ಮೇ 20ರಂದು ಸಂಭವಿಸಿದ ಚಂಡಮಾರುತದಿಂದ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಂಡಿತ್ತು. ಅದರ ಸುರಸ್ತಿ ಕಾರ್ಯ ನಡೆಯುತ್ತಿರುವಾಗಲೇ ಮತ್ತೆ ಮಳೆ ಆರಂಭವಾಗಿದೆ. ದೆಹಲಿ, ಉತ್ತರ ಪ್ರದೇಶ, ಹರ್ಯಾಣಾ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

Heavy Rain Gusty Winds In west Bengal

ಬೆಂಗಳೂರಿನಲ್ಲಿ ಸತತ ಮೂರನೇ ದಿನವೂ ಮಳೆಯಾಗಿದೆ.ಕಳೆದ ಮಂಗಳವಾರ ಮತ್ತು ಬುಧವಾರ ನಗರದಲ್ಲಿ ಭಾರಿ ಪ್ರಮಾಣದ ಮಳೆಯಾಗಿತ್ತು. ಗುರುವಾರವೂ ಭಾರಿ ಮಳೆ ಬರುವ ಮುನ್ಸೂಚನೆ ಇತ್ತಾದರೂ ಕಡಿಮೆ ಮಳೆಯಾಗಿದೆ. ಕಳೆದ ಬುಧವಾರ ಅಂಫಾನ್ ಚಂಡಮಾರುತ ಸಂಜೆ ಸುಮಾರು 6.47ರ ಸುಮಾರಿಗೆ ಆಗಮಿಸಿತ್ತು. ಗಾಳಿಯು 114 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. 7.20ರ ಸುಮಾರಿಗೆ 133 ಕಿ.ಮೀ ವೇಗದಲ್ಲಿ ಗಾಳಿ ಚಲಿಸಿತ್ತು.

ಅಂಫಾನ್ ಚಂಡಮಾರುತ ಆರಂಭವಾದ ದಿನ ಸತತ ನಾಲ್ಕು ಗಂಟೆಗಳ ಕಾಲ ಮಳೆಯಾಗಿತ್ತು. ಆದರೆ ಅದೃಷ್ಟವಶಾತ್ ಮೇ 27 ರಂದು ಸುರಿದ ಮಳೆ ಅರ್ಧಗಂಟೆಗೆ ನಿಂತಿತ್ತು. ಇಷ್ಟು ದಿನಗಳ ಕಾಲ ಕೊರೊನಾ ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದವು ಆದರೆ ಈಗ ಚಂಡಮಾರುತದಿಂದಾಗಿ ಅನಿವಾರ್ಯವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ಗಾಂಧಿನಗರ, ಮಹಾಲಕ್ಷ್ಮೀ ಲೇಔಟ್ ನಲ್ಲಿ ಐದಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಮಹಾದೇವಪುರದಲ್ಲಿ ಹೆಚ್ಚು ಮಳೆಯಾಗಿದ್ದು, ದೊಡ್ಡಬನಹಳ್ಳಿಯಲ್ಲಿ 13 ಮಿ.ಮೀ, ಬಸವಪುರದಲ್ಲಿ 11.45 ಮಿ.ಮೀ, ರಾಮಮೂರ್ತಿನಗರ 5 ಮಿ.ಮೀ, ಗಾಳಿ ಆಂಜನೇಯ ದೇವಸ್ಥಾನ, ಹಂಪಿನಗರದಲ್ಲಿ ತಲಾ 3.5 ಮಿ.ಮೀನಷ್ಟು ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+