ಕೋಲಾರ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಗುಮಾಸ್ತನಿಗೆ ಧರ್ಮದೇಟು
ಕೋಲಾರ, ಜೂನ್ 12: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಗುಮಾಸ್ತನಿಗೆ ಧರ್ಮದೇಟು ನೀಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎಪಿಎಂಸಿ ಕಚೇರಿಯಲ್ಲಿ ನಡೆದಿದೆ.
Recommended Video
ಇವರಿಗೇ ಪರಿಷತ್ ಸ್ಥಾನ ಕೊಡಬೇಕು ಎಂದ ಸಚಿವ ಎಸ್.ಟಿ ಸೋಮಶೇಖರ್ | ST Somashekar | Oneindia Kannada
ಮಹಿಳಾ ಸಹೋದ್ಯೋಗಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಗುಮಾಸ್ತ ಜಗನ್ನಾಥ್ ವಿರುದ್ಧ ಆರೋಪಿಸಲಾಗಿದ್ದು, ಆರೋಪಿ ಜಗನ್ನಾಥ್ ಮೇಲೆ ಎಪಿಎಂಸಿ ಅಧ್ಯಕ್ಷ ರಾಜೇಂದ್ರರಿಗೆ ಮಹಿಳೆ ದೂರು ನೀಡಿದ್ದಾಳೆ.
ದೂರಿನ ಸಂಬಂಧ ಮಹಿಳೆಯ ಪೋಷಕರಿಂದ ವಿಚಾರಿಸುತ್ತಿರುವಾಗ ಧರ್ಮದೇಟು ನೀಡಲಾಗಿದೆ. ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಎದುರೇ ಜಗನ್ನಾಥ್ ಗೆ ಮಹಿಳೆ ಕಡೆಯ ಪೋಷಕರು ಥಳಿಸಿದ್ದಾರೆ.

ಎಪಿಎಂಸಿ ಕಚೇರಿಯಲ್ಲಿಯೇ ಗುಮಾಸ್ತನನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಮೂರು ದಿನಗಳ ಹಿಂದೆ ನಡೆದದ್ದು ಎನ್ನಲಾಗಿದೆ. ಅಸಭ್ಯ ವರ್ತನೆ ತೋರಿದ ಗುಮಾಸ್ತ ಜಗನ್ನಾಥ್ ಅವರನ್ನು ಎಪಿಎಂಸಿ ಕಚೇರಿಯಿಂದ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ.












Click it and Unblock the Notifications