ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಖಾತೆಗೆ ಮೋದಿ ಹಣ ಹಾಕಿಲ್ಲ, ನಾವು ಹಾಕುತ್ತೇವೆ: ರಾಹುಲ್ LIVE

|
Google Oneindia Kannada News

ಕೋಲಾರ, ಏಪ್ರಿಲ್ 13: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ರಾಜ್ಯಕ್ಕೆ ಆಗಮಿಸಿದ್ದು, ಕೋಲಾರ, ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.

ಇದೀಗ ಕೋಲಾರಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಅವರು ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಪರ ಪ್ರಚಾರ ಆರಂಭಿಸಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಸ್ಥಳೀಯ ಜೆಡಿಎಸ್ ಮುಖಂಡರು ಸಹ ಭಾಗಿಯಾಗಿದ್ದಾರೆ.

Rahul Gandhi campaign in Karnatakas Kolar

ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಈ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ, ಒಂದು ಕಡೆ ಕೋಮುವಾದಿ ಬಿಜೆಪಿ, ಆರ್‌ಎಸ್‌ಎಸ್‌ ಇದ್ದರೆ ಮತ್ತೊಂದೆಡೆ ಬಡವರ ಪರ ಇರುವ ಕಾಂಗ್ರೆಸ್ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.

Newest FirstOldest First
2:11 PM, 13 Apr

ಕೇಂದ್ರ ಸರ್ಕಾರದ 24 ಲಕ್ಷ ನೌಕರರಿಯನ್ನು ನಾವು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ತುಂಬುತ್ತೇವೆ. ಗ್ರಾಮ ಪಂಚಾಯಿತಿ ಹಂತದಲ್ಲಿ 30 ಲಕ್ಷ ನೌಕರಿಯನ್ನು ನಾವು ಭರ್ತಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
2:11 PM, 13 Apr

ಬೆಂಗಳೂರು ಸ್ಟಾರ್ಟ್‌ ಅಪ್ ಹಬ್, ಆದರೆ ಮೋದಿ ಅವರ ನೀತಿಗಳಿಂದ ಬೆಂಗಳೂರಿನ ಉತ್ಸಾಹಿ ಯುವಕರು ಆತಂಕದಲ್ಲಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದರೆ ಹೊಸ ಉದ್ಯಮ ಸ್ಥಾಪಿಸುವ ಯುಕವರಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುತ್ತೇವೆ, ಯಾವುದೇ ಪರವಾನಗಿ ಇಲ್ಲದೆ ಉದ್ಯಮ ಸ್ಥಾಪಿಸುವ ಅವಕಾಶ ಮಾಡಿಕೊಡುತ್ತೇವೆ.
2:11 PM, 13 Apr

ಭಾರತದ ಬ್ಯಾಂಕುಗಳ ಕೀಲಿ ಕೈ ಯನ್ನು ಅಂಬಾನಿ, ಚೋಕ್ಸಿ, ನೀರವ್ ಮೋದಿ ಅವರ ಕೈಗೆ ಕೊಟ್ಟಿದ್ದಾರೋ ಆ ಕೀಲಿ ಕೈ ಯನ್ನು ನಾವು ಯುಕವರ ಕೈಗೆ ಕೊಡುತ್ತೇವೆ, ಯಾವ ಯುಕವರು ಉದ್ಯೋಗ ಕೊಡುತ್ತಾರೆಯೋ ಅವರಿಗೆ ನಾವು ಪ್ರೋತ್ಸಾಹ ಧನ ಕೊಡುತ್ತೇವೆ, ಬ್ಯಾಂಕುಗಳಿಂದ ಸಾಲ ಕೊಡಿಸುತ್ತೇವೆ ಎಂದು ರಾಹುಲ್ ಹೇಳಿದರು.
2:11 PM, 13 Apr

ರಾಜ್ಯಸಭಾ, ವಿಧಾನಸಭಾ, ಲೋಕಸಭೆಗಳಲ್ಲಿ ಮಹಿಳೆಯರಿಗೆ ೩೩% ಮೀಸಲು ನೀಡುತ್ತೇವೆ, ಮತ್ತು ಮಹಿಳೆಯರಿಗೆ ೩೩% ಮೀಸಲಾತಿ ನೀಡುವ ಕೆಲಸ ತಕ್ಷಣದಲ್ಲಿ ಮಾಡುತ್ತೇವೆ. ಅಷ್ಟೆ ಅಲ್ಲದೆ 'ನ್ಯಾಯ್‌' ಯೋಜನೆಯ ಹಣ ಕುಟುಂಬದ ಮಹಿಳೆಯರ ಖಾತೆಗೆ ಬರುವಂತೆ ಮಾಡುತ್ತೇವೆ ಎಂದು ರಾಹುಲ್ ಅವರು ಮಹಿಳೆಯರ ಕುರಿತಾಗಿ ಹೇಳಿದರು.
2:11 PM, 13 Apr

ಈ ದೇಶ ಪ್ರೀತಿಯಿಂದಾದದ್ದು, ವೈರತ್ವದಿಂದ ಆದದ್ದಲ್ಲ, ಈಗ ದೇಶದಲ್ಲಿ ವೈರತ್ವ ಮತ್ತು ಪ್ರೀತಿಯ ಮಧ್ಯದ ಹೋರಾಟ ನಡೆಯುತ್ತಿದೆ, ಅಂತಿಮ ಗೆಲುವು ಪ್ರೀತಿಯದ್ದೇ ಆಗಿರುತ್ತದೆ, ಚುನಾವಣೆಯಲ್ಲಿ ಗೆಲುವು ಕಾಂಗ್ರೆಸ್ ಮತ್ತು ಜೆಡಿಎಸ್‌ ನದ್ದೇ ಆಗಿರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
1:58 PM, 13 Apr

ಮೋದಿ ಅವರು ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆ ಎಂದು ಸುಳ್ಳು ಹೇಳಿದ್ದರು ಆದರೆ ನಾವದನ್ನು ನಿಜ ಮಾಡುತ್ತೇವೆ. ನಾವು ಭಾರತದ ಬಡವರ ಕುಟುಂಬಕ್ಕೆ ವರ್ಷಕ್ಕೆ 72000 ಹಣ ಖಾತೆಗೆ ಹಾಕುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
1:58 PM, 13 Apr

ಐದು ವರ್ಷದಲ್ಲಿ 15 ಲಕ್ಷ ಹಣ ಹಾಕುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದರು, ಆದರೆ ನಾವು ಮೋದಿ ಹೇಳಿದ್ದ ಸುಳ್ಳನ್ನು ನಿಜ ಮಾಡಲು ನಿಶ್ಚಯಿಸಿದ್ದೇವೆ, ದೇಶದ ಐದು ಕೋಟಿ ಕುಟುಂಬಕ್ಕೆ ನಾವು ವರ್ಷಕ್ಕೆ 3.5 ಲಕ್ಷ ಹಣ ಖಾತೆಗೆ ಹಾಕುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
Advertisement
1:58 PM, 13 Apr

ಇಷ್ಟೊಂದು ಹಣ ಕಾಂಗ್ರೆಸ್ ಎಲ್ಲಿಂದ ತರುತ್ತದೆ ಎಂದು ಮೋದಿ ಕೇಳಿದ್ದಾರೆ. ಮೋದಿ ಅವರೇ ಆ ಹಣವನ್ನು ನಾವು ನಿಮ್ಮ ಗೆಳೆಯ ಅಂಬಾನಿಯ ಜೇಬಿನಿಂದ ತೆಗೆದುಕೊಂಡು ಜನರಿಗೆ ಕೊಡುತ್ತೇವೆ, ನೀವು ಶ್ರೀಮಂತರಿಗೆ ಮಾಡಿರುವ ಸಾಲಮನ್ನಾವನ್ನು ನಾವು ವಾಪಸ್ ಪಡೆಯುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
1:58 PM, 13 Apr

ಸಾಲದ ವಿಷಯದಲ್ಲಿ ಯಾವುದೇ ರೈತ ಜೈಲಿಗೆ ಹೋಗದಂತಹಾ ಹೊಸ ಕಾನೂನನ್ನು ನಾವು ತರುತ್ತೇವೆ ಎಂದ ರಾಹುಲ್ ಗಾಂಧಿ ರೈತರಿಗಾಗಿ ಇನ್ನೂ ಹಲವು ಭರವಸೆಗಳನ್ನು ರಾಹುಲ್ ಗಾಂಧಿ ನೀಡಿದರು.
1:58 PM, 13 Apr

ಮೋದಿ ಅವರೇ ದೇಶದ ಯುವಜನರಿಗೆ ಉದ್ಯೋಗ ನೀಡಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ದೇಶಕ್ಕೆ ಹೇಳಬೇಕು, ಪ್ರತಿ ದಿನ ದೇಶದ ಸಹಸ್ರಾರು ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಹೇಳಿದರು.
1:58 PM, 13 Apr

ನಾವು ಈ ಚುನಾವಣೆ ಗೆದ್ದಕೂಡಲೆ ನಾವು ರೈತರಿಗೆ ವಿಶೇಷ ಬಜೆಟ್ ಅನ್ನು ಮಂಡಿಸಲಿದ್ದೇವೆ, ಸಾಮಾನ್ಯ ಬಜೆಟ್ ಜೊತೆಗೆ ರೈತರಿಗಾಗಿ ವಿಶೇಷ ಬಜೆಟ್ ಅನ್ನು ನಾವು ಮಂಡಿಸುತ್ತೇವೆ, ನಮ್ಮ ಸರ್ಕಾರ ರೈತರಿಗೆ ಏನು ಮಾಡುತ್ತದೆ ಎಂಬುದು ರೈತರಿಗೆ ಅರಿವಾಗಲಿದೆ.

English summary
Rahul Gandi campaigning in Kolar for candidate KH Munayappa. He said Modi lied to India about putting money to account but we will deliver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X