• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರದಲ್ಲಿ ಹಸಿದ ಹೊಟ್ಟೆ ತುಂಬಿಸಿದ ಯುವಶಕ್ತಿ

|

ಕೋಲಾರ, ಏಪ್ರಿಲ್ 1: ಲಾಕ್ ಡೌನ್ ನಿಂದ ರಾಜ್ಯದ ಅನೇಕ ಕಡೆ ಕೂಲಿ ಕಾರ್ಮಿಕರಿಗೆ, ಬಡವರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿದೆ. ಕೋಲಾರದಲ್ಲಿ ಇಂತಹವರ ನೆರವಿಗೆ ಯುವಶಕ್ತಿ ಕರ್ನಾಟಕ ನಿರಾಶ್ರಿತ ಮಕ್ಕಳ ಆಶ್ರಮ ಮತ್ತು ಗೋಶಾಲೆ ಅಭಿವೃದ್ಧಿ ಟ್ರಸ್ಟ್ ಬಂದಿದೆ.

ಮಂಗಳವಾರ ತಾಲೂಕಿನ ನರಸಾಪುರ ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿ ಬಡ ಜನರಿಗೆ ಮತ್ತು ಅಲೆಮಾರಿ ಜನಗಳಿಗೆ ಊಟ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಯುವಶಕ್ತಿ ಕರ್ನಾಟಕ ನಿರಾಶ್ರಿತ ಮಕ್ಕಳ ಆಶ್ರಮ ಮತ್ತು ಗೋಶಾಲೆ ಅಭಿವೃದ್ಧಿ ಟ್ರಸ್ಟ್ ವತಿಯಿಂದ ದಾನಿಗಳ ಸಹಯೋಗದಲ್ಲಿ ಅನ್ನದಾನ ಶ್ರಮದಾನ ಕಾರ್ಯಕ್ರಮ ನಡೆಯಿತು. ಸಾಕಷ್ಟು ಜನರ ಹೊಟ್ಟೆ ತುಂಬಿಸಿದ ಖುಷಿಯಲ್ಲಿ ಈ ತಂಡ ಇತ್ತು.

ಕೊರೋನಾ ವೈರಸ್ ತಡೆಗಟ್ಟಲು ಇಡೀ ಭಾರತ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ಕೋಲಾರ ಜಿಲ್ಲೆಯಲ್ಲಿ ನರಸಾಪುರ ಕೈಗಾರಿಕಾ ಪ್ರದೇಶ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳಲ್ಲಿ ಬಡ ಜನರು ಊಟಕ್ಕೆ ಪರದಾಡುವಂತಾಗಿದೆ ಆದ್ದರಿಂದ ತಾಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಇರುವ ಈ ಟ್ರಸ್ಟ್ ವತಿಯಿಂದ ದಾನಿಗಳ ಸಹಯೋಗದಲ್ಲಿ ಪ್ರೇರಣೆಯಿಂದ ಊಟದ ವ್ಯವಸ್ಥೆ ಮತ್ತು ಅವರಿರುವ ಸ್ಥಳಕ್ಕೆ ಆಹಾರ ನೀರು ಪೂರೈಕೆ ಮಾಡಲಾಯಿತು.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

ನರಸಾಪುರದ ಕೈಗಾರಿಕಾ ಪ್ರದೇಶಗಳಲ್ಲಿ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಕಾರ್ಯಗಳು ಇಲ್ಲದೆ ಊಟಕ್ಕೆ ಕಾರ್ಮಿಕರು ಪರದಾಡುತ್ತಿದ್ದಾರೆ. ಹೀಗಾಗಿ ಕಂಪನಿಗಳ ವಾಹನ ಚಾಲಕರು ಹಾಗೂ ಅಲೆಮಾರಿಗಳು. ಬಡಜನರಿಗೆ ಊಟ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಅನುಶ್ರೀ ರವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಓಂ ಶಕ್ತಿ ಮಂಜುನಾಥ್, ನರಸಿಂಹಪ್ಪ. ಸುಗಟೂರು ಮಂಜುನಾಥ್, ಮುರಳಿ ನಾಯಕ್, ಬಾಲು. ಭಾಸ್ಕರ್, ಪವನ್ ಭಾಗವಹಿಸಿದ್ದರು.

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ನೂರರ ಗಡಿ ದಾಟಿದೆ. ಸದ್ಯಕ್ಕೆ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಇರಲಿದೆ‌.

English summary
Yuvashakthi Karnataka Nirashritha Makkala Ashrama matthu goshale trust distributed food to poor people in Kolara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X