ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ರೈತ ಬಜಾರ್‌ ಮೂಲಕ ಟೊಮೇಟೊ ಪೂರೈಕೆ

|
Google Oneindia Kannada News

ಕೋಲಾರ, ಮೇ26: ಕಳೆದೊಂದು ವಾರದಿಂದ ಟೊಮೇಟೊ ಬೆಲೆ ಗಗನಕ್ಕೇರಿದೆ. ಚಿನ್ನದ ಬೆಲೆ ಟೊಮೇಟೊಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಟೊಮೇಟೊ ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಧಿಕಾರಿಗಳು ಕೈಗೆಟಕುವ ದರದಲ್ಲಿ ರೈತ ಬಜಾರ್‌ಗಳ ಮೂಲಕ ಹಣ್ಣುಗಳನ್ನು ಪೂರೈಸಲು ಕ್ರಮ ಕೈಗೊಂಡಿದ್ದಾರೆ.

ಈಗ ಸರಕಾರ ನಡೆಸುವ ರೈತ ಬಜಾರ್‌ಗಳಲ್ಲಿ ಒಂದು ಕೆಜಿ ಟೊಮೇಟೊ 65 ರೂಪಾಯಿಗೆ ಲಭ್ಯವಿದೆ. ಕರ್ನೂಲ್ ಜಿಲ್ಲೆಯ ಹಿಂದಿನ ಮುಕ್ತ ಮಾರುಕಟ್ಟೆಯಲ್ಲಿ ಬುಧವಾರ ಹಣ್ಣು ಕೆಜಿಗೆ 90 ರೂಪಾಯಿಗೆ ಮಾರಾಟವಾಗಿತ್ತು. ಮಂಗಳವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೊ ದರ 130 ರೂಪಾಯಿಗೆ ತಲುಪಿದ್ದು, ರೈತ ಬಜಾರ್‌ಗಳಲ್ಲಿ ಕೆಜಿಗೆ 80 ರೂಪಾಯಿಗೆ ಮಾರಾಟವಾಗಿತ್ತು.

ಸಿ-ಕ್ಯಾಂಪ್ ರೈತ ಬಜಾರ್ ಎಸ್ಟೇಟ್ ಅಧಿಕಾರಿ ಕೆ. ಕಲ್ಯಾಣಿ ಅಧಿಕೃತವಾಗಿ ಟೊಮೇಟೊ ಮಾರಾಟ ಬೆಲೆಯನ್ನು 80 ರೂಪಾಯಿಗಳಿಂದ 65 ರೂಪಾಯಿಗೆ ಇಳಿಸಿದ ನಂತರ ಅಧಿಕೃತವಾಗಿ ಮಾರಾಟ ಪ್ರಾರಂಭಿಸಿದರು. ಅವರು ರಾಜ್ಯ ಸರ್ಕಾರದಿಂದ ಆಮದು ಮಾಡಿಕೊಂಡಿರುವ ಕೋಲಾರದ ಟೊಮೇಟೊಗಳನ್ನು ಮಾರಾಟ ಮಾಡಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿದರು.

Tomato Prices Go Up Measures To Supply Fruit Through Farmers Bazars

"ನಮಗೆ 130 ಟೊಮೇಟೊ ಬಾಕ್ಸ್‌ಗಳು ಬಂದಿದ್ದವು. 25 ಕೆಜಿ ತೂಕದ ಟೊಮೇಟೊ ಬಾಕ್ಸ್‌ಗಳನ್ನು ಬುಧವಾರ ಗ್ರಾಹಕರಿಗೆ ಕೆಜಿಗೆ 65 ರೂಪಾಯಿಗೆ ಸರಬರಾಜು ಮಾಡಲಾಗಿದೆ" ಎಂದು ಕಲ್ಯಾಣಿ ಹೇಳಿದರು. ಆದರೆ, ಮಾರುಕಟ್ಟೆಯಲ್ಲಿ ಪ್ರತಿದಿನ ಕನಿಷ್ಠ 100 ಬಾಕ್ಸ್‌ ಟೊಮೇಟೊ ಅಗತ್ಯವಿದೆ ಎಂದು ಹೇಳುತ್ತಾರೆ.

ಮಾರುಕಟ್ಟೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ಚೌಧರಿ ಮಾತನಾಡಿ, "ಕೋಲಾರದಿಂದ 10 ಟನ್ ಟೊಮೇಟೊ ಬಂದಿದ್ದು, ಅವುಗಳನ್ನು ಕರ್ನೂಲ್ ಮತ್ತು ನಂದ್ಯಾಲ್ ಜಿಲ್ಲೆಗಳ ಎಲ್ಲಾ ರೈತ ಬಜಾರ್‌ಗಳಿಗೆ ವಿತರಿಸಲಾಗಿದೆ. ಹಣ್ಣಿನ ಬೆಲೆಗಳನ್ನು ನಿಯಂತ್ರಿಸುವ ಭಾಗವಾಗಿ ಟೊಮೇಟೊ ಪೂರೈಕೆಯನ್ನು ಮುಂದುವರಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ" ಎಂದು ಹೇಳಿದರು.

Tomato Prices Go Up Measures To Supply Fruit Through Farmers Bazars

65 ರೂಪಾಯಿಗೆ ಗ್ರಾಹಕರಿಗೆ ಮಾರಾಟ; "ಸರ್ಕಾರದ ಮಾರ್ಗಸೂಚಿಯಂತೆ ಕೋಲಾರದ ಟೊಮೇಟೊಗೆ ಕೆಜಿಗೆ 60 ರೂಪಾಯಿ ಖರ್ಚು ಮಾಡುತ್ತಿದ್ದು, ಟೊಮೇಟೊ ಲಭ್ಯತೆಯೊಂದಿಗೆ ಇತರ ಶುಲ್ಕ ಮತ್ತು ವೆಚ್ಚವನ್ನು ಸೇರಿಸಿ ಪ್ರತಿ ಕೆಜಿಗೆ ರೈತ ಬಜಾರ್‌ಗಳ ಮೂಲಕ 65 ರೂಪಾಯಿಗೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ತರಕಾರಿಗಳ ಬೆಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ಕೈಗೊಳ್ಳಬೇಕು" ಎಂದು ಕರ್ನೂಲ್‌ನ ವೈದ್ಯರ ಕಾಲೋನಿ ನಿವಾಸಿ ಕೆ.ಪ್ರತಿಭಾ ಒತ್ತಾಯಿಸಿದರು.

Recommended Video

Rohith Chakrathirta ಅವರನ್ನು ಸಮರ್ಥಿಸುವ ಬರದಲ್ಲಿ BC Nagesh ಎಡವಟ್ಟು | #karnataka | Oneindia Kannada

English summary
Kolar: Tomato price hike; In Kolar officials have taken steps to supply Tomato through raitha bazar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X