ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ತೂರು ಪ್ರಕಾಶ್ ಕಿಡ್ನಾಪ್ ಹಿಂದಿನ ಸ್ಪೋಟಕ ಸತ್ಯ: ಮಗನಿಂದಲೇ ದುಷ್ಕೃತ್ಯ?

|
Google Oneindia Kannada News

ಕೋಲಾರದ ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಕಿಡ್ನಾಪ್ ವಿಚಾರದಲ್ಲಿ ಹೊಸಹೊಸ ಸುದ್ದಿಗಳು ಹೊರಬೀಳುತ್ತಿವೆ. ಕಿಡ್ನಾಪ್ ಮಾಡಿದವರು ಬೆಂಗಳೂರಿನವರಾ ಅಥವಾ ಮುಂಬೈನವರಾ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುತ್ತಿಲ್ಲ.

Recommended Video

Vartur Prakash ಕಿಡ್ನಾಪ್ ಹಿಂದೆ ಮಗನ ಕೈವಾಡ !! | Oneindia Kannada

ಇವೆಲ್ಲದರ ನಡುವೆ ವರ್ತೂರು ಪ್ರಕಾಶ್ ಅವರ ಅಪಹರಣವಾಗಿದ್ದ ಕಾರಿನಲ್ಲಿ ಮಹಿಳೆಯರು ಬಳಸುವ ದುಪ್ಪಟ್ಟಾ ಪತ್ತೆಯಾಗಿರುವುದರಿಂದ, ಇವರ ಕಿಡ್ನಾಪ್ ಹಿಂದೆ ಹನಿಟ್ರ್ಯಾಪ್ ದಂಧೆಯವರು ಇದ್ದಾರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಅಪಹರಣ ಹಿಂದೆ ಮಹಾರಾಷ್ಟ್ರದ ಫಾರಂ ವ್ಯವಹಾರ ಲಿಂಕ್‌ !ಅಪಹರಣ ಹಿಂದೆ ಮಹಾರಾಷ್ಟ್ರದ ಫಾರಂ ವ್ಯವಹಾರ ಲಿಂಕ್‌ !

ಈ ಬಗ್ಗೆ ಸ್ಪಷ್ಟನೆ ನೀಡಿರುವ ವರ್ತೂರು ಪ್ರಕಾಶ್, "ನನ್ನ ಕಾರಿನಲ್ಲಿ ದುಪ್ಪಟ್ಟಾ ಮತ್ತು ಖಾರದ ಪುಡಿ ಇರುವುದು ಕಂಡು ಬಂದಿದೆ. ನನ್ನ ಕಾರು ಕ್ಲೀನ್ ಆಗಿಯೇ ಇತ್ತು. ಮೂರ್ನಾಲ್ಕು ದಿನ ಅಪಹರಣಕಾರರು ಬೇರೆ ಕೃತ್ಯಕ್ಕೆ ಬಳಸಿಕೊಂಡಿರಬಹುದು"ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

 ವರ್ತೂರು ಪ್ರಕಾಶ್ ಅಪಹರಣ; ಪೊಲೀಸರು ಕೊಟ್ಟ ವಿವರ ವರ್ತೂರು ಪ್ರಕಾಶ್ ಅಪಹರಣ; ಪೊಲೀಸರು ಕೊಟ್ಟ ವಿವರ

ಹಸು ಖರೀದಿ ಮತ್ತು ಡೈರಿ ವ್ಯವಹಾರದಲ್ಲಿ, ಸಾಲ ನೀಡಬೇಕಾಗಿದ್ದರಿಂದ, ಮಹಾರಾಷ್ಟ್ರ ಮೂಲದವರು ಬಾಕಿ ಹಣಕ್ಕಾಗಿ ವರ್ತೂರು ಪ್ರಕಾಶ್ ಅವರನ್ನು ಕಿಡ್ನಾಪ್ ಮಾಡಿರುವ ಬಗ್ಗೆಯೂ ಸುದ್ದಿ ಹರಿದಾಡುತ್ತಿತ್ತು. ಆದರೆ, ಪ್ರಕಾಶ್ ಇದನ್ನೂ ನಿರಾಕರಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ, ಇವರ ಮಗನೇ ಕಿಡ್ನಾಪ್ ಹಿಂದಿನ ರೂವಾರಿ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ.

ರಾಜಕೀಯ, ಸಮಾಜಸೇವೆ, ಸಂಘಟನಾತ್ಮಕ ಕೆಲಸಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ

ರಾಜಕೀಯ, ಸಮಾಜಸೇವೆ, ಸಂಘಟನಾತ್ಮಕ ಕೆಲಸಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ

"ನನಗೆ ಯಾರ ಮೇಲೂ ದ್ವೇಷವಿಲ್ಲ, ನನಗೆ ಯಾರೂ ದುಷ್ಮನಿಗಳೂ ಇಲ್ಲ. ರಾಜಕೀಯ, ಸಮಾಜಸೇವೆ, ಸಂಘಟನಾತ್ಮಕ ಕೆಲಸಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ. ನಾನು ಒಂದು ಲಕ್ಷ ರೂಪಾಯಿ ಸಾಲ ಕೂಡಾ ಯಾರಿಂದಲೂ ಪಡೆದಿಲ್ಲ. ಮತ್ತು ಯಾರಿಗೂ ಕೊಡಬೇಕಾಗಿಲ್ಲ, ನಾನು ಯಾವ ವ್ಯವಹಾರವನ್ನೂ ಮಾಡುತ್ತಿಲ್ಲ"ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ. ಆದರೆ..

ವರ್ತೂರು ಪ್ರಕಾಶ್ ಎರಡನೇ ಮದುವೆ

ವರ್ತೂರು ಪ್ರಕಾಶ್ ಎರಡನೇ ಮದುವೆ

ಕೆಲವು ವರ್ಷಗಳ ಹಿಂದೆ ವರ್ತೂರು ಪ್ರಕಾಶ್ ಟೇಕಲ್ ಬಳಿ ಫಾರ್ಮ್ ಹೌಸ್ ಖರೀದಿಸಿದ್ದರು. ಇದರ ಉಸ್ತುವಾರಿಯನ್ನು ನೋಡಿಕೊಳ್ಳಲು ಒಬ್ಬರು ಮಹಿಳೆಯನ್ನು ಇವರು ನೇಮಿಸಿದ್ದರು. ಟೀಚರ್ ಎಂದು ಇವರನ್ನು ಕರೆಯಲಾಗುತ್ತಿತ್ತು. ತದನಂತರ, ಈಕೆಯನ್ನು ವರ್ತೂರು ಪ್ರಕಾಶ್ ಮದುವೆಯಾಗಿದ್ದಾರೆ ಎಂದು ಕನ್ನಡ ದಿನಪತ್ರಿಕೆಯೊಂದು ವರದಿ ಮಾಡಿದೆ.

ಮೊದಲನೇ ಮಗ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿರುವ ಸಾಧ್ಯತೆ

ಮೊದಲನೇ ಮಗ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿರುವ ಸಾಧ್ಯತೆ

ಈ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಅದರಲ್ಲಿ ಮೊದಲನೇ ಮಗ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿರುವ ಸಾಧ್ಯತೆಯಿದೆ. ಪೊಲೀಸರಿಗೂ ಈ ಆಯಾಮದಲ್ಲಿ ಶಂಕೆಯಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೇ, ಚಿಂತಾಮಣಿಯಲ್ಲೂ ವರ್ತೂರು ಪ್ರಕಾಶ್ ಜಮೀನು ಖರೀದಿಸಿ ಇದರ ಹಣವನ್ನೂ ಪಾವತಿ ಮಾಡಿಲ್ಲ ಎಂದು ದಿನಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಬೆಳ್ಳಂದೂರು ಠಾಣೆಯಿಂದ, ಕೋಲಾರ ಗ್ರಾಮಾಂತರ ಠಾಣೆಗೆ ವರ್ಗ

ಬೆಳ್ಳಂದೂರು ಠಾಣೆಯಿಂದ, ಕೋಲಾರ ಗ್ರಾಮಾಂತರ ಠಾಣೆಗೆ ವರ್ಗ

ವರ್ತೂರು ಪ್ರಕಾಶ್ ಹೇಳುವಂತೆ ಕಿಡ್ನಾಪ್ ಮಾಡಿದವರು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಮತ್ತು ಅವರ ತಂಡದ ಮುಖ್ಯಸ್ಥನನ್ನು 'ಬೆಂಗಳೂರು ಬಾಸ್' ಎಂದು ಸಂಭೋದಿಸುತ್ತಿದ್ದರು. ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದು, ಈ ಪ್ರಕರಣವನ್ನು ಬೆಂಗಳೂರಿನ ವೈಟ್ ಫೀಲ್ಡ್ /ಬೆಳ್ಳಂದೂರು ಠಾಣೆಯಿಂದ, ಕೋಲಾರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

English summary
Who Is Behind In Kidnap Of Former Minister And MLA Varthur Prakash, Is His Son Is Involved?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X