• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವ ಪರಿಸರ ದಿನ: ಕೋಲಾರ ಜಿಲ್ಲೆಗೆ 5 ಲಕ್ಷ ಔಷಧಿ ಸಸಿ

|

ಕೋಲಾರ, ಜೂನ್ 4: ''ಕೋಲಾರ ಜಿಲ್ಲೆಗೆ 5 ಲಕ್ಷ ಔಷಧಿ ಗುಣವುಳ್ಳ ಸಸಿಗಳನ್ನು ನೀಡಲಾಗುವುದು. ಸಸಿಗಳನ್ನು ಬೆಳೆಸುವುದರಿಂದ ಪರಿಸರ ಸಂರಕ್ಷಣೆ ಮಾಡಬಹುದು ಹಾಗೂ ವಾತಾವರಣವು ತಂಪಾಗಿರುತ್ತದೆ'' ಎಂದು ಕೋಲಾರ ಜಿಲ್ಲೆಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಸಾಮ ಪ್ರಸನ್ನ ಕುಮಾರ್ ಅವರು ತಿಳಿಸಿದರು

ಕೋಲಾರ ತಾಲ್ಲೂಕು ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಜಿಲ್ಲಾ ಪಂಚಾಯತ್ ಮತ್ತು ಕೋಲಾರ ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಜನತಾ ಜೀವ ಜಾಗೃತಿ ಅಭಿಯಾನ ಕಾರ್ಯಗಾರದ ಆಧ್ಯಕ್ಷತೆಯನ್ನು ವಹಿಸಿ ಪ್ರಸನ್ನ ಅವರು ಮಾತನಾಡಿದರು.

ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ

ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಸಹಾಯಕ ಸಂಶೋಧಕರಾದ ಪ್ರೀತಂ ಮಾತನಾಡಿ, ''ಪ್ರತಿ ವರ್ಷ ಮೇ 22 ರಂದು ಜೀವ ವೈವಿಧ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕೋಲಾರದ ಅಂತರಗಂಗೆಯನ್ನು ಶತಶೃಂಗ ಶ್ರೇಣಿ ಎಂದು ಸಹ ಕರೆಯಲಾಗುತ್ತದೆ. ಈ ಬೆಟ್ಟದಲ್ಲಿ ಆನೇಕ ಗುಹೆಗಳು, ವಿವಿಧ ರೀತಿಯ ಪ್ರಾಣಿ ಸಂಕುಲಗಳು ಹಾಗೂ ಸಸ್ಯ ಸಂಕುಲ ನೆಲಸಿವೆ. ಅಂತರಗಂಗೆ ಬೆಟ್ಟವನ್ನು ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಮುಂದಿನ ದಿನಗಳಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ'' ಎಂದರು.

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವ ವೈವಿಧ್ಯ ಸಮಿತಿಯನ್ನು ರಚಿಸಲಾಗಿದೆ. ಇವರು ಪ್ರತಿ ಗ್ರಾಮದ ವಿಶಿಷ್ಠ ಪ್ರಾಣಿ ಸಂಕುಲ ಹಾಗೂ ಸಸ್ಯ ರಾಶಿಯನ್ನು ಗುರುತಿಸಿ ಅದನ್ನು ಜನತಾ ಜೀವ ದಾಖಲಾತಿಯಲ್ಲಿ ನೋಂದಣಿ ಮಾಡಬೇಕು. ಆ ದಾಖಲೆಗಳು ಅಪರೂಪದ ಪೀಳಿಗೆಗಳನ್ನು ಸಂರಕ್ಷಣೆ ಮಾಡಲು ಸಹಕಾರಿಯಾಗುತ್ತವೆ. ಜಿಲ್ಲೆಯಲ್ಲಿ ಕೃಷ್ಣಮೃಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಇದರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ಕೋಲಾರ; ಭಾರೀ ಮಳೆಗೆ ಮಣ್ಣುಪಾಲಾದ 3 ಲಕ್ಷ ಮೌಲ್ಯದ ಕ್ಯಾಪ್ಸಿಕಂ ಬೆಳೆ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಹರ್ಷವರ್ದನ್ ಅವರು ಮಾತನಾಡಿ, ಮುಳಬಾಗಿಲಿನ ಹನುಮನಹಳ್ಳಿ ಗ್ರಾಮದ ಗುಹೆಗಳಲ್ಲಿ ಎಲೆ ಮೂಗಿನ ಬಾವುಲಿ ಕಂಡುಬಂದಿದೆ. ಇದು ಪ್ರಪಂಚದಲ್ಲಿಯೇ ಅಪರೂಪದ ಪ್ರಾಣಿಯಾಗಿದ್ದು ಇದರ ಸಂರಕ್ಷಣೆ ಮಾಡಲಾಗಿದೆ ಹಾಗೂ ಕೆಂಪು ಹುಣಸೆ (ಸಿಹಿ ಹುಣಸೆ) ಇದನ್ನು ಜಿ ಟ್ಯಾಗ್‍ಗೆ ಶಿಪಾರಸ್ಸು ಮಾಡಬಹುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳು ಸ್ಥಳೀಯ ತಳಿಗಳನ್ನು ಸಂರಕ್ಷಣೆ ಮಾಡಿ ರೈತರು ತಮ್ಮ ಹೊಲಗಳಲ್ಲಿ ಬೆಳೆಯುವಂತೆ ಪ್ರೋತ್ಸಾಹ ನೀಡಬೇಕು. ಇದರಿಂದ ಅದಾಯ ಕೂಡ ಸಿಗುತ್ತದೆ. ಜೀವ ವೈವಿಧ್ಯ ನಿರ್ವಹಣಾ ಸಮಿತಿಯು ಜಿಲ್ಲೆಯಲ್ಲಿ 11 ಗ್ರಾಮಗಳನ್ನು ಸರ್ವೆ ಮಾಡಿದ್ದಾರೆ. ಅದರಲ್ಲಿ 8 ಜೀವ ವೈವಿಧ್ಯಗಳು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳನ್ನು ಸರ್ವೆಗೆ ಒಳಪಡಿಸುತ್ತೇವೆ ಎಂದು ತಿಳಿಸಿದರು.

ಪರಿಸರ ಪ್ರೇಮಿ ತ್ಯಾಗರಾಜು ಅವರು ಮಾತನಾಡಿ ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುವುದರಿಂದ ಭೂಮಿಯ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ ಇದರ ಬದಲು ಜೈವಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. (ಮಾಹಿತಿ ಕೃಪೆ: ವಾರ್ತಾ ಇಲಾಖೆ)

English summary
World Environment Day 2020: 5 Lakh Medicinal Plants will be distributed at Kolar said Kolar biodiversity board president Sama Prasanna Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X