• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಾಪ್ ಕೊಡೊ ನೆಪದಲ್ಲಿ ಲೈಂಗಿಕ ಕಿರುಕುಳ: ಹಿಗ್ಗಾಮುಗ್ಗಾ ಥಳಿತ

By ಕೋಲಾರ ಪ್ರತಿನಿಧಿ
|

ಕೋಲಾರ, ಜೂನ್ 4: ಡ್ರಾಪ್ ಕೊಡೊ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಚಾಲಕನಿಗೆ ಮಹಿಳೆ, ಮಗಳು ಹಾಗೂ ಸಾರ್ವಜನಿಕರು ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನಾಗದೇವನಹಳ್ಳಿ ಕಾಡಿನ ಬಳಿ ಘಟನೆ ನಡೆದಿದ್ದು, ಸಾರ್ವಜನಿಕರು ನಡು ರಸ್ತೆಯಲ್ಲೆ ಕಾಮುಕನಿಗೆ ರಕ್ತ ಬರುವಂತೆ ಗೂಸಾ ಕೊಟ್ಟಿದ್ದಾರೆ.

ಮಾವು ಪ್ರಿಯರೇ ಹುಷಾರ್: ಮಾರುಕಟ್ಟೆಗೆ ಬರುತ್ತಿವೆ ಕೃತಕ ಹಣ್ಣುಗಳು

ಶ್ರೀನಿವಾಸಪುರ ತಾಲೂಕಿನ ರೋಣೂರು ಗ್ರಾಮದ ಚಾಲಕ ಗೌಸ್ ಎಂಬಾತನಿಗೆ ಥಳಿಸಲಾಗಿದೆ. ಆಂಧ್ರ ಮೂಲದ ಕೂಲಿ ಕಾರ್ಮಿಕರ ಕುಟುಂಬ ಬೆಂಗಳೂರಿನಿಂದ ಆಂಧ್ರಕ್ಕೆ ಬಸ್ ವ್ಯವಸ್ಥೆ ಇಲ್ಲದಿದ್ದಕ್ಕೆ ನಡೆದುಕೊಂಡು ಹೋಗುವಾಗ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ.

ಬೆಂಗಳೂರಿನಿಂದ ಶ್ರೀನಿವಾಸಪುರಕ್ಕೆ ವಾಪಸ್ಸು ಬರುವಾಗ ಹೊಂಚು ಹಾಕಿದ ಡ್ರೈವರ್ ಗೌಸ್, ನಾನು ಆಂಧ್ರಪ್ರದೇಶದ ಬಾರ್ಡರ್ ವರೆಗೂ ಹೋಗುತ್ತೇನೆ ಬನ್ನಿ ಎಂದು ಪುಸಲಾಯಿಸಿ ಕರೆದುಕೊಂಡು ಬಂದಿದ್ದಾನೆ.

ಚಾಲಕ ಗೌಸ್ ತನ್ನ ಟಾಟಾ ಏಸ್ ಗಾಡಿಯಲ್ಲಿ ಕೋಲಾರ ಗಡಿ ತಾವರೆಕೆರೆ ಬಳಿ ಮಹಿಳೆ ಹಾಗೂ ಮಗಳನ್ನು ಹತ್ತಿಸಿಕೊಂಡು ಮುಂದೆ ಕೂರಿಸಿಕೊಂಡಿದ್ದಾನೆ. ಪ್ಲಾನ್ ಮಾಡಿ ಮಹಿಳೆಯ ಗಂಡನನ್ನು ಹಿಂದೆ ಕೂರಿಸಿ, ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಆಗ ಆ ಮಹಿಳೆಯರೆ ಚಾಲಕನನ್ನು ಥಳಿಸಿದ್ದಾರೆ.

English summary
Sexual harassment On women this incident happened in srinivaspura taluk Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X