• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಜೈ ಶ್ರೀರಾಮ್'ಗೆ ಪ್ರತ್ಯುತ್ತರ: ಪ್ರೊಫೈಲ್ ಚಿತ್ರ ಬದಲಿಸಿದ ದೀದಿ!

|
   ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಮಮತಾ ಹೀಗಾ ಮಾಡೋದು..? | Oneindia Kannada

   ಕೋಲ್ಕತ್ತಾ, ಮೇ 03: ಇತ್ತೀಚೆಗಷ್ಟೇ ಜೈಶ್ರೀರಾಮ್ ಎಂದು ಘೋಷಣೆ ಕೂಗಿದವರ ವಿರುದ್ಧ ಕೇಸು ದಾಖಲಿಸುವಂತೆ ಆದೇಶ ನೀಡಿ, ಅವರನ್ನು ಪೊಲೀಸರು ವಶಕ್ಕೆ ಪಡೆಯುವಂತೆ ಸೂಚನೆ ನೀಡಿದ್ದ ಮಮತಾ ಬ್ಯಾನರ್ಜಿ ಇದೀಗ ಜೈ ಶ್ರೀರಾಮ್ ಹೇಳಿಕೆಗೆ ಪ್ರತಿಯಾಗಿ ಪ್ರೊಫೈಲ್ ಪಿಕ್ಚರ್ ಬದಲಿಸುವ ಮೂಲಕ ಉತ್ತರ ನೀಡಿದ್ದಾರೆ.

   'ಜೈ ಹಿಂದ್, ಜೈ ಬಾಂಗ್ಲಾ' ಎಂಬ ಘೋಷಣೆಯೊಂದಿಗೆ ಸುಭಾಷ್ ಚಂದ್ರ ಬೋಸ್, ಗಾಂಧೀಜಿ, ಸ್ವಾಮಿ ವಿವೇಕಾನಂದ ಸೇರಿದಂತೆ ಮಹನೀಯರಿರುವ ಚಿತ್ರವನ್ನು ಮಮತಾ ಬ್ಯಾನರ್ಜಿ ತಮ್ಮ ಪ್ರೊಫೈಲ್ ಚಿತ್ರವನ್ನಾಗಿ ಬದಲಿಸಿಕೊಂಡಿದ್ದಾರೆ. ಅವರೊಂದಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಹಲವರೂ ತಮ್ಮ 'ಡಿಪಿ'(display picture) ಬದಲಿಸಿಕೊಂಡಿದ್ದಾರೆ.

   ಅಧಿಕಪ್ರಸಂಗ ಮಾಡಿದ್ರೆ ಪರಿಣಾಮ ನೆಟ್ಟಗಿರೋಲ್ಲ, ದೀದಿಗೆ ಸಚಿವೆಯ ವಾರ್ನಿಂಗ್

   ಇತ್ತೀಚೆಗಷ್ಟೇ ಟಿಎಂಸಿ ಮುಖಂಡೆ ಮಮತಾ ಬ್ಯಾನರ್ಜಿ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕೆಲವರು ರಸ್ತೆಯಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು.

   ಮಮತಾ ಬ್ಯಾನರ್ಜಿಗೆ ಗಂಡಾಂತರದ ಕಾಲ: ಜ್ಯೋತಿಷಿ ಅಮ್ಮಣ್ಣಾಯ ವಿಶ್ಲೇಷಣೆ

   ಇದರಿಂದ ಕೋಪಗೊಂಡ ಮಮತಾ ಬ್ಯಾನರ್ಜಿ ಕಿನಿಂದ ಇಳಿದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, "ನಾನು ಈ ಎಲ್ಲಾ ಜನರನ್ನು ಬಲ್ಲೆ. ಇವರಿಗೆಲ್ಲ ನಾನು ಸವಾಲು ಹಾಕುತ್ತೇನೆ. ನಾನು ನಿಮಗೆ ಇಲ್ಲಿ ಹೊಡೆದರೆ, ಬೇರೆಲ್ಲೋ ನ್ಯಾಯ ಸಿಕ್ಕುತ್ತದೆ" ಎಂದು ಗುಡುಗಿದ್ದರು.

   ಜೈ ಹಿಂದ್, ಜೈ ಬಾಂಗ್ಲಾ!

   ನ್ಯೂ ಪ್ರೊಫೈಲ್ ಪಿಕ್ಚರ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ತಮ್ಮ ಹೊಸ ಪ್ರೊಫೈಲ್ ಚಿತ್ರವನ್ನು ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ಸುಭಾಶ್ ಚಂದ್ರ ಬೋಸ್, ಮಹಾತ್ಮಾ ಗಾಂಧೀಜಿ, ರಬೀಂದ್ರನಾಥ್ ಟಾಗೋರ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ರಾಜಾರಾಂ ಮೋಹನ್ ರಾಯ್, ಡಾ.ಬಿ ಆರ್ ಅಂಬೇಡ್ಕರ್ ಮುಂತಾದವರ ಫೋಟೊವನ್ನು ಪ್ರೊಫೈಲ್ ಚಿತ್ರದಲ್ಲಿ ಬಳಸಿಕೊಂಡು "ಜೈ ಹಿಂದ್, ಜೈ ಬಾಂಗ್ಲಾ" ಎಂಬ ಘೋಷಣೆಯನ್ನೂ ಉಲ್ಲೇಖಿಸಿದ್ದಾರೆ.

   ವೈರಲ್ ಆಗಿದ್ದ ವಿಡಿಯೋ

   ಮಮತಾ ಬ್ಯಾನರ್ಜಿ ಅವರು ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಕೆಲವರು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗಿದ್ದರು. ತಕ್ಷಣವೇ ಕಾರಿನಿಂದ ಇಳಿದುಬಂದ ಮಮತಾ ಬ್ಯಾನರ್ಜಿ ಅಸಹನೆಯಿಂದ ಅಲ್ಲಿರುವ ಜನರ ಮೇಲೆ ಕೂಗಾಡಿದ್ದರು. ನಂತರ ತಮ್ಮೊಂದಿಗಿದ್ದ ಭದ್ರತಾ ಸಿಬ್ಬಂದಿ ಬಳಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಎಲ್ಲ ಹೆಸರನ್ನೂ ನೋಟ್ ಮಾಡಿಕೊಳ್ಳುವಂತೆ ಆದೇಶಿಸಿದರು. ಹಾಗೆ ಘೋಷಣೆ ಕೂಗಿದವರು ಕ್ರಿಮಿನಲ್ ಗಳು ಅವರು ಬಿಜೆಪಿಯವರು ಎಂದು ಹೇಳಿ ಅವರನ್ನು ವಶಕ್ಕೆ ಪಡೆಯುವಂತೆ ಮಮತಾ ಬ್ಯಾನರ್ಜಿ ಪೊಲಿಸರಿಗೆ ಸೂಚಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

   'ಜೈ ಶ್ರೀರಾಮ್' ಎಂದಿದ್ದಕ್ಕೆ ಕಾರಿನಿಂದ ಇಳಿದುಬಂದ ದೀದಿ ಮಾಡಿದ್ದೇನು?

   ದೇವರ ನಿಮಗೆ ಸದ್ಬುದ್ಧಿ ನೀಡಲಿ!

   ಜೈಶ್ರೀರಾಮ್, ದೇವರು ನಿಮ್ಮ ದುರ್ಬುದ್ಧಿ ಹೋಗಲಾಡಿಸಿ, ಸದ್ಬುದ್ಧಿ ನೀಡಲಿ. ನಿಮ್ಮ ಮಾನಸಿಕ ಸಮಸ್ಯೆ ಬೇಗ ಗುಣವಾಗಲಿ ಎಂದು ನಾವು ಹಾರೈಸುತ್ತೇವೆ. ರಾಮನನ್ನು ಪ್ರೀತಿಸಿ ನಿಮ್ಮನ್ನು ರಾಮ ಪ್ರೀತಿಸುತ್ತಾನೆ. ನೀವು ರಾಮನನ್ನು ದ್ವೇಷಿಸಿದರೂ ರಾಮ ನಿಮ್ಮನ್ನು ಪ್ರೀತಿಸುತ್ತಾರೆ ಎಂದು ಭರತ್ ಎಂಬುವವರು ಅವರ ಪ್ರೊಫೈಲ್ ಚಿತ್ರದ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.

   ಜೈಶ್ರೀರಾಮ್ ಅಭಿಯಾನ

   'ಜೈ ಶ್ರೀರಾಮ್' ಎಂದವರನ್ನು ಮಮತಾ ಬ್ಯಾನರ್ಜಿ ತರಾಟೆಗೆ ತೆಗೆದುಕೊಂಡ ಕಾರಣ, ಅವರ ಪ್ರೊಫೈಲ್ ಚಿತ್ರದ ಪೋಸ್ಟ್ ಗೆ ನೂರಾರು ಜನ ಜೈ ಶ್ರೀರಾಮ್ ಎಂದೇ ಕಮೆಮಟ್ ಹಾಕಿ ಮತ್ತಷ್ಟು ಕಾಲೆಳೆದಿದ್ದಾರೆ. ಜೊತೆಗೆ ಪೋಸ್ಟ್ ಕಾರ್ಡ್ ಮೂಲಕ ಅವರಿಗೆ ಜೈ ಶ್ರೀರಾಮ್ ಎಂಬ ಸಾಲುಗಳನ್ನು ಬರೆದು ಕಳಿಸುವ ಅಭಿಯಾನವನ್ನೂ ಆರಂಭಿಸಲಾಗಿದೆ!

   English summary
   West Bengal chief minister Mamata Banerjee and some of her TMC leaders changed their profile pictures with Jay Hind, Jay Bangla slogan after 'Jai Shriram' controversy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X