• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳ ಚುನಾವಣೆ:13 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

|

ಕೋಲ್ಕತ್ತಾ, ಮಾರ್ಚ್ 23: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿಯು 13 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 5,6,7 ಹಾಗೂ 8ನೇ ಹಂತಗಳಿಗೆ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದೆ.

ಐದನೇ ಹಂತ: ಕಲಿಂಪೋಂಗ್- ಶುಭ ಪ್ರಧಾನ್, ದಾರ್ಜಿಲಿಂಗ್-ನೀರಜ್ ತಮಾಂಗ್ ಜಿಂಬಾ, ಕುರ್ಸಿಯಾಂಗ್-ವಿಷ್ಣು ಪ್ರಸಾದ್ ಶರ್ಮಾ ಪಟ್ಟಿಯಲ್ಲಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ...

ಆರನೇ ಹಂತ: ಕರಾಂಧಿಗಿ- ಸುಭಾಷ್ ಸಿಂಗ್, ಇತಾಹರ್-ಅಮಿತ್ ಕುಮಾರ್ ಕುಂಡು, ಬಾಗ್ದಾ-ವಿಶ್ವಜಿತ್ ದಾಸ್, ಬನಗಾವ್ ಉತ್ತರ-ಅಶೋಕ್ ಕೃತೋನಿಯಾ, ಗಾಯ್‌ಘಾಟ್-ಸುಬ್ರತಾ ಠಾಕೂರ್ ಕಣದಲ್ಲಿದ್ದಾರೆ.

ಏಳನೇ ಹಂತ: ಬಾಲುರ್‌ಘಾಟ್-ಅಶೋಕ್ ಲಹಿರಿ, ರಾಶ್‌ಬಿಹಾರಿ-ಲೆ.ಸುಬ್ರತಾ ಸಾಹಾ.

ಎಂಟನೇ ಹಂತ: ಬಹರಾಂಪುರ್-ಸುಬ್ರತಾ ಮೋಯಿತ್ರಾ, ಚೌರಂಗೀ-ಸೇಬಬದ್ರತಾ ಮಾಝಿ, ಕಾಶಿಪುರ-ಶಿವಾಜಿ ಸಿಂಘ ರಾಯ್ ಕಣದಲ್ಲಿದ್ದಾರೆ.

ಮಾರ್ಚ್ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ವಿಧಾನಸಭೆಗಳಲ್ಲಿ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಬರಲಿದೆ. 5 ರಾಜ್ಯಗಳಲ್ಲಿನ 824 ಕ್ಷೇತ್ರಗಳಲ್ಲಿ 18.68 ಕೋಟಿ ಮತದಾರರಿದ್ದಾರೆ.

ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950 ಬಳಸಲು ಸೂಚಿಸಲಾಗಿದೆ. ಮತದಾನಕ್ಕೆ 1 ಗಂಟೆ ಹೆಚ್ಚಿನ ಅವಧಿ ನೀಡಲಾಗಿದೆ. ನಂದಿಗ್ರಾಮದಿಂದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಕಣದಲ್ಲಿದ್ದಾರೆ.

English summary
Bharatiya Janata Party (BJP) releases a list of 13 candidates for West Bengal Elections 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X