• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರ: ಕಸ ವಿಲೇವಾರಿ ನಿರ್ಲಕ್ಷ್ಯ; ನಾಲ್ವರ ತಲೆದಂಡ

By ಕೋಲಾರ ಪ್ರತಿನಿಧಿ
|

ಕೋಲಾರ, ಜನವರಿ 21: ಕೋಲಾರ ನಗರಸಭೆಯ ಇಬ್ಬರು ಹೆಲ್ತ್ ಇನ್ಸ್ ಪೆಕ್ಟರ್ ಹಾಗೂ ಇಬ್ಬರು ಪೌರ ಕಾರ್ಮಿಕರನ್ನು ಅಮಾನತುಗೊಳಿಸಿದ್ದು, ಅಲ್ಲದೆ ಪೌರಾಯುಕ್ತ ಹಾಗೂ ಪರಿಸರ ಅಭಿಯಂತರರ ವರ್ಗಾವಣೆಗೂ ಸರ್ಕಾರಕ್ಕೆ ಕೋಲಾರ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.

ಕೋಲಾರ; ವಿಸ್ಟ್ರಾನ್‌ನಲ್ಲಿ ಕೆಲಸ ಪಡೆಯಲು ಹೊಸ ಷರತ್ತು! ಕೋಲಾರ; ವಿಸ್ಟ್ರಾನ್‌ನಲ್ಲಿ ಕೆಲಸ ಪಡೆಯಲು ಹೊಸ ಷರತ್ತು!

ಕೋಲಾರ ನಗರಸಭೆಯ ಪೌರಾಯುಕ್ತ ಶ್ರೀಕಾಂತ್, ಪರಿಸರ ಅಭಿಯಂತರ ಪುನೀತ್ ಅವರನ್ನು ವರ್ಗಾವಣೆ ಮಾಡಲು ಪೌರಾಡಳಿತ ನಿರ್ದೇಶಕರಿಗೆ ಪತ್ರ ರವಾನಿಸಲಾಗಿದೆ. ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ, ವಾರ್ಡ್ ಗಳಲ್ಲಿ ಕಸ ವಿಲೇವಾರಿ ನಿರ್ಲಕ್ಷ್ಯ ಹಿನ್ನಲೆಯಲ್ಲಿ ನಾಲ್ವರನ್ನು ಅಮಾನತ್ತು ಮಾಡಲಾಗಿದೆ.

ಎನ್.ದೀಪ, ಪೃಥ್ವಿರಾಜ್ ಅಮಾನತ್ ಆದ ಕಿರಿಯ ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ದು, ವಿ.ಮೋಹನ್, ವಿ.ಕುಮಾರ್ ಅಮಾನತ್ತಾದ ಪೌರ ಕಾರ್ಮಿಕರಾಗಿದ್ದಾರೆ. ವಿ.ಮೋಹನ್ ಹಾಗೂ ವಿ.ಕುಮಾರ್ ಅವರು ಪ್ರಭಾರ ಮೇಸ್ತ್ರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಾಲ್ವರನ್ನು ಅಮಾನತ್ತು ಮಾಡಿ, ಇಬ್ಬರನ್ನು ವರ್ಗಾವಣೆ ಮಾಡುವಂತೆ ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ಆದೇಶ ಹೊರಡಿಸಿದ್ದಾರೆ.

   ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada

   ಜಿಲ್ಲಾಧಿಕಾರಿ ಸತ್ಯಭಾಮ ಅವರು ನಗರ ಸಂಚಾರ ಮಾಡಿದಾಗ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯತೆ ಕಂಡು ಬಂದಿತ್ತು. ನಗರದಲ್ಲಿ ತ್ಯಾಜ್ಯ ವಿಲೇವಾರಿ ಇಲ್ಲದೆ ಗಬ್ಬು ನಾರುತ್ತಿದ್ದುದು ಕಂಡು ಬಂದಿದೆ. ತಕ್ಷಣ ನಾಲ್ವರನ್ನು ಸೇವೆಯಿಂದ ಅಮಾನತ್ತು ಮಾಡಿ, ಇಲಾಖಾ ವಿಚಾರಣೆಗೆ ಡಿಸಿ ಆದೇಶಿಸಿದರು. ವ್ಯಾಪಾರಸ್ಥರು ಹಾಗೂ ಜಿಲ್ಲಾಧಿಕಾರಿ ನಡುವೆ ಈ ಹಿಂದೆ ಮಾತಿನ ಚಕಮಕಿಯೂ ನಡೆದಿತ್ತು.

   English summary
   Two health inspectors and two workers from Kolar Municipality have been suspended for neglecting garbage disposal.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X