ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದ ಸಚಿವನ ಪೂರ್ತಿ ಕುಟುಂಬಕ್ಕೆ ಕೊರೊನಾ ಸೋಂಕು

|
Google Oneindia Kannada News

ಕೋಲ್ಕತ್ತ, ಮೇ 23: ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಸುಜಿತ್ ಬೋಸ್ ಮಾರಕ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿರುವುದಾಗಿ ಶುಕ್ರವಾರ ವರದಿಯಾಗಿದೆ.

ಬಿಧನ್ನಗರದ ತೃಣಮೂಲ ಕಾಂಗ್ರೆಸ್ ಶಾಸಕರು ಆಗಿರುವ ಬೋಸ್ ಅವರೊಂದಿಗೆ, ಅವರ ಪತ್ನಿ ಮತ್ತು ಮನೆಯ ಸಹಾಯಕರಿಬ್ಬರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಆ ರಾಜ್ಯದ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ. ಸೋಂಕಿತರನ್ನು ಕಲ್ಕತ್ತದಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರಾರ್ಥನಾ ಮಂದಿರಗಳು ಓಪನ್; ಒಮ್ಮೆ 10 ಜನಕ್ಕೆ ಮಾತ್ರ ಪ್ರವೇಶಪ್ರಾರ್ಥನಾ ಮಂದಿರಗಳು ಓಪನ್; ಒಮ್ಮೆ 10 ಜನಕ್ಕೆ ಮಾತ್ರ ಪ್ರವೇಶ

ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಯಲ್ಲಿ 344 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಒಂದು ದಿನದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಇದಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 4,536 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,573 ಆಗಿದೆ. ಒಟ್ಟು ಕೊರೊನಾವೈರಸ್‌ನಿಂದ ಇಲ್ಲಿಯವರೆಗೆ 223 ಜನ ಮೃತಪಟ್ಟಿದ್ದಾರೆ.

 Covid19 Tested Positive For West Bengal Fire Minister Sujit Bose

ಕೊರೊನಾವೈರಸ್ ಭೀತಿಯ ನಡುವೆಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಜೂನ್ 1 ರಿಂದ ಪಶ್ಚಿಮ ಬಂಗಾಳದಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

English summary
Covid19 Tested Positive For West Bengal Fire Minister Sujit Bose . he is shifted to kolkata hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X