ಮೊದಲು 30 ಸೀಟು ಗೆದ್ದು ನೋಡಿ; ಬಿಜೆಪಿಗೆ ದೀದಿ ದೊಡ್ಡ ಸವಾಲು
ಕೋಲ್ಕತ್ತಾ,
ಡಿಸೆಂಬರ್ 30: "ಮೊದಲು 30 ಸ್ಥಾನಗಳನ್ನು ಗೆದ್ದು ನೋಡಿ, ಆಮೇಲೆ 294 ಸೀಟುಗಳ ಬಗ್ಗೆ ಕನಸು ಕಾಣುವಿರಂತೆ" ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. id="toptextpromo"> id='are-slot-1' class='oiad oi-axt oiadv'>ಕೇಂದ್ರ
ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿ ನೀಡಿ ರೋಡ್ ಶೋ ನಡೆಸಿದ ನಂತರದ ಒಂದೇ ವಾರದಲ್ಲಿ ಬೋಲ್ಪುರದಲ್ಲಿ ಮಮತಾ ಬ್ಯಾನರ್ಜಿ ಮಂಗಳವಾರ ರೋಡ್ ಶೋ ಹಮ್ಮಿಕೊಂಡಿದ್ದರು. ಮುಂದಿನ ವಿಧಾನ ಸಭಾ ಚುನಾವಣೆಗೆ ಈಗಾಗಲೇ ಪ್ರಚಾರ ಕಾರ್ಯ ಕೈಗೊಂಡಿದ್ದು, ಈ ಸಂದರ್ಭ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಮುಂದೆ ಓದಿ... id='are-slot-2' class='oiad oi-axt oiadv'>
ಆಕ್ರೋಶ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ
ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200 ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಹೇಳಿಕೊಳ್ಳುತ್ತಿದೆ. ಆದರೆ ಕೆಲವು ಶಾಸಕರನ್ನು ದುಡ್ಡಿನಿಂದ ಕೊಂಡುಕೊಂಡ ಮಾತ್ರಕ್ಕೆ ಇಡೀ ತೃಣಮೂಲ ಕಾಂಗ್ರೆಸ್ ಅನ್ನೇ ಖರೀದಿಸಿದಿರಿ ಎಂದುಕೊಳ್ಳಬೇಡಿ. ತೃಣಮೂಲ ಕಾಂಗ್ರೆಸ್ ಜನರಿಗಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದೆ. ಈಗ ಬಿಜೆಪಿಯವರು ಹೊರಗಿನವರಾಗಿ ಬಂದು 200 ಸೀಟುಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಚುನಾವಣೆಗಾಗಿ ಮಾತ್ರ ಇಲ್ಲಿಗೆ ಬಂದಿದ್ದಾರೆ"
ಪಶ್ಚಿಮ ಬಂಗಾಳಕ್ಕೆ ಚುನಾವಣೆಗಾಗಿ ಮಾತ್ರ ಬಿಜೆಪಿಯವರು ಬಂದಿದ್ದಾರೆ. ಅವರಿಗೆ 5 ಸ್ಟಾರ್ ಊಟವೇ ಬೇಕು. ಆದರೆ ತೋರಿಕೆಗೆ ಬುಡಕಟ್ಟು ಮನೆಯ ಊಟ ಬೇಕು. ನಮ್ಮ ಬುಡಕಟ್ಟು ಸಹೋದರರನ್ನು ಈ ರೀತಿ ಅವಮಾನ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿದರು.

"ಮೊದಲು 30 ಸೀಟುಗಳನ್ನು ಗೆದ್ದು ನೋಡಿ"
ಬಿಜೆಪಿಯವರೇ ಮೊದಲು ಮೂವತ್ತು ಸೀಟುಗಳನ್ನು ಗೆಲ್ಲಲು ಸಾಧ್ಯವಾಗುತ್ತದಾ ನೋಡಿ, ಆಮೇಲೆ 294 ಸೀಟುಗಳನ್ನು ಪಡೆಯುವ ಕನಸು ಕಾಣುವಿರಂತೆ ಎಂದು ದೀದಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪಶ್ಚಿಮ ಬಂಗಾಳ ಭೇಟಿ ಸಂದರ್ಭ ತಾವು ಪಶ್ಚಿಮ ಬಂಗಾಳದಲ್ಲಿ 200 ಸೀಟುಗಳನ್ನು ಗೆದ್ದು ಕಮಲ ಅರಳಿಸುವುದಾಗಿ ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದರು. ಇದಕ್ಕೆ ದೀದಿ ಮಂಗಳವಾರ ಸವಾಲು ಹಾಕಿದ್ದಾರೆ.

ಬಿಜೆಪಿಗೆ ಪ್ರಶಾಂತ್ ಕಿಶೋರ್ ಸವಾಲು
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎರಡಂಕಿಯ ಸೀಟುಗಳನ್ನು ಪಡೆದರೂ ತಾವು ಟ್ವಿಟ್ಟರ್ ಖಾತೆಯನ್ನು ತ್ಯಜಿಸುವುದಾಗಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಶಪಥ ಮಾಡಿದ್ದರು. 2021ರಲ್ಲಿ ನಡೆಯುವ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಹತ್ತು ಸ್ಥಾನ ಪಡೆಯಲೂ ಹೆಣಗಾಡಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು.












Click it and Unblock the Notifications