ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರ ವಿಷಾದದ ಟ್ವೀಟ್

ಕೋಲ್ಕತಾ, ಜೂನ್ 13: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ಆರಂಭವಾದ, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮಾರಾಮಾರಿಯಿಂದ ತೀವ್ರ ನೊಂದಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ವಿಷಾದದ ಟ್ವೀಟ್ ಒಂದನ್ನು ಮಾಡಿದ್ದಾರೆ. ಅದನ್ನು ತಮ್ಮ ಟ್ವೀಟ್ ನಲ್ಲಿ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಉಲ್ಲೇಖಿಸಿದ್ದಾರೆ.

ದಿಲೀಪ್ ಘೋಷ್ ನೋವಿನ ನುಡಿ ಹೀಗಿದೆ, " ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಎದುರಿಸುತ್ತಿರುವ ಅತ್ಯಂತ ಕಠಿಣ ಸಮಯವಿದು. ಪ್ರತೀ ದಿನ ಒಂದಲ್ಲಾ ಒಂದು ನನ್ನ ಕಾರ್ಯಕರ್ತರ ಅಂತ್ಯಕ್ರಿಯೆಯಲ್ಲಿ ಹೂವು ಹಿಡಿದುಕೊಂಡು ಭಾಗವಹಿಸಬೇಕಿದೆ".

BJP West Bengal President Dilip Ghosh tweet on party workers continous death

ಪ್ರತೀದಿನ ಮಗನನ್ನು ಕಳೆದುಕೊಂಡ ತಾಯಂದಿರನ್ನು ನಾನು ಸಂತೈಸಬೇಕಿದೆ. ನಾನು ಏನೂಂತಾ ಅವರನ್ನು ಸಮಾಧಾನ ಪಡಿಸಲಿ" ಇದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ನೋವಿನ ಟ್ವೀಟ್.

ಮಂಗಳವಾರ (ಜೂ 11) ಕೂಡಾ ಇಬ್ಬರು ಬಿಜೆಪಿ ಕಾರ್ಯಕರ್ತರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಟಿಎಂಸಿ ಕಾರ್ಯಕರ್ತರು ನಮ್ಮ ಮಕ್ಕಳನ್ನು ಕೊಂದಿದ್ದಾರೆಂದು ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಇವರಿಬ್ಬರೂ, ಬಿಜೆಪಿಯ ಬೂತ್ ಮಟ್ಟದ ಕಾರ್ಯಾಕರ್ತರಾಗಿದ್ದು, ಲೋಕಸಭಾ ಚುನಾವಣೆಯ ವೇಳೆ 'ಜೈಶ್ರೀರಾಂ' ರ‍್ಯಾಲಿಗಳ ಮುಂದಾಳತ್ವವನ್ನು ವಹಿಸಿಕೊಂಡಿದ್ದವರು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+