ಮಹಾಘಟಬಂಧನ ರ‍್ಯಾಲಿಯಲ್ಲಿ ಮೋದಿ ಮೇಲೆ ಹಾರ್ದಿಕ್ ವಾಗ್ದಾಳಿ
ಕೋಲ್ಕತ್ತಾ, ಜನವರಿ 19 : "ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ ನಾವಿಂದು ಕಳ್ಳರ ವಿರುದ್ಧ ಹೋರಾಡಬೇಕಿದೆ" ಎಂದು ಪಾಟೀದಾರ್ ಆಂದೋಲನದ ಹರಿಕಾರ ಹಾರ್ದಿಕ್ ಪಟೇಲ್ ವಾಗ್ದಾಳಿ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ವಿಪಕ್ಷಗಳ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು ಎನ್ ಡಿ ಎ ಸರ್ಕಾರವನ್ನು 'ಕಳ್ಳ'ರಿಗೆ ಹೋಲಿಸಿದರು.
"ಸುಭಾಶ್ ಚಂದ್ರ ಬೋಸ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ ನಾವೀಗ ಕಳ್ಳರ ವಿರುದ್ಧ ಹೋರಾಡಬೇಕಿದೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಳ್ಳ ಸರ್ಕಾರ" ಎಂದು ಹಾರ್ದಿಕ್ ಪಟೇಲ್ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, "ಪ್ರಧಾನಿ ನೇತೃತ್ವದ ಎನ್ ಡಿಎ ಸರ್ಕಾರ ದೇಶದ ಸಂವಿಧಾನವನ್ನೂ, ಪ್ರಜಾಪ್ರಭುತ್ವವನ್ನೂ ಹಾಳುಗೆಡವುತ್ತಿದೆ. ಇದು ಮುಂದುವರಿಯುವುದಕ್ಕೆ ನಾವು ಅವಕಾಶ ಮಾಡಿಕೊಡಬಾರದು" ಎಂದರು.
ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ವಿರೋಧಿ ಪಕ್ಷಗಳೆಲ್ಲ ಒಂದುಗೂಡಿದ್ದು, ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹೋರಾಟ ಯಶಸ್ವಿಯಾಗುವುದೆ?












Click it and Unblock the Notifications