• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳ: ನಟಿ ಶ್ರಬಂತಿ ಚಟರ್ಜಿ ಬಿಜೆಪಿಗೆ ರಾಜೀನಾಮೆ

|
Google Oneindia Kannada News

ಕೋಲ್ಕತ್ತಾ, ನವೆಂಬರ್ 11: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಶ್ರಬಂತಿ ಚಟರ್ಜಿ ರಾಜೀನಾಮೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27, 2021ರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆದಿತ್ತು, ಏಪ್ರಿಲ್ 29ಕ್ಕೆ ಮತದಾನ ಪೂರ್ಣಗೊಂಡು, ಮೇ 02ಕ್ಕೆ ಫಲಿತಾಂಶ ಹೊರಬಿದ್ದಿತ್ತು.

ಪಶ್ಚಿಮ ಬಂಗಾಳದಲ್ಲಿ ನಟಿ ಶ್ರಬಂತಿ ಚಟರ್ಜಿ ಬಿಜೆಪಿಗೆ ಸೇರ್ಪಡೆಪಶ್ಚಿಮ ಬಂಗಾಳದಲ್ಲಿ ನಟಿ ಶ್ರಬಂತಿ ಚಟರ್ಜಿ ಬಿಜೆಪಿಗೆ ಸೇರ್ಪಡೆ

ಬಿಜೆಪಿಯಲ್ಲಿ ಪ್ರಾಮಾಣಿಕತೆಯ ಕೊರತೆ ಇರುವುದೇ ತಾನ್ನ ರಾಜೀನಾಮೆಗೆ ಕಾರಣ ಎಂದು ಶ್ರಬಂತಿ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ತೊರೆಯುವ ನಿರ್ಧಾರವನ್ನು ಶ್ರಬಂತಿ ಚಟರ್ಜಿ ಗುರುವಾರ ಪ್ರಕಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಶ್ರಬಂತಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.

ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗುವ ಊಹಾಪೋಹಗಳು ಹುಟ್ಟಿಕೊಂಡಿವೆ. ಈ ಕುರಿತ ಪ್ರಶ್ನೆಗೆ ಸಮಯವೇ ಉತ್ತರ ಕೊಡಲಿದೆ ಎಂದು ನಟಿ ಹಾರಿಕೆಯ ಉತ್ತರ ನೀಡಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನಾಯಕರಾದ ಕೈಲಾಶ್ ವಿಜಯವರ್ಗೀಯ ಹಾಗೂ ದಿಲೀಪ್ ಘೋಷ್ ಅವರೊಂದಿಗೆ ಪ್ರಚಾರ ಸಭೆಯಲ್ಲಿ ಕಾಣಸಿಕೊಂಡಿದ್ದರು. ಶ್ರಬಂತಿ ಅವರು ಟಿಎಂಸಿಯ ಪಾರ್ಥ ಚಟರ್ಜಿ ವಿರುದ್ಧ ಬೆಹಾಲಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಸಾಕಷ್ಟು ಹಗ್ಗಜಗ್ಗಾಟ ನಡೆಯುತ್ತಿದೆ. ಹಲವು ಮಂದಿ ಬಿಜೆಪಿ ತೊರೆದು ಟಿಎಂಸಿ ಸೇರುತ್ತಿದ್ದಾರೆ. ಇದರ ನಡುವೆ ನಟಿ ಕೂಡ ಬಿಜೆಪಿ ತೊರೆದಿರುವುದು ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.

English summary
Popular Bengali actress Srabanti Chatterjee has announced her exit from the Bharatiya Janata Party (BJP). Srabanti in a tweet said that she is severing all ties with the BJP as she cited the party's 'lack of initiative and sincerity to further the cause of Bengal' as the reason for her resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X