ಆಯತಪ್ಪಿ ಬಿದ್ದು ಕೋಲಾರದಲ್ಲಿ ಕಾರ್ಮಿಕ ಸಾವು
ಕೋಲಾರ, ಏಪ್ರಿಲ್ 30: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕಾರ್ಮಿಕನೊಬ್ಬ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮುಳಬಾಗಿಲು ನಗರದ ನುಗೂಲಬಂಡೆಯಲ್ಲಿ ನಿನ್ನೆ ನಡೆದಿದೆ.
ಮೃತನನ್ನು ನಗರದ ನುಗೂಲಬಂಡೆ ನಿವಾಸಿ ಮೆಹಬೂಬ್ ಪಾಷ (42) ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆ ವೆಲ್ಡರ್ ಬಾಬು ಎಂಬುವರು ಮನೆ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಿದ್ದರು. ಕೊರೊನೊದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಆಗಿದ್ದು, ಅರ್ಧಕ್ಕೆ ಮನೆ ನಿರ್ಮಾಣ ಕಾಮಗಾರಿ ನಿಲ್ಲಿಸಲಾಗಿತ್ತು.

ಕೋಲಾರ ಜಿಲ್ಲೆ ಗ್ರೀನ್ ಝೋನ್ ನಲ್ಲಿ ಇದ್ದು, ನಿನ್ನೆ ಲಾಕ್ ಡೌನ್ ಸಡಿಲಿಕೆ ಆಗಿದೆ. ಆದ್ದರಿಂದ ಮನೆ ಮಾಲೀಕ ಕಾಮಗಾರಿ ಪ್ರಾರಂಭಿಸಿದ್ದು, ಮೆಹಬೂಬ್ ಪಾಷ ಇಟ್ಟಿಗೆ ಸಾಗಿಸುತ್ತಿದ್ದಾಗ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications