ಅಭಿವೃದ್ಧಿಗೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಕೋಲಾರದಲ್ಲಿ ಪ್ರಗತಿಪರರ ಪ್ರತಿಭಟನೆ
ಕೋಲಾರ, ಡಿಸೆಂಬರ್ 16: ಕೋಲಾರ ಜಿಲ್ಲಾ ಕೇಂದ್ರವಾದರೂ ಇಲ್ಲಿನ ಅವ್ಯವಸ್ಥೆಗಳನ್ನ ನೋಡಿದರೆ ಯಾವ ಹಿಂದುಳಿದ ಗ್ರಾಮಕ್ಕೂ ಕಡಿಮೆ ಇಲ್ಲ ಎನ್ನುವಂತಹ ಸ್ಥಿತಿ ಇದೆ. ರಾಜಧಾನಿ ಬೆಂಗಳೂರಿಗೆ ಕೇವಲ ಕೂಗಳತೆ ದೂರದಲ್ಲಿದ್ದರೂ ಅಭಿವೃದ್ದಿ ಎನ್ನುವುದು ಇಲ್ಲಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ನಡೆ ಜನರನ್ನು ಹೋರಾಟಕ್ಕಿಳಿಯುವಂತೆ ಮಾಡಿದೆ.
ಕೋಲಾರ ಜಿಲ್ಲಾ ಕೇಂದ್ರವನ್ನು ನೋಡಿದರೆ ಇದೊಂದು ಅಭಿವೃದ್ದಿ ಹೊಂದದ ಪ್ರದೇಶದಂತೆ ಭಾಸವಾಗುತ್ತದೆ. ಕೋಲಾರ ಎಂದರೆ, ಸರ್ಕಾರ, ಜನಪ್ರತಿನಿಧಿಗಳಿಗೂ ನಿರ್ಲಕ್ಷ್ಯ. ಹೀಗಾಗಿ ನಗರದ ರಸ್ತೆ, ವಿದ್ಯುತ್ ದೀಪ, ಕಸ, ಬೀದಿ ನಾಯಿಗಳ ಹಾವಳಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಶುಕ್ರವಾರ ಪ್ರಗತಿ ಪರ ಸಂಗಟನೆಗಳು ಬಂದ್ ಕರೆ ನೀಡಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.
ಮಾಂಡೌಸ್ ಸೈಕ್ಲೋನ್ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರ ಶಾಲಾ-ಕಾಲೇಜಿಗೆ ಒಂದು ದಿನ ರಜೆ t
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿದ್ದು ಕೋಲಾರದಲ್ಲಿ ಯಾವೊಬ್ಬ ಶಾಸಕರು ಕೂಡಾ ಬಿಜೆಪಿಯಿಂದ ಆಯ್ಕೆಯಾಗಿಲ್ಲ. ಪರಿಣಾಮ ಬಿಜೆಪಿ ಸರ್ಕಾರಕ್ಕೂ ಜಿಲ್ಲೆಯ ಅಭಿವೃದ್ದಿ ಬಗ್ಗೆ ಕಾಳಜಿ ಇಲ್ಲ, ಇನ್ನು ವಿರೋಧ ಪಕ್ಷದಲ್ಲಿರುವ ಶಾಸಕರುಗಳು ಕೂಡಾ ಜಿಲ್ಲೆಯ ಅಭಿವೃದ್ದಿ ಬಗ್ಗೆ ಆಡಳಿತಾರೂಡ ಸರ್ಕಾರವನ್ನು ಕೇಳುವ ಗೋಜಿಗೆ ಹೋಗಿಲ್ಲ ಹಾಗಾಗಿ ಜಿಲ್ಲೆಯ ಜನರು ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ ಎನ್ನುವುದು ಸ್ಥಳೀಯರ ಅಸಮಾಧಾನವಾಗಿದೆ.

ಹೀಗಾಗಿ ಜಿಲ್ಲೆಯ ಜನರು ಜನಪ್ರತಿನಿಧಿಗಳ ಮೇಲೆ ಇರುವ ನಿರೀಕ್ಷೆಯನ್ನು ಬದಿಗಿಟ್ಟು ನೇರವಾಗಿ ಸರ್ಕಾರದ ಗಮನ ಸೆಳೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಶುಕ್ರವಾರ ಮುಂಜಾನೆಯಿಂದ ಬೀದಿಗಿಳಿದು ಪ್ರತಿಭಟನೆ ಮಾಡಿ ನಗರದ ಅಭಿವೃದ್ಧಿಯತ್ತ ಗಮನ ಹರಿಸುವಂತೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಇನ್ನು ರಸ್ತೆ ಬೀದಿ ದೀಪ, ಕಸ ವಿಲೇವಾರಿ, ಬೀದಿ ನಾಯಿ ಹಾವಳಿ ಕೇವಲ ಕೋಲಾರ ನಗರವಷ್ಟೇ ಅಲ್ಲಾ ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಇದೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತವನ್ನು ಎಚ್ಚರಿಸಿದರು ಬೇಡಿಕೆಗಳನ್ನು ಈಡೇರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೆಳಗ್ಗೆ 6 ಗಂಟೆಯಿಂದಲೇ ರಸ್ತೆಗಿಳಿದ ಹೋರಾಟಗಾರರು ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕೆಲವು ಶಾಲಾ ಬಸ್ ಹಾಗೂ ಆಟೋಗಳನ್ನು ತಡೆದ ಪ್ರತಿಭಟನಾಕಾರರು ಬಲವಂತವಾಗಿ ಬಂದ್ ಆಚರಣೆಗೆ ಮುಂದಾಗಿದರು.
ಇನ್ನು ಬಂದ್ ಹಿನ್ನೆಲೆಯಲ್ಲಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದರೆ, ಆಟೋ, ಬಸ್ ಸಂಚಾರ ಎಂದಿನಂತೆ ಸಂಚಾರ ನಡೆಸಿವೆ. ಇನ್ನು ಅಂಗಡಿಮುಂಗಟ್ಟು, ಹೋಟೆಲ್, ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದರು. ನಗರದ ಸಾರಿಗೆ ಡಿಪೋ ಎದುರು ಬಸ್‌ಗಳನ್ನು ಬಿಡದಂತೆ ಪ್ರತಿಭಟನಾಕಾರರು ಅಡ್ಡಿಪಡಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಕೋಲಾರ ಎಸ್‌ಪಿ ಡಿ.ದೇವರಾಜ್ ಖಡಕ್ ಎಚ್ಚರಿಕೆ ನೀಡಿದರು. ಇನ್ನು ಮುನ್ನಚ್ಚರಿಕಾ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದೆ.












Click it and Unblock the Notifications