• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"50 ಲಕ್ಷ ಮುಸ್ಲಿಂ ನುಸುಳುಕೋರರನ್ನು ಹೊರಗಟ್ಟಲಾಗುವುದು"

|

ಕೋಲ್ಕತ್ತಾ, ಜನವರಿ 20: ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ,ಖರಗ್ ಪುರ್ ಸಂಸದ ದಿಲೀಪ್ ಘೋಶ್ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ. 50 ಲಕ್ಷ ಮುಸ್ಲಿಂ ನುಸುಳುಕೋರರನ್ನುಗುರುತಿಸಿ ದೇಶದಿಂದ ಹೊರಗಟ್ಟಲಾಗುವುದು ಎಂದು ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ ಬೆನ್ನಲ್ಲೇ ದಿಲೀಪ್ ಈ ರೀತಿ ತಿರುಗೇಟು ನೀಡಿದ್ದಾರೆ.

ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ರಾಜ್ಯ ಬಿಜೆಪಿಗೆ ಕೊಟ್ಟ ಸೂಚನೆ ಏನು ಗೊತ್ತಾ?

"ಐವತ್ತು ಲಕ್ಷ ಮುಸ್ಲಿಂ ನುಸುಳುಕೋರರನ್ನು ಪತ್ತೆ ಹಚ್ಚಲಾಗುವುದು, ಅಗತ್ಯ ಬಿದ್ದರೆ ಅವರನ್ನು ದೇಶದಿಂದ ಹೊರ ಹಾಕಲಾಗುವುದು, ಇದಕ್ಕೂ ಮುನ್ನ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದು, ಆಗಲಾದರೂ ದೀದಿ(ಮಮತಾ ಬ್ಯಾನರ್ಜಿ) ಯಾರನ್ನು ಓಲೈಕೆ ಮಾಡಲು ಸಾಧ್ಯವಾಗುವುದಿಲ್ಲ" ಎಂದು ದಿಲೀಪ್ ಘೋಶ್ ತಮ್ಮ ಭಾಷಣದಲ್ಲಿ ಹೇಳಿದರು.

ದಿಲೀಪ್ ಇತ್ತೀಚೆಗೆ ತಮ್ಮ ಹೇಳಿಕೆಯಿಂದ ವಿವಾದಕ್ಕೀಡಾಗಿದ್ದರು. ಸಾರ್ವಜನಿಕ ಆಸ್ತಿ ನಾಶ ಮಾಡುವವರನ್ನು ನಾಯಿಯ ರೀತಿಯಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದರು. ಸಾರ್ವಜನಿಕರ ಆಸ್ತಿ ಏನು ಅವರ ಅಪ್ಪನ ಮನೆ ಆಸ್ತಿಯೇ? ತೆರಿಗೆದಾರರ ಸ್ವತ್ತು ಅದು, ಮಮತಾ ಈ ಬಗ್ಗೆ ಏನು ಹೇಳುವುದಿಲ್ಲ, ಕಾರಣ, ಅವರೆಲ್ಲ ಮತದಾರರು, ಅಸ್ಸಾಂ, ಉತ್ತರಪ್ರದೇಶವಾಗಿದ್ದರೆ ಇಂಥವರನ್ನು ನಾಯಿಯಂತೆ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿತ್ತು ಎಂದಿದ್ದರು.

ಬಿಜೆಪಿಯ ಸಿಎಎ ಜನ ಜಾಗೃತಿ ಅಭಿಯಾನ ಜ.26ರ ತನಕ ವಿಸ್ತರಣೆ

ಕರ್ನಾಟಕ, ಉತ್ತರಪ್ರದೇಶ ಹಾಗೂ ಅಸ್ಸಾಂ ಸರ್ಕಾರಗಳು ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಸರಿಯಾದ ಕ್ರಮ ಜರುಗಿಸಿವೆ ಎಂದು ಸಮರ್ಥಿಸಿಕೊಂಡರು.

English summary
BJP West Bengal chief Dilip Ghosh on Sunday said that 50 lakh Muslim infiltrators will be identified and "chased out of the country" if needed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X