• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಬಕಾರಿ ಸಚಿವರ ವಿರುದ್ಧ ಅರ್ಧ ಮೀಸೆ ತೆಗೆಯುವ ಚಾಲೆಂಜ್ ಹಾಕಿದ ಕಾಂಗ್ರೆಸ್ ಮುಖಂಡ

By ಕೋಲಾರ ಪ್ರತಿನಿಧಿ
|

ಕೋಲಾರ, ಜುಲೈ 22: ಅಬಕಾರಿ ಸಚಿವ ನಾಗೇಶ್ ಅವರಿಗೆ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮತ್ತೆ ಚುನಾವಣೆ ಗೆದ್ದು ಬಂದು ಮಂತ್ರಿಯಾಗಲಿ ಎಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ ಉತ್ತನೂರು ಶ್ರೀನಿವಾಸ್ ಸವಾಲು ಹಾಕಿದ್ದಾರೆ.

   ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ | Oneindia Kannada

   ಉತ್ತನೂರು ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ರೀನಿವಾಸ್ ಅವರು, ಸಚಿವರ ವಿರುದ್ಧ ಕಿಡಿಕಾರಿದರು. "ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಗೆದ್ದು ಬಂದರೆ ನಾನು ಅರ್ಧ ಮೀಸೆ ತೆಗೆದು ಇಡೀ ತಾಲ್ಲೂಕು ಓಡಾಡುವೆ. ನಿಮಗೆ ತಾಕತ್ತಿದ್ದರೆ ಚಾಲೆಂಜ್ ಸ್ವೀಕರಿಸಿ" ಎಂದು ಸವಾಲು ಹಾಕಿದರು.

   ಕೋಲಾರ: ಎಂಟಿಬಿ ಆ್ಯಂಡ್ ಟೀಮ್ ಪರ ಸಚಿವ, ಸಂಸದರ ಬ್ಯಾಟಿಂಗ್

   ಕೆಲ ಕಾಂಗ್ರೆಸ್ ಶಾಸಕರು ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ನೈತಿಕತೆ ಪ್ರದರ್ಶಿಸಿದರು. ನೀವು ಕೊಡ ನಿಮ್ಮ ನೈತಿಕತೆ ಪ್ರದರ್ಶನ ಮಾಡಿ. ಮಾಜಿ ಶಾಸಕ ಕೊತ್ತೂರು ಮಂಜುನಾಥ ಹಾಗೂ ಕಾಂಗ್ರೆಸ್ ಮುಖಂಡರಿಂದ ನಾಗೇಶ್ ಶಾಸಕರಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆ ಕ್ಷೇತ್ರ ಪರಿಚಯವಿಲ್ಲದ ನಾಗೇಶ್ ಅವರನ್ನು ಕರೆತಂದು ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯನ್ನಾಗಿ ಮಾಡಿ 8 ದಿನಗಳಲ್ಲಿ ಶಾಸಕರನ್ನಾಗಿ ಮಾಡಲಾಯಿತು.

   ಆದರೆ ಹಣಕ್ಕಾಗಿ ಅಧಿಕಾರಕ್ಕಾಗಿ ಗೆಲ್ಲಿಸಿದ ಪಕ್ಷವನ್ನು ಮರೆತು ಬಿಜೆಪಿ ಹಿಂದೆ ಹೋಗಿ ಮುಳಬಾಗಿಲು ತಾಲೂಕನ್ನು ಹಾಳು ಮಾಡಿದ್ದಾರೆ ಎಂದು ಸಚಿವರ ವಿರುದ್ಧ ಗುಡುಗಿದರು.

   English summary
   Senior Congress leader Uttanuru Srinivas has challenged excise minister Nagesh to resign from his post as an MLA and to win again,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X